ವಿದ್ಯಾಪೋಷಕ್‌ನ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರ

KannadaprabhaNewsNetwork |  
Published : Mar 24, 2025, 12:34 AM IST
22ವಿದ್ಯಾ | Kannada Prabha

ಸಾರಾಂಶ

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ವಿದ್ಯಾಪೋಷಕ್‌ನ ದ್ವಿತಿಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಸಮಾಲೋಚನ ಶಿಬಿರವು ಶನಿವಾರ ಜರಗಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ವಿದ್ಯಾಪೋಷಕ್‌ನ ದ್ವಿತಿಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಸಮಾಲೋಚನ ಶಿಬಿರವು ಶನಿವಾರ ಜರಗಿತು.

ಅದಮಾರು ಎಜುಕೇಶನಲ್ ಕೌನ್ಸಿಲ್‌ನ ಗೌರವ ಆಡಳಿತಾಧಿಕಾರಿಗಳಾದ ಡಾ. ಎ. ಪಿ. ಭಟ್ ಹಾಗೂ ಸಂಸ್ಥೆಯ ಕೋಶಾಧಿಕಾರಿಯಾದ ಪ್ರೊ. ಕೆ. ಸದಾಶಿವ ರಾವ್ ಅವರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಖ್ಯಾತ ಲೆಕ್ಕಪರಿಶೋಧಕ ಗಿರಿಧರ್ ಕಾಮತ್ ಅವರು ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ಬಗ್ಗೆಯೂ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ತ್ರಿಶಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹರಿಪ್ರಸಾದ್ ಅವರು ಸಿಇಟಿ ಬಗ್ಗೆ ತಿಳಿಸಿದರು. ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ನೀಡಲು ಕೆನರಾಬ್ಯಾಂಕ್‌ನ ಅಧಿಕಾರಿಗಳಾದ ವಿದ್ಯಾಶ್ರೀ ಭಾಗವಹಿಸಿದ್ದರು.

ಈ ಸಂದರ್ಭ ದಾನಿಗಳಾದ ಅಮೆರಿಕಾದ ಎಸ್. ವಿ. ಆಚಾರ್ಯ, ಶ್ರೀಮತಿ ನಿರ್ಮಲಾ ಆಚಾರ್ಯ ಅವರನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಗಣಪತಿ ಭಟ್ ಉಪಸ್ಥಿತರಿದ್ದರು. 175 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌