ಸಂಕಲ್ಪ ಎಂದರೆ ವ್ಯಕ್ತಿಯ ಸಮಗ್ರ ಪರಿವರ್ತನೆಯ ಉದ್ದೇಶಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳ ಪೂರ್ಣಮನಸ್ಸು, ಅದಮ್ಯ ಇಚ್ಛಾಶಕ್ತಿ, ಸಂಯಮ ಮತ್ತುಆತ್ಮವಿಶ್ವಾಸದಿಂದ ಅಂತರಂಗದ ಸಾಮರ್ಥ್ಯಗಳು ಸಹಜವಾಗಿ ಹೊರ ಹೊಮ್ಮಬೇಕು. ತರಗತಿಯಲ್ಲಿ ಕಲಿಯುವ ಪುಟ್ಟ ಮಕ್ಕಳು ನಾಳಿನ ಯಶಸ್ವಿ ಸಾಧಕರಾಗಿ ಪರಿವರ್ತನೆಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯಶಸ್ಸು ಆಕಸ್ಮಿಕವಲ್ಲ, ಯಶಸ್ಸಿನೆಡೆಗೆ ನಡೆಯುವ ದಾರಿಯ ಸಂಕಲ್ಪ, ಅಚಲ ವಿಶ್ವಾಸ ಹಾಗೂ ಸಮಯ ಪ್ರಜ್ಞೆಯು ಅತ್ಯಂತ ಮುಖ್ಯ ಎಂದು ಶಾಂತ ಶಿಕ್ಷಣ ಸಂಸ್ಥೆಗಳ ಧರ್ಮದರ್ಶಿ ಡಾ. ಪ್ರೀತಿ ಸುಧಾಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಯ ಶಾಂತ ವಿದ್ಯಾನಿಕೇತನದ 15ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿ, ಸಂಕಲ್ಪ ಎಂಬ ದಿಕ್ಸೂಚಿ ಹೇಳಿಕೆಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ದೃಢ ಸಂಕಲ್ಪದಿಂದ ಹೊರ ಹೊಮ್ಮುವ ಸಾಧನೆಗಳನ್ನು ಈ ಕಾರ್ಯಕ್ರಮವು ತೆರೆದಿಡುತ್ತಿದೆ ಎಂದರು.

ಯಶಸ್ವಿ ಸಾಧಕರಾಗಬೇಕು:

ಸಂಕಲ್ಪ ಎಂದರೆ ವ್ಯಕ್ತಿಯ ಸಮಗ್ರ ಪರಿವರ್ತನೆಯ ಉದ್ದೇಶಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳ ಪೂರ್ಣಮನಸ್ಸು, ಅದಮ್ಯ ಇಚ್ಛಾಶಕ್ತಿ, ಸಂಯಮ ಮತ್ತುಆತ್ಮವಿಶ್ವಾಸದಿಂದ ಅಂತರಂಗದ ಸಾಮರ್ಥ್ಯಗಳು ಸಹಜವಾಗಿ ಹೊರ ಹೊಮ್ಮಬೇಕು. ತರಗತಿಯಲ್ಲಿ ಕಲಿಯುವ ಪುಟ್ಟ ಮಕ್ಕಳು ನಾಳಿನ ಯಶಸ್ವಿ ಸಾಧಕರಾಗಿ ಪರಿವರ್ತನೆಗೊ ಳ್ಳಬೇಕಾಗಿದೆ. ಈ ಸಂಕಲ್ಪ ಮಕ್ಕಳಿಗೆ ಮಾತ್ರವಲ್ಲ, ಮಕ್ಕಳೊಂದಿಗೆ ಗುರುವೃಂದ, ಪೋಷಕರು, ಆಡಳಿತ ಮಂಡಳಿ, ಇಡೀ ಸಮಾಜ ಸಂಕಲ್ಪ ತೊಡಬೇಕು ಎಂದರು.ಚಲನಚಿತ್ರ ನಟಿ ಅದಿತಿ ಪ್ರಭುದೇವ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ವಿಶಿಷ್ಟ ಪ್ರತಿಭೆ ಇರುತ್ತದೆ ಅವುಗಳನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಶಾಂತ ಸಂಸ್ಥೆಯು ಉದಾತ್ತರೀತಿಯಲ್ಲಿಮಾಡುತ್ತಿದೆ. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವುದರಿಂದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಅಭಿವೃದ್ಧಿ ಪಥದತ್ತ ಮುನ್ನಡೆದು ಸುಂದರ ಸಮಾಜ ನಿರ್ಮಿಸಬಹುದು ಎಂದರು. ಪೋಷಕರ ಸಹಕಾರಕ್ಕೆ ಋಣಿ

ಶಾಲಾ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದ ಪ್ರಾಂಶುಪಾಲ ಡಾ. ಪ್ರಸಾದ ಅಪ್ಪಲ್ಲ ಮಾತನಾಡಿ, ಪೋಷಕರು ಶಾಲೆಗೆ ನೀಡುತ್ತಿರುವ ಸಹಕಾರಕ್ಕೆ ನಾವು ಋಣಿಯಾಗಿದ್ದೇವೆ. ನಿಮ್ಮ ಸಹಕಾರವನ್ನು ನಿಮ್ಮ ಮಕ್ಕಳನ್ನು ಬೆಳೆಸುವ ಮೂಲಕ ಮರು ಕಟ್ಟಿ ಕೊಡುತ್ತೇವೆಂದು ಪೋಷಕರಿಗೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿಶಾಂತ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಕೋಡಿರಂಗಪ್ಪ, ಶಾಂತಾ ಶಿಕ್ಷಣ ಸಂಸ್ಥೆಗಳ ಡೀನ್ ಮತ್ತುಪ್ರಾಂಶುಪಾಲ ಡಾ. ನವೀನ್ ಸೈಮನ್,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ,ಸೇವಕ ಮನೋಹರ, ಪ್ರೊ.ನರೇಶ್ ಕುಮಾರ್, ಡಯಾನ, ಶಿಕ್ಷಕರಾದ ರಂಗರಾಜನ್, ವೆಂಕಟೇಶ, ಕಲೀವುಲ್ಲಾ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್, ಸಂದೇಶ್ ಆಡಳಿತ ಅಧಿಕಾರಿ ಕೆನಿತ್, ವಿತ್ತಾಅಧಿಕಾರಿ ಶರವಣ, ಕಲ್ಯಾಣಿ, ಮತ್ತಿತರರು ಇದ್ದರು.