
ಶಾಸಕ ಕೆ.ಎಸ್. ಆನಂದ್
ಹೈನುಗಾರಿಕೆಗೆ ಹೆಚ್ಚು ಅವಲಂಬಿಸಿರುವ ಕಡೂರು ತಾಲೂಕಿನಲ್ಲಿ ಮೆಗಾ ಡೈರಿ ಸ್ಥಾಪನೆಗೆ ಎಲ್ಲಾ ರೀತಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.
ಕಾಮನಕೆರೆ ಗ್ರಾಮದಲ್ಲಿ ಗುರುವಾರ ಪಶು ಚಿಕಿತ್ಸಾಲಯ ಪ್ರಾರಂಭೋತ್ಸವ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾಮನಕೆರೆ ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಪಶು ಆಸ್ಪತ್ರೆ ಪ್ರಾರಂಭೋತ್ಸವದಿಂದ ಸುತ್ತಮುತ್ತಲ ಗ್ರಾಮದ ರೈತರ ಜಾನುವಾರುಗಳನ್ನು ಬರಗಾಲದ ಪರಿಸ್ಥಿತಿಯಲ್ಲಿ ಉಳಿಸಿಕೊಳ್ಳಲು ವರದಾನವಾಗಲಿದೆ.ತಾಲೂಕಿನಲ್ಲಿ ಪ್ರತಿನಿತ್ಯ 1.10 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ನಿಗಧಿಯಾದ ಪ್ರತ್ಯೇಕ ಮೆಗಾಡೈರಿ ಸ್ಥಾಪಿನೆಗೆ ಕಡೂರು-ಬೀರೂರು ನಡುವಿನ ಕ್ಷೀತಲೀಕರಣ ಘಟಕದ ಸೂಕ್ತ ಜಾಗ ಗುರುತಿಸಿ ಡೈರಿ ಕೇಂದ್ರ ಸ್ಥಾಪಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಗುರುಶಾಂತಪ್ಪ ಮಾತನಾಡಿ ಅತಿ ಹೆಚ್ಚು ಜಾನುವಾರು ಸಂಪತ್ತು ಹೊಂದಿದ ಕಡೂರು ಎಂಬುದು ಹೆಗ್ಗಳಿಕೆ ಸಂಗತಿ. ತಾಲೂಕಿನಲ್ಲಿ ಸುಮಾರು 80,000 ದೊಡ್ಡ ಜಾನುವಾರುಗಳು (ಹಸು ಮತ್ತು ಎಮ್ಮೆ ಗಳು), 1 ಲಕ್ಷಕ್ಕೂ ಅಧಿಕ ಕುರಿ ಹಾಗೂ ಮೇಕೆಗಳು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಕೋಳಿಗಳು ಇವೆ. ಜಾನುವಾರುಗಳ ಸೇವೆಗೆ ತಾಲೂಕಿನಲ್ಲಿ ಒಟ್ಟು 40 ವಿವಿಧ ಸಂಸ್ಥೆಗಳಿದ್ದು, ಇವುಗಳಲ್ಲಿ 9 ಪಶು ಆಸ್ಪತ್ರೆಗಳು, 23 ಪಶು ಚಿಕಿತ್ಸಾಲಯಗಳು ಮತ್ತು 8 ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 159 ಹುದ್ದೆಗಳಲ್ಲಿ ಕೇವಲ 78 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಹಲವು ವೈದ್ಯರ ಹಾಗೂ ಪಶು ವೈದ್ಯಕೀಯ ಸಿಬ್ಬಂದಿಯ ಹುದ್ದೆಗಳು ಖಾಲಿ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ 15ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ತಾಲೂಕು ಗ್ಯಾರಂಟಿ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ , ತಾಲೂಕು ಸಹಾಯಕ ಪಶು ನಿರ್ದೇಶಕ ಡಾ.ಉಮೇಶ್, ಡಾ.ಯೋಗೀಶ್, ಡಾ. ಸಚ್ಚಿನ್ ಗ್ರಾ.ಪಂ ಆಡಳಿತಾಧಿಕಾರಿ ಗಿರಿಧರ್, ಪಿಡಿಒ ತನುಜಾ, ಗ್ರಾಮದ ಮುಖಂಡರುಗಳಾದ ಶಿವರುದ್ರಪ್ಪ, ಶೇಖರಪ್ಪ, ಸುಧಾ, ಆನಂದಪ್ಪ, ಗೋವಿಂದಪ್ಪ, ಪ್ರಸನ್ನ, ಮಹೇಶ್, ಪ್ರಸನ್ನ ಇದ್ದರು.29ಕೆಡಿಆರ್1