ಕನ್ನಡಪ್ರಭ ವಾರ್ತೆ ಜೇವರ್ಗಿ
ಪಟ್ಟಣದ ಸೇಂಟ್ ಜಾನ್ಸ್ ಹಿರಿಯ ಪ್ರಾಥಮಿಕ ಶಾಲೆಯ 25ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ತರವಾಗಿದೆ. ಆನಿಟ್ಟಿನಲ್ಲಿ ಸೇಂಟ್ ಜಾನ್ಸ್ ಶಾಲಾ ಸಂಸ್ಥೆಯೂ ಕೂಡಾ ಪರಿಶ್ರಮ ಪಡುತ್ತಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.ಕಾರ‍್ಯಕ್ರಮದಲ್ಲಿ ಯನಗುಂಟಿಯ ಮಂಗಲಸಿಂಗ್ ಬೆಂಕಿತಾತ, ತಹಸೀಲ್ದಾರ ಮಲ್ಲಣ್ಣ ಯಲಗೋಡ, ರಾಜಶೇಖರ ಸೀರಿ, ರೇವಣಸಿದ್ದಪ್ಪ ಸಂಕಾಲಿ, ಎಸ್.ಟಿ.ಬಿರೆದಾರ, ಮಧುಗೌಡ ಗುರೆಡ್ಡಿ, ಬಿ.ಆರ್.ಪಾಟೀಲ್, ಭಾರತಿ ಪಾಟೀಲ್, ಪ್ರೀತಿ ಮಾಲಿಪಾಟೀಲ್, ಭಗವಂತರಾಯ ಪಾಟೀಲ್, ಸುರೇಶ ಹಿರೇಮಠ ಸೇರಿದಂತೆ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.