ಧಾರವಾಡ: ಜಾನಪದ ಕೋಗಿಲೆ ಫಕ್ಕೀರವ್ವ ಗುಡಿಸಾಗರ ಆಶುಕವಿಯಾಗಿ ಹಾಡುಗಳ ಮೂಲಕ ಜನಸ್ತೋಮವನ್ನು ರಂಜಿಸುತ್ತಿದ್ದ ಶ್ರೇಷ್ಠ ಜಾನಪದ ಕಲಾವಿದೆ ಎಂದು ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಆಧ್ಯಕ್ಷ ಕೃಷ್ಣಾ ಕೋಳಾನಟ್ಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ, ಕಾರ‍್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಜಾನಪದ ಕಲಾವಿದರು ಜಾನಪದ ಸಾಹಿತ್ಯದ ಉಳಿವಿಗೆ ಆಧಾರಸ್ತಂಭವಾಗಿದ್ದಾರೆ. ಉತ್ತರ ಕರ್ನಾಟಕವು ಜಾನಪದ ಕಲೆ-ಕಲಾವಿದರ ತವರು. ಜಾನಪದ ಹಾಡುಗಳಲ್ಲಿ ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸಿ ಜೀವನ ಪಾಠ ಕಲಿಸುತ್ತವೆ. ಕೌಬುಂಬಿಕ ಸಂಬಂಧ ಗಟ್ಟಿಗೊಳಿಸುತ್ತವೆ ಎಂದರು.
ವೇದಿಕೆಯ ಮೇಲೆ ಎಲ್.ಐ. ಲಕ್ಕಮ್ಮನವರ, ಜಯಶ್ರೀ ಪಾಟೀಲ, ಉಮಾದೇವಿ ಹಿರೇಮಠ, ಬಾಬಾಜಾನ ಮುಲ್ಲಾ, ಐ.ಐ. ಮುಲ್ಲಾನವರ, ಲಲಿತಾ ಚಾಕಲಬ್ಬಿ, ರಾಜೀವ ಪುಟ್ಟಣ್ಣವರ ರವಿ ದೊಡ್ಡಿಹಾಳ, ಎಂ.ಡಿ. ದೊಡಮನಿ ಇದ್ದರು.ಜಿಲ್ಲೆಯ ವಿವಿಧ ಜಾನಪದ ಕಲಾ ತಂಡಗಳು ಜಾನಪದ ಸಂಭ್ರಮ ಕರ‍್ಯಕ್ರಮ ನಡೆಸಿಕೊಟ್ಟರು. ಯಕ್ಕೇರಪ್ಪ ನಡುವಿನಮನಿ (ಶಾನವಾಡ ಮಾಸ್ತರ) ಸ್ವಾಗತಿಸಿದರು.