ಶಿವಕುಮಾರ ಕುಷ್ಟಗಿ
ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರೈಸುವ ಒಂದು ಮೊಟ್ಟೆಗೆ ₹6 ಗರಿಷ್ಠ ದರ ನಿಗದಿ ಮಾಡಿದೆ. ಚಳಿಗಾಲ ಸಂದರ್ಭದಲ್ಲಿ ₹6ರಿಂದ ₹6.30 ವರೆಗೆ ಮೊಟ್ಟೆ ಬೆಲೆ ಏರಿಕೆ ಆಗುತ್ತದೆ. ಸರ್ಕಾರದ ನಿಯಮ ಪ್ರಕಾರ ಬೆಲೆ ಇಳಿಕೆಯಾದಾಗ ಉಳಿಯುವ ಹಣವನ್ನು ಬೆಲೆ ಏರಿಕೆಯಾದಾಗ ಬಳಸಬೇಕು. ಆದರೆ ಇದು ಪಾಲನೆಯಾಗುತ್ತಿಲ್ಲ. ಮೊಟ್ಟೆ ಬೆಲೆ ಇಳಿದಾಗಲೂ ಸರ್ಕಾರ ₹6 ಪಾವತಿಸುತ್ತಿದೆ. ಹಾಗಾಗಿ ಮಳೆಗಾಲ ಮತ್ತು ಚಳಿಗಾಲದ ಸಂದರ್ಭದಲ್ಲಿ ಮೊಟ್ಟೆ ಬೆಲೆ ಏರಿಕೆ ಕಂಡಾಗ ಶಾಲಾ ಮಂಡಳಿಗಳಲ್ಲಿ ಮೊಟ್ಟೆ ದರ ಪಾವತಿಗೆ ಅನುದಾನ ಕೊರತೆ ಕಾಡುತ್ತಿದೆ. ಪ್ರತಿನಿತ್ಯ ಹತ್ತಾರು ಸಾವಿರ ರು. ಕೊರತೆಯಾಗುತ್ತಿದೆ.
1.27 ಲಕ್ಷ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1,27,619 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶೇ. 70ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಆಯ್ಕೆ ಮಾಡಿಕೊಂಡಿದ್ದಾರೆ. ಸರ್ಕಾರ ಒಂದು ಮೊಟ್ಟೆಗೆ ₹6 ಅನುದಾನ ಕೊಡುತ್ತದೆ. ಅದರಲ್ಲಿ ವಿಂಗಡಣೆ ಇದ್ದು, ಮೊಟ್ಟೆ ಖರೀದಿಗೆ ₹5, ಮೊಟ್ಟೆ ಬೇಯಿಸಲು 50 ಪೈಸೆ, ಮೊಟ್ಟೆ ಬಿಡಿಸಲು 30 ಪೈಸೆ ಹಾಗೂ ಸಾಗಾಣಿಕೆ ವೆಚ್ಚ 20 ಪೈಸೆ ಇರುತ್ತದೆ. ಪ್ರಸ್ತುತ ಮೊಟ್ಟೆ ದರ ಹೆಚ್ಚಾಗಿರುವುದರಿಂದ ಇದು ಸರಿದೂಗುತ್ತಿಲ್ಲ.ಬೇಸಿಗೆಯಲ್ಲಿಯೂ ₹5 1 ಮೊಟ್ಟೆ ಸಿಗುತ್ತದೆ. ಜುಲೈ ತಿಂಗಳಿಗೆ ₹5.30, ಆಗಷ್ಟನಿಂದ ಅಕ್ಟೋಬರ್ ವರೆಗೆ ಸಗಟು ದರವೇ ₹6.30 ಆಗುತ್ತದೆ. ಮುಂದೆ ಡಿಸೆಂಬರ್, ಜನವರಿ ವರೆಗೂ ₹6 ಇರುತ್ತದೆ. ಈ ರೀತಿಯ ದರದಲ್ಲಿ ಆಗುತ್ತಿರುವ ಬದಲಾವಣೆ ಮೇಲ್ನೋಟಕ್ಕೆ ಸಣ್ಣದು ಎನ್ನಿಸಿದರೂ ಮಕ್ಕಳ ಸಂಖ್ಯೆ ಲಕ್ಷಗಟ್ಟಲೇ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತದೆ.
ತಾಲೂಕು ವಿದ್ಯಾರ್ಥಿಗಳ ಸಂಖ್ಯೆ
ಗದಗ ನಗರ13813
ಮುಂಡರಗಿ19599ನರಗುಂದ11417
ಶಿರಹಟ್ಟಿ24529
ಮೊಟ್ಟೆ ಸ್ವೀಕರಿಸುವವರ ಸಂಖ್ಯೆ:ಜಿಲ್ಲೆಯಲ್ಲಿನ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಸಂಖ್ಯೆ 127529. ಅವರಲ್ಲಿ ಪ್ರತಿನಿತ್ಯ ಮೊಟ್ಟೆ ಸ್ವೀಕರಿಸುವ ಮಕ್ಕಳ ಸಂಖ್ಯೆ 101600.