ಮಾನವ-ವನ್ಯಜೀವಿ ಸಂಘರ್ಷ ಪರಿಹಾರ ಯತ್ನ: ಮಂತರ್‌ ಗೌಡ

KannadaprabhaNewsNetwork |  
Published : Sep 02, 2026, 04:00 AM IST
ಚಿತ್ರ1: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಬಾಂಗಣದಲ್ಲಿ ಮಾನವ ವನ್ಯಜೀವಿ ಸಂಘರ್ಷದ ಕುರಿತು ಪರಿಹಾರರೋಪಯ್ಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮ ಡಾ.ಮಂತರ್‌ಗೌಡ. | Kannada Prabha

ಸಾರಾಂಶ

ಮುಂದಿನ ವಾರದಿಂದಲ್ಲೇ ಮಾನವ ವನ್ಯಜೀವಿ ಸಂಘರ್ಷದ ಕುರಿತು ಸಭೆ ನಡೆಸುವ ಮೂಲಕ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮುಂದಿನ ವಾರದಿಂದಲ್ಲೇ ಮಾನವ ವನ್ಯಜೀವಿ ಸಂಘರ್ಷದ ಕುರಿತು ಸಭೆ ನಡೆಸುವ ಮೂಲಕ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಬಾಂಗಣದಲ್ಲಿ ಮಾನವ ವನ್ಯಜೀವಿ ಸಂಘರ್ಷದ ಕುರಿತು ಪರಿಹಾರರೋಪಯ್ಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಸಾಕಷ್ಟು ಸಭೆಗಳನ್ನು ಮಾಡಿದ್ದರೂ ಕೂಡ ಆನೆ ಮಾತ್ತು ಮಾನವ ಸಾವು ದಾಳಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲ ಸಾಧ್ಯವಾಗಿಲ್ಲಎಂದು ವಿಷಾಧಿಸಿದ ಅವರು ಇತ್ತೀಚಿನ ದಿನಗಳಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿಯಲ್ಲಿ ಯಾರೇ ಕರೆ ಮಾಡಿದರೂ ಆನೆ ಮಾನವ ಸಂಘರ್ಷದ ಕುರಿತು ಇರುವುದಲ್ಲದೆ ಆಸ್ಪತ್ರೆ ಅಥವಾ ಚೆಕ್ ನೀಡುವ ಸಂದರ್ಭ ಎದುರಾಗುತ್ತಿವುದರ ಬಗ್ಗೆ ಮಾರ್ಮಿಕವಾಗಿ ನುಡಿದರು.

ಅರಣ್ಯ ಇಲಾಖೆಯ ವಿವಿಧ ವಲಯಗಳ ನಡುವೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆ ಬಗ್ಗೆ ಹೇಳಿದ ಅವರು ಅರಣ್ಯ ಇಲಾಖೆ, ಜನರು ಮತ್ತು ಪ್ರಾಣಿಗಳ ಸಮಸ್ಯೆಯ ಕುರಿತು ಅರಣ್ಯ ಸಚಿವರ ಮಡಿಕೇರಿ ಭೇಟಿಯಲ್ಲಿ ಗಮನಕ್ಕೆ ತರಲಾಗಿದೆ ಈ ಹಿನ್ನಲೆಯಲ್ಲಿ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಸಮಸ್ಯೆ ಪರಿಹಾರ ಇದೆ ಎಂಬ ಆಶಾಭಾವನೆಯಿಂದ ಕೆಲಸ ಮಾಡಲು ಕರೆ ನೀಡಿದ ಅವರು ಬೇಕಾದ ಅನುದಾನಕ್ಕೆ ಒಂದು ಸಮಗ್ರ ಕ್ರಿಯಾಯೋಜನೆಯನ್ನು ತಮ್ಮಗೆ ಸಲ್ಲಿಸುವಂತೆ ಉಪ ಅರಣ್ಯ ಸರಂಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಪ್ರತಿಯೊಂದು ಪರಿಹಾರಕ್ಕೆ ಅಥವಾ ಅನುದಾನಕ್ಕೆ ಬೆಂಗಳೂರಿನತ್ತ ಮುಖಮಾಡದೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳ ಬಳಿ ಅನುದಾನವನ್ನು ಇಟ್ಟುಕೊಳ್ಳುವಂತೆ ಅವಕಾಶ ಕಲ್ಪಿಸಿ ಎಂದು ತಾವು ಅರಣ್ಯ ಸಚಿವರಿಗೆ ಮನವಿ ಮಾಡಿದಾಗಿ ಅವರು ಮಾಹಿತಿ ನೀಡಿದರು.

ಈ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಅವಲಂಬಿತವಾದ ಪ್ರದೇಶವಾಗಿದ್ದು ಕೃಷಿಕರು ಭತ್ತದ ಬೇಸಾಯವನ್ನು ಕೈಬಿಟ್ಟಿದ್ದಾರೆ. ಕಾಫಿ ತೋಟಗಳು ಪಾಳು ಬಿಳುತ್ತಿವೆ ಈ ಬಗ್ಗೆ ನಾವೆಲ್ಲಾರೂ ಗಮನಹರಿಸಿ ತುರ್ತು ಮತ್ತು ಶಾಶ್ವತ ಪರಿಹಾರರೋಪಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ಮಾತನಾಡಿ ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಕುಶಾಲನಗರ ಅರಣ್ಯ ವಲಯದಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದೆ ಹೆಚ್ಚು ಕಡಿಮೆ 3 ದಶಕಗಳ ಹಿಂದಿನಿಂದಲ್ಲೂ ಈ ಸಮಸ್ಯೆ ನಮ್ಮ ನಡುವೆ ಜೀವಂತವಾಗಿದೆ ಎಂದರು.ಆನೆ ಕಂದಕಗಳಿಂದ ಹಿಡಿದು ಇಲ್ಲಿನವರೆಗಿನ ರೈಲ್ವೆ ಬ್ಯಾರಿಕೆಡ್ ಪರಿಹಾರದವರೆಗಿನ ವಿವರವನ್ನು ನೀಡಿದ ಅವರು ಕಳೆದ 3 ವರ್ಷಗಳಿಂದ ಹೆಚ್ಚು ಕಡಿಮೆ 3 ಕೋಟಿಗೂ ಮಿಕ್ಕಿದ ಅನುದಾನವನ್ನು ಅರಣ್ಯ ಇಲಾಖೆಯ ಕುಶಾಲನಗರ ವಲಯಕ್ಕೆ ನೀಡಲಾಗಿದ್ದು ಇದೀಗ ಕುಶಾಲನಗರ ವಲಯಕ್ಕಾಗಿ ರು.5 ಕೋಟಿಯ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಯ ಮಡಿಕೇರಿ ಉಪವಿಭಾಗ ನೀಲ ನಕಾಶೆ ತಯಾರು ಮಾಡಿದ್ದು ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಅಗತ್ಯ ಇರುವ ಅನುದಾನವನ್ನು ತರುತ್ತಾರೆ ಎಂದರು.

ಆನೆ ಒಂದು ಅದು ಉಂಟು ಮಾಡುತ್ತಿರುವ ಸಮಸ್ಯೆಗಳು ಹಲವು ಎಂದು ಕೊಡಗು ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್ ಹೇಳಿದ್ದಾರೆ.

ಅವರು ಕಾಡುಕೋಣ, ಮಂಗ ನವಿಲು, ಕಾಡು ದನ ಮತ್ತು ಜಿಂಕೆಗಳ ಹಾವಳಿ ಕುರಿತು ಉಲ್ಲೇಖಿಸಿದರು.

ಕಂಬಿಬಾಣೆ ನಿವಾಸಿ ಡಾ. ಶಶಿಕಾಂತ ರೈ ಮಾತನಾಡಿ, ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಆಹಾರ ನೀರು ಇಲ್ಲ ತೋಟಗಳಲ್ಲಿ ಬಿಡುಬಿಟ್ಟಿರುವ ಆನೆಗಳನ್ನು ಆನೆ ಕಾಡಿನಲ್ಲಿ ಪುನರ್‌ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಹೆರೂರು ಚಂದ್ರಶೇಖರ್ ಮಾತನಾಡಿ ಅರಣ್ಯ ಇಲಾಖೆಯಿಂದ ಪರಿಹಾರ ತುರ್ತು ಉಪಶಮನ ಕಾರ್ಯಕ್ರಮವಾಗಿದ್ದು, ಇದನ್ನು ಅರಣ್ಯ ಇಲಾಖೆ ಸಮಪರ್ಕವಾಗಿ ಮಾಡುತ್ತಿಲ್ಲವೆಂದು ಆರೋಪಿಸಿದರು.

ಅತ್ತೂರು ನಲ್ಲೂರು ಗ್ರಾಮದ ಬಿ.ಜಿ.ಜವಹರ್ ಮಾತನಾಡಿ ಮೇಟ್ನಹಳ್ಳದಿಂದ ಚಿಕ್ಕಲಿಹೊಳೆವರೆಗೆ ರೇಲ್ವೆ ಬ್ಯಾರಿಕೆಡ್ ಕಾಮಗಾರಿ ಚಾಲ್ತಿಯಲ್ಲಿದ್ದು ಇಲ್ಲಿ ಗೇಟ್‌ಗಳನ್ನು ಅಳವಡಿಸಲಾಗಿದೆ ಆದರೆ ಗೇಟ್‌ಗಳನ್ನು ತೆರೆದಿಡುವ ಜೌಚಿತ್ಯದ ಬಗ್ಗೆ ಪ್ರಶ್ನಿಸಿದರು.

ಕೆದಕಲ್ ನಿವಾಸಿ ಯಂಕನ ಗೋಪಿ ತಿಮ್ಮಯ್ಯ, ಚೆಪ್ಪುಡಿರ ಸತೀಶ್ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸೌಮ್ಯ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಮಡಿಕೇರಿ ಉಪ ವಿಭಾಗದ ಉಪರಣ್ಯ ಸಂರಕ್ಷಾಣಾಧಿಕಾರಿ ಅಭಿಷೇಕ್ ಮಾತನಾಡಿ, ಈಗಾಗಲೇ ಸಮಗ್ರ ಕ್ರಿಯಾಯೋಜನೆಯ ಕುರಿತು ನೀಲಿನಕಾಶೆ ಶೇ.70 ರಷ್ಟು ಮುಗಿದಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿ ಶಾಸಕರ ಮೂಲಕ ಶೀಘ್ರನುದಾನವನ್ನು ಪಡೆಯಲು ಪ್ರಯತ್ನಿಸಲಾಗುವುದೆಂದರು.

ಸಭೆಯಲ್ಲಿ ಕೇಳಿದ ಬಂದ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಸಮಜಾಯಿಷಿ ನೀಡಿದ ಅವರು ಇಲಾಖೆಯಲ್ಲಿನ ವಾಹನ ಮತ್ತು ಸಿಬ್ಬಂದಿ ಕೊರತೆ ಅರಣ್ಯದಲ್ಲಿ ಆನೆಗಳಿಗೆ ಮೇವು ಮತ್ತು ನೀರು ಮಾನವ ವನ್ಯಜೀವಿ ಸಂಗರ್ಷಕ್ಕೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಗೆ ಒಂದು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುಂಟಿಕೊಪ್ಪ ಹೋಬಳಿ ರೈತ ಸಂಘದ ಅಧ್ಯಕ್ಷ ನಾಗಚೆಟ್ಟಿರ .ಸಿ.ಪೊನ್ನಪ್ಪ, ಉಪಾಧ್ಯಕ್ಷ ಕುಂಜಿಲನ .ಎಸ್.ಮಂಜುನಾಥ್, ದಾಸಂಡ ರಮೇಶ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿಡಿಸೋಜ, ಎ.ಸಿಎಫ್ ನವೀನ್ ಕುಮಾರ್, ಮಾಜಿ ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಿ: ರೈತರ ಆಗ್ರಹ
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಿ: ಕರಿಗಾರ