ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ

KannadaprabhaNewsNetwork |  
Published : Mar 09, 2026, 03:00 AM IST
ವಿಜಯಪುರ | Kannada Prabha

ಸಾರಾಂಶ

ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಮಹಾನಗರ ಪಾಲಿಕೆಯ ವಾರ್ಡ್‌ ನಂ.4ರ ಸದಸ್ಯ ರಾಜು ಚವ್ಹಾಣ ಭರವಸೆ ನೀಡಿದರು.

ಕನ್ನಡ ಪ್ರಭ ವಾರ್ತೆ ವಿಜಯಪುರ

ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಮಹಾನಗರ ಪಾಲಿಕೆಯ ವಾರ್ಡ್‌ ನಂ.4ರ ಸದಸ್ಯ ರಾಜು ಚವ್ಹಾಣ ಭರವಸೆ ನೀಡಿದರು.

ನಗರದ ಸೋಲಾಪುರ ರಸ್ತೆಯಲ್ಲಿರುವ ಡಾ.ಎಂ.ಬಿ.ಪಾಟೀಲ ನಗರದ ಸಿ ಬ್ಲಾಕ್‌ನ ಬಡಾವಣೆಯಲ್ಲಿರುವ ಉದ್ಯಾನದಲ್ಲಿ ಲಯನ್ಸ್‌ ಕ್ಲಬ್‌ ಆಫ್ ಬಿಜಾಪುರ ಪರಿವಾರದ ವತಿಯಿಂದ ಏರ್ಪಡಿಸಲಾಗಿದ್ದ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಎಂ.ಬಿ.ಪಾಟೀಲ ನಗರದ ಸಿ ಬಡಾವಣೆಯ ಅಭಿವೃದ್ಧಿಗಾಗಿ ಈಗಾಗಲೇ ಲೈಟ್, ಕಾಂಕ್ರಿಟ್‌ ರಸ್ತೆ, ಒಳ ಚರಂಡಿ, ಉದ್ಯಾನ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಆಟದ ಮೈದಾನ, ಜಿಮ್, ಹೈಮಾಸ್ಕ್‌ ಲೈಟ್‌ಗಳನ್ನು ಅಳವಡಿಸುವುದು, ಬೀದಿ ದೀಪ, ಹಬ್ಬಿಕೊಂಡಿರುವ ಗಿಡ-ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವುದು, ಮುಖ್ಯ ದ್ವಾರದಲ್ಲಿ ನಾಮಫಲಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಉದ್ಘಾಟಿಸಿ ಮಾತನಾಡಿ, ಪರಿಸರವನ್ನು ಹಸಿರಾಗಿಸುವ ಮತ್ತು ಲಯನ್ಸ್‌ ಪರಿವಾರದ ಇನ್ನಿತರ ಸಮಾಜಮುಖಿ ಚಟುವಟಿಗಳು ಪ್ರಶಂಸನೀಯ. ಇಂತಹ ಕಾರ್ಯ ಚಟುವಟಿಕೆಗಳಿಂದ ಪರಿಸರದಲ್ಲಿ ಸುಂದರತೆಯ ಜೋತೆಗೆ ಸ್ವಚ್ಛತೆ ಉಂಟಾಗುವುದು. ಇದರಿಂದ ಬಡಾವಣೆಯ ಜನರು ನೆಮ್ಮದಿ ಮತ್ತು ಸಂತೋಷದಿಂದ ಜೀವನ ನಡೆಸಲು ಸಾಧ್ಯ. ಇದಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಮತ್ತು ಬಡಾವಣೆಯ ಜನರಿಗೆ ಬೇಕಾಗುವ ಇನ್ನಿತರ ಸೌಕರ್ಯಗಳನ್ನು ತಮ್ಮ ಅವಧಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈಡೇರಿಸುವೆ ಎಂದು ತಿಳಿಸಿ ಲಯನ್ಸ್‌ ಪರಿವಾರದವರು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಈ ಬಡಾವಣೆಯಲ್ಲಿ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು.ಶ್ರೀ ತುಳಸಿಗಿರೀಶ ಫೌಂಡೇಶನ್ ಸಂಸ್ಥಾಪಕ ಹಾಗೂ ಖ್ಯಾತ ಮದುಮೇಹ ತಜ್ಞ ಡಾ.ಬಾಬುರಾಜೇಂದ್ರ ಬಿ.ನಾಯಿಕ ಮಾತನಾಡಿ, ನಮ್ಮ ಜೀವನದಲ್ಲಿ ತಾಪ, ಕೋಪ ಮಾಡಿಕೊಳ್ಳದೇ ನೆಮ್ಮದಿ ಮತ್ತು ಉಲ್ಲಾಸಿತರಾಗಿ ಇರಬೇಕಾದರೇ ಪರಿಸರವನ್ನು ಹಸಿರಾಗಿಸಿ. ತಾಪಮಾನ ಕಡಿಮೆ ಮಾಡಬೇಕು, ಕಲುಷಿತ ವಾತಾವರಣದಿಂದ ತಮ್ಮ ಆರೋಗ್ಯ ಕೆಡಿಸಿಕೊಂಡು ಬಳಲುವ ಬದಲು ಪ್ರತಿಯೊಬ್ಬರೂ ವರ್ಷಕ್ಕೊಂದಾದರೂ ಸಸಿಗಳನ್ನು ಹಚ್ಚಿ ಸಂರಕ್ಷಿಸಬೇಕು. ಕೊನೇ ಪಕ್ಷ ತಮ್ಮ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಬೇಕು. ಇದರಿಂದ ಸಮಾಜಕ್ಕೆ ಉಪಯೋಗ ಆಗಬೇಕು ಎಂಬ ಕೀವಿಮಾತನ್ನು ಹೇಳಿದರು.ಮಹಾನಗರ ಪಾಲಿಕೆಯ ವಲಯ ಆಯುಕ್ತ ಚಿತ್ತರಗಿ, ಅರಣ್ಯಾಧಿಕಾರಿ ಸಂತೋಷ ಆಜುರೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ವೀಣಾ ವಿಜಯಕುಮಾರ ರಾಠೋಡ ಮಾತನಾಡಿದರು.ಪರಿವಾರದ ಅಧ್ಯಕ್ಷ ಚಿದಾನಂದ ನಿಂಬಾಳ ಅಧ್ಯಕ್ಷೀಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಡಾವಣೆಯ ಮುಖ್ಯಸ್ಥರಾದ ಹಣಮಂತ ಕುಡಚಿ, ಸುಭಾಸ ಚವ್ಹಾಣ ಇವರುಗಳು ಬಡಾವಣೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇನ್ನಿತರ ಸದಸ್ಯರೊಂದಿಗೆ ಕೂಡಿ ಮನವಿ ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷರಿಗೆ ಮತ್ತು ಪಾಲಿಕೆಯ ಸದಸ್ಯರಿಗೆ ಸಲ್ಲಿಸಿದರು.ವೇದಿಕೆಯ ಮೇಲೆ ಪರಿವಾರದ ಅಧ್ಯಕ್ಷ ಚಿದಾನಂದ ನಿಂಬಾಳ, ಕಾರ್ಯದರ್ಶಿ ವಿದ್ಯಾ ಕೊಟೆನ್ನವರ, ಖಜಾಂಚಿ ಪುಷ್ಪಾ ಮಹಾಂತಮಠ, ಬಡಾವಣೆಯ ಹಿರಿಯರು ಹಾಗೂ ನಿವೃತ್ತ ಶಿಕ್ಷಕ ಬಾಬಾಸಾಹೇಬ ಮದಭಾಂವಿ, ಲಯನ್ಸ್‌ ಪರಿವಾರದ ಸಂಸ್ಥಾಪಕ ಡಾ.ಅಶೋಕಕುಮಾರ ಜಾಧವ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಬಡಾವಣೆಯ ಮತ್ತು ಲಯನ್ಸ್‌ ಪರಿವಾರದ ಸದಸ್ಯರುಗಳಾದ ಪ್ರೊ.ಎಸ್‌.ಎಸ್‌.ರಾಜಮಾನ್ಯ, ಕ.ರ.ವೇ ನಗರ ಘಟಕದ ಅಧ್ಯಕ್ಷ ಫಯಾಜ್‌ ಕಲಾದಗಿ, ವೇದಾಂತ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್‌.ಜಿ.ಮಠ, ಡಾ.ಗಿರೀಶ ಕುಲ್ಲೋಳ್ಳಿ, ಲಕ್ಷ್ಮೀ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಂತೋಷ ರಾಠೋಡ, ತ್ರೀಯಾರ್‌ ರಜಪೂತ, ಬಡಾವಣೆಯ ಮುಖ್ಯ ಸಂಚಾಲಕ ಹಣಮಂತ ಕುಡಚಿ, ಸುಭಾಸ ಚವ್ಹಾಣ, ಸಿದ್ರಾಮ ಪುಜಾರಿ, ವಾಲು ಚವ್ಹಾಣ, ಸೋಮಶೇಖರ ರಾಠೋಡ, ಡಾ. ಆನಂದ ಹಿರೇಮಠ, ಸಂತೋಷ ಗೋಠೆ, ವಿ.ಎಸ.ಬಿರಾದಾರ, ಸಿದ್ರಾಮ ಕೊಲುರಗಿ, ಶಿವಾನಂದ ಬಿರಾದಾರ, ಶಾಂತಾ ಉತ್ಲಾಸರ, ಡಾ.ರಷ್ಮೀ ಚಿತ್ತವಾಡಗಿ, ರಜನಿ ಸಂಬಣ್ಣಿ, ಅನಿತಾ ಕುಮಸಿ, ಇಂದುಮತಿ ಕನ್ನೂರ, ಪ್ರೊ.ಭಾರತಿ ಜೀರಗ್ಯಾಳ, ಛಾಯಾ ಮಸಿಯನವರ, ಶೈಲಾ ಬಸವಪ್ರಭು, ಚಿದಾನಂದ ಜಿಗಜೇವಣಿ, ಮಾಯಾ ಚೌಧರಿ, ಭೌರಮ್ಮ ಮುಗಳೊಳ್ಳಿ, ರಾಜೇಶ್ವರಿ ಹೋಳಗಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕಾಶೀನಾಥ್ ಜೀರಗ್ಯಾಳ, ಅಜೀತ ರಾಠೋಡ, ರಾಮಕ್ಕ, ಭುವನೇಶ್ವರಿ ಜಾಧವ, ಸುನೀತಾ ಅಶೋಕ ರಾಠೋಡ, ರಾಮು ನಾಯ್ಕ, ಅಶೋಕ ಚವ್ಹಾಣ, ಕೆ.ಎಸ್.ಪಾಟೀಲ, ಆನಂದಗೌಡ ಬಿರಾದಾರ, ಮೋಹ್ಸಿನ್ಸ್‌ ಸೈಯ್ಯದ್‌ ಇವರುಗಳಲ್ಲದೇ ಇನ್ನೂ ಅನೇಕ ಜನರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉದ್ಯಾನದಲ್ಲಿ ನೂರಾರು ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಭಾರತಿ ಜೀರಗ್ಯಾಳ ಸ್ವಾಗತಿಸಿದರು. ಹಣಮಂತ ಕುಡಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಶೋಕಕುಮಾರ ರಾ.ಜಾಧವ ನಿರೂಪಿಸಿದರು. ವಿದ್ಯಾ ಕೊಟೆನ್ನವರ ವಂದನಾರ್ಪಣೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲರಾಗಿ
ಬಸವನಬಾಗೇವಾಡಿಯಲ್ಲಿ ಅದ್ಧೂರಿ ರಂಗಪಂಚಮಿ