ಬಿಕೆ ಹರಿಪ್ರಸಾದ್‌ಗೆ ಈಡಿಗರ ಸಂಘದ ಅಭಿನಂದನೆ

KannadaprabhaNewsNetwork |  
Published : Jun 06, 2026, 01:45 AM IST
್ಿ್ಿ್ಿ | Kannada Prabha

ಸಾರಾಂಶ

ಈಡಿಗ ಸಮಾಜದ ಬಿ.ಕೆ. ಹರಿಪ್ರಸಾದ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಅವರಿಗೆ ಶುಭಕೋರಿದರು.

ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕವಾದ ಈಡಿಗ ಸಮಾಜದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಜಿಲ್ಲಾ ಆರ್ಯ ಈಡಿಗ ಸಂಘದ ಮುಖಂಡರು ಅಭಿನಂದಿಸಿದ್ದಾರೆ. ಇವರನ್ನುಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಹಕರಿಸಿದ ಪಕ್ಷದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.ಜಿಲ್ಲಾ ಆರ್ಯಈಡಿಗರ ಸಂಘದ ಅಧ್ಯಕ್ಷ ಎಂ. ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆದು, ಈಡಿಗ ಸಮಾಜದ ಬಿ.ಕೆ. ಹರಿಪ್ರಸಾದ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಅವರಿಗೆ ಶುಭಕೋರಿದರು.ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಬಿ.ಕೆ. ಹರಿಪ್ರಸಾದ್‌ಅವರಿಗೆ ಪಕ್ಷ ಸೂಕ್ತ ಸ್ಥಾನ ನೀಡಿದೆ, ಆ ಜವಾಬ್ದಾರಿಯನ್ನುಅವರು ಸಮರ್ಥವಾಗಿ ನಿಭಾಯಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈಗಿನ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಿದ್ದರು. ಆ ಸಂದರ್ಭವನ್ನು ಸ್ಮರಿಸಿಕೊಂಡು ಡಿ.ಕೆ.ಶಿವಕುಮಾರ್ ಅವರು ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಹಾಗೂ ನಮ್ಮಈಡಿಗ ಸಮಾಜದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.ಸಂಘದ ಗೌರವಾಧ್ಯಕ್ಷ ಕೆ.ವಿ. ಅಜಯ್‌ಕುಮಾರ್, ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ, ಎಂ.ಎನ್. ನರಸಿಂಹಮೂರ್ತಿ, ಖಜಾಂಚಿ ಹೆಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಸಿ.ನಾರಾಯಣ್, ಓ.ಎಲ್. ಪುರುಷೋತ್ತಮ್, ನಿರ್ದೇಶಕರಾದರವೀಂದ್ರಕುಮಾರ್, ಎಸ್. ಆಂಜನೇಯುಲು, ಟಿ.ಎನ್. ದಾಕ್ಷಾಯಿಣಿ, ಗೌರಮ್ಮ ಶಾಂತಕುಮಾರ್, ಎನ್. ಮಂಜುನಾಥ್, ಎ.ಎನ್. ಮಂಜುನಾಥ್, ಟಿ.ಎಸ್. ನಾರಾಯಣಸ್ವಾಮಿ ಮತ್ತಿತರರು ಬಿ.ಕೆ. ಹರಿಪ್ರಸಾದ್‌ಅವರನ್ನು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ಅಹಮದ್‌ಗೆ ಡಿಸಿಎಂ ಸ್ಥಾನ ನೀಡಿ
ಎಸ್‌ಐಆರ್‌ಗೆ ಸಾರ್ವಜನಿಕರು ಸಹಕರಿಸಿ: ರುದ್ರೇಶ್ ಕೆ.