ಕನ್ನಡಪ್ರಭ ವಾರ್ತೆ ಮೈಸೂರು
ಮೊದಲಿಗೆ ಎಚ್.ಡಿ.ಕೋಟೆ ತಾಲೂಕು ಜೊಂಪನಹಳ್ಳಿಗೆ ಭೇಟಿ ನೀಡಿದ ಅವರು ಗ್ರಾಮದಲ್ಲಿ ಕೈಗೊಂಡಿರುವ ಜೈವಿಕ ಅನಿಲ ಘಟಕಗಳನ್ನು ಪರಿಶೀಲಿಸಿದರು. ಗ್ರಾಮದಲ್ಲಿ 146 ಮನೆಗಳಿಗೆ ಜೈವಿಕ ಅನಿಲ ಘಟಕ ಸ್ಥಾಪನೆಗೆ ಟೈಟಾನ್ ಕಂಪನಿ ನೆರವಾಗಿದೆ. ಒಟ್ಟು ಗ್ರಾಮದಲ್ಲಿ 200 ಗ್ರಾಮಗಳಿಗೆ ವಿಸ್ತರಿಸಿ ಒಟ್ಟಾರೆ ಗ್ರಾಮವನ್ನು ಜೈವಿಕ ಅನಿಲ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.
ಇದಕ್ಕೆ ಅಗತ್ಯವಿರುವ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ. ಜೈವಿಕ ಅನಿಲ ಬಳಕೆಯಿಂದ ಸಗಣಿಯನ್ನು ಸರಿಯಾದ ರೀತಿಯಲ್ಲಿ ಬಳಸಬಹುದು. ಚಿಕ್ಕ ಸ್ಥಳವನ್ನು ಬಳಸಿಕೊಂಡು ಅನಿಲ ತಯಾರಿಸಿ ಯಾವುದೇ ಅಡ್ಡ ಪರಿಣಾಮ ಅಥವಾ ಭೀತಿ ಇಲ್ಲದೆ ಈ ಅನಿಲ ಬಳಸಬಹುದು ಎಂದರು.ಯಾರ ಮನೆಯಲ್ಲಿ ಸ್ಥಳಾವಕಾಶ ಇಲ್ಲವೋ ಅಂತಹ ನಾಲ್ಕೈದು ಮನೆಗಳನ್ನು ಸೇರಿಸಿ ಒಂದು ಜೈವಿಕ ಅನಿಲ ಘಟಕ ಸ್ಥಾಪಿಸಿ ವಿತರಿಸಲು ಕೂಡ ನಾವು ಸಿದ್ಧರಿದ್ದೇವೆ. ಈ ಸಂಬಂಧ ಗ್ರಾಮಸ್ಥರೊಡನೆ ಕೂಡ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.
ಜೊಂಪನಹಳ್ಳಿಯ ಹಲವು ಮಂದಿ ಮಹಿಳೆಯರು ತಮಗೆ ಸಿರಿಧಾನ್ಯಗಳ ಮೂಲಕ ವಿವಿಧ ಉತ್ಪನ್ನ ತಯಾರಿಸಲು ಅಗತ್ಯವಿರುವ ತರಬೇತಿ ನೀಡಿದರೆ ತಾವೂ ಕೂಡ ಒಂದು ಉತ್ಪಾದನಾ ಘಟಕ ತೆರೆಯುವುದಾಗಿ ಇಂಗಿತ ವ್ಯಕ್ತಪಡಿಸಿದರು. ಈ ಬಗ್ಗೆ ವೆಂಕಟರಮಣ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಿಇಒ ಎಸ್. ಸವಿತಾ ಅವರು, ತಮ್ಮಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಕೆಲವು ಮನೆಗಳಿಗೆ ಭೇಟಿ ನೀಡಿ ಜೈವಿಕ ಅನಿಲದ ಬಳಕೆಯನ್ನು ವೀಕ್ಷಿಸಿದರು. ಸಾಮಾನ್ಯ ಎಲ್.ಪಿ.ಜಿ ಸ್ಟೌವ್ ಗಿಂತಲೂ ಹೆಚ್ಚು ಉರಿ ಬರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದರು.
ಮೆರವಣಿಗೆ ವೀಕ್ಷಿಸಿದ ವೆಂಕಟರಮಣ್