ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾಜಪ ಭದ್ರಕೋಟೆ ಆಗ್ನೇಯ ಪದವೀಧರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿರುವೆ. ಐದು ಜಿಲ್ಲೆಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕ್ಷೇತ್ರದಲ್ಲಿ 11 ನೇ ಚುನಾವಣೆ ಪೈಕಿ 9 ಬಾರಿ ಗೆಲುವು ಬಿಜೆಪಿ ಪಡೆದಿದೆ. ಇಲ್ಲಿನ ಪದವೀಧರ ವಿಶ್ವಾಸಕ್ಕೆ ಪೂರಕವಾಗಿ ಕೆಲಸ ಮಾಡಲು ನಾನು ಕೂಡ ಸಜ್ಜಾಗಿ ಬಂದಿದ್ದು ಉದ್ಯೋಗಾವಕಾಶ ವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಶೈಕ್ಷಣಿಕ ಸಮಾಲೋಚನೆ ಮಾಡುವುದಾಗಿ ಭರವಸೆ ನೀಡಿದರು.ಜೆಡಿಎಸ್ ಕೂಡಾ ನಮಗೆ ಕೈ ಜೋಡಿಸಲಿದೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಇ ಗ್ರಂಥಾಲಯ ಸ್ಥಾಪನೆಯನ್ನು ನಮ್ಮದೇ ಸೋಮೇಶ್ವರ ಪ್ರತಿಷ್ಠಾನ ಮೂಲಕ ಕೈಗೊಳ್ಳುತ್ತೇನೆ. ಮುಂದಿನ 2028 ರ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯುವ ಈ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಬಿಜಿಪಿಯ ಎಲ್ಲಾ ಕಾರ್ಯಕರ್ತರು, ಮುಖಂಡರು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ವಿಧಾನಸಭಾ ಚುನಾವಣಾ ರೀತಿ ಮಾಸ್ ಪ್ರಚಾರ ಇಲ್ಲಿ ಅಗತ್ಯವಿಲ್ಲ. ಪ್ರತಿ ಬೂತ್ ಮಟ್ಟದಲ್ಲಿ ಪದವೀಧರ ಮತದಾರರ ಪಟ್ಟಿ ಪಡೆದು ಅವರನ್ನು ನೇರ ಸಂಪರ್ಕ ಮಾಡಬೇಕಿದೆ. ತಾಲೂಕಿನ ಅಂದಾಜು 3800 ಕ್ಕೂ ಅಧಿಕ ಮತಗಳಿವೆ. ಮತ್ತಷ್ಟು ಸೇರ್ಪಡೆಗೆ ಅವಕಾಶವಿದೆ. ನಿವೃತ್ತರಾದ ನೌಕರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಮರಳಿ ಸೇರ್ಪಡೆಗೆ ಕಾರ್ಯಕರ್ತರು ಸಜ್ಜಾಗಿ ಎಂದ ಅವರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ತಾಲೂಕಿನ ಬಿಜಿಪಿ ಅಧ್ಯಕ್ಷರು ಬಲರಾಮಯ್ಯ ಮಾತನಾಡಿ ಕಳೆದ 30 ವರ್ಷದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ದುಡಿದ ಕೆ.ಎಂ ಸುರೇಶ್ ಅವರ ಗೆಲುವು ನಮ್ಮ ಧ್ಯೇಯವಾಗಿದೆ. ತಾಲ್ಲೂಕಿನ ಎಲ್ಲಾ ಮತದಾರರನ್ನು ನೇರ ಸಂಪರ್ಕ ಮಾಡಿ ಗೆಲುವಿನ ಸೋಪಾನ ಹಾಡುವುದು ನಮ್ಮ ಗುರಿ ಎಂದರು.ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ವಿದ್ಯಾವಂತ ಮತದಾರರು ಎಂದಿಗೂ ಭಾಜಪ ಪರ ನಿಂತಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲೆಯಲ್ಲಿದೆ. ಎಂಟು ಬಾರಿ ಸತತ ಗೆಲುವು ಕಂಡಿದೆ. ಅಂದಿನ ಒಲವು ಮತ್ತೊಮ್ಮೆ ಮರುಕುಳಿಸಲಿದೆ. ನಮ್ಮ ಕಾರ್ಯಕರ್ತರು ತಾವೇ ಅಭ್ಯರ್ಥಿ ಸುರೇಶ್ ಎಂದು ಭಾವಿಸಿಕೊಂಡು ಪ್ರಚಾರ ಕೆಲಸ ಮಾಡೋಣ.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಮಾಜಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಮುಖಂಡರಾದ ಎನ್.ಸಿ.ಪ್ರಕಾಶ್, ರವೀಶ್, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಹೊಸಹಳ್ಳಿ ಬಸವರಾಜು, ವಿದ್ಯಾಸಾಗರ್, ಎಕೆಪಿ ರಾಜು, ಯತೀಶ್, ಜಿ.ಆರ್.ಬಸವರಾಜ್, ಕಾರೆಕುರ್ಚಿ ಸತೀಶ್ ಇನ್ನಿತರರು ಇದ್ದರು.