ಮೇಲುಕೋಟೆ ಕ್ಷೇತ್ರವು ಐತಿಹಾಸಿಕ, ಪೌರಾಣಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಕೋನಗಳಿಂದ ಪ್ರಸಿದ್ದಿಯಾಗಿರುವುದು ಸರ್ವವೇದ್ಯ
ಕನ್ನಡಪ್ರಭ ವಾರ್ತೆ ಮೈಸೂರುಪ್ರತಿ ವರ್ಷಂತೆ ಈ ವರ್ಷವೂ ಮೇಲುಕೋಟೆಯ ಭಗವದ್ ರಾಮನುಜ ರಾಷ್ಟ್ರೀತ ಸಂಶೋಧನ ಸಂಸತ್ ವತಿಯಿಂದ ಹೊರತರಲಾದ 2026ನೇ ಸಾಲಿನ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ)ಯ ಮೈಸೂರು ವಿಭಾಗದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣದ ಚಂದನವನ ಆಶ್ರಮದ ಶ್ರೀ ಕ್ಷೇತ್ರ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.ಮೇಲುಕೋಟೆ ಕ್ಷೇತ್ರವು ಐತಿಹಾಸಿಕ, ಪೌರಾಣಿಕ ಹಾಗೂ ಸಾಂಪ್ರದಾಯಿಕ ದೃಷ್ಟಿಕೋನಗಳಿಂದ ಪ್ರಸಿದ್ದಿಯಾಗಿರುವುದು ಸರ್ವವೇದ್ಯವಾಗಿದ್ದು, ಪುರಾಣ ಪ್ರಸಿದ್ಧವಾದಈ ಕ್ಷೇತ್ರವು ಜ್ಞಾನಮಂಟಪವೆನಿಸಿದೆ. ಈ ಭಾಗವನ್ನುಮನಗಂಡಿದ್ದ. ಅಂದಿನ ಉಪ ರಾಷ್ಟ್ರಪತಿ ಬಿ.ಡಿ. ಜತ್ತಿ ಅವರು ಭಗವದ್ರಾಮಾನುಜರ ತತ್ತ್ವ, ಸಿದ್ಧಾಂತ, ದರ್ಶನ ಹಾಗೂ ಸಂಪ್ರದಾಯಗಳ ಅಮೂಲ್ಯ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಸಂಶೋಧನ ಸಂಸ್ಥೆಯೊಂದು ಸ್ಥಾಪನೆಯಾಗಬೇಕು ಎಂದು ಆಶಿಸಿದ್ದರು. ಈ ಸದಾಶಯವನ್ನು ವಾಸ್ತವಗೊಳಿಸಲು, ಕರ್ನಾಟಕ ಸರ್ಕಾರವು ಪ್ರಾರಂಭಿಕ ಅನುದಾನವನ್ನೊದಗಿಸಿ, ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ಸಂಸ್ಥೆಯನ್ನು 1976 ಅ. 15 ರಲ್ಲಿ ಸ್ಥಾಪಿಸಿತು. ಈ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆ ನಿಯಂತ್ರಣದೊಡನೆ ಅಧೀನಕ್ಕೆ ವಹಿಸಿದೆ. ಅದರಂತೆ 2016ರ ಫೆ. 6 ರಿಂದ ವಿವಿ ಅಡಿಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.2026-2027 ನೇ ಸಾಲಿಗೆ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುವಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದೆ. ಸಂಸ್ಥೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ತಾಳಪತ್ರ ಮತ್ತಯ ಹಸ್ತಪ್ರತಿ ಸಂಗ್ರಹಿಸಿ ಸಂರಕ್ಷಿಸಿಡಲಾಗಿದೆ. ಸಂರಕ್ಷಣಾ ದೃಷ್ಟಿಯಿಂದ ಡಿಜಿಟಲೀಕರಣ ಕಾರ್ಯ ಕೈಗೊಂಡು ಈಗಾಗಲೇ 4 ಲಕ್ಷಕ್ಕೂ ಅಧಿಕ ತಾಳೆ ಎಲೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಉಳಿದ ಕಾರ್ಯವೂ ಪ್ರಗತಿಯಲ್ಲಿದೆ. ಸಂಗ್ರಹಿಸಲ್ಪಟ್ಟಿರುವ ಎಲ್ಲಾ ತಳಪತ್ರಗಳ ಹಸ್ತಪ್ರತಿ ಸೂಚಿಯನ್ನು 18 ಸಂಪುಟಗಳಲ್ಲಿ ಹೊರತರಲಾಗಿದೆ. ಹಾಗೆಯೇ ಅಪ್ರಕಟಿತ ತಾಳಪತ್ರಗಳನ್ನು ಗುರುತಿಸಿ ಸಂಶೋಧನ ಕೃತಿಯ ಮೂಲಕ ಹೊರತರುವ ಪ್ರಕ್ರಿಯೆ ಮುಂದುವರೆದಿದೆ.ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಎಸ್. ಅಹಲ್ಯಾಶರ್ಮ ಅವರ ನಿರ್ದೇಶನದಂತೆ 2025 ರಿಂದ ಕ್ಯಾಲೆಂಡರ್ ಹೊರತರಲಾಗುತ್ತಿದೆ. ಈ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್ ನ ಕುಲಸಚಿವರಾದ (ಆಡಳಿತ) ಎಸ್. ಕುಮಾರ್, ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕ ಕೆ.ಎಸ್. ಗೋಪಾಲಕೃಷ್ಣ, ಸಂಸ್ಕೃತ ವಿವಿ ಕುಲಪತಿ ಡಾ.ಎಸ್ ಅಹಲ್ಯ, ಭಾರತೀ ಯೋಗಧಾಮದ ಸಂಸ್ಥಾಪಕ ಕೆ.ಎಲ್. ಶಂಕರನಾರಾಯಣ ಜೋಯಿಸ್, ಪ್ರಾಂತ ವಿಸ್ಥಾರ ಪ್ರಮುಖ ಎಂ. ರೆಡ್ಡಯ್ಯರಾಜು, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಕೇಂದ್ರ ಸಮಿತಿ ಕೋಶಾಧ್ಯಕ್ಷ ಎನ್.ಎಸ್. ಮಹೇಶ್ ಮೊದಲಾದವರು ಇದ್ದರು.