ಸಾಮೂಹಿಕ ಪ್ರಾರ್ಥನೆಯೊಂದಿಗೆ ಮೆರವಣಿಗೆ ಮಾಡುವುದು ಸಹ ಆಚರಣೆಯ ಭಾಗ. ಆದ್ದರಿಂದ ಧಾರವಾಡದ ಮುಸ್ಲಿಂ ಬಂಧುಗಳು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ಮಾಡಿದರು. ಸಮಾಜದ ಮುಖಂಡರುಗಳು, ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸಿದ್ದವು. ವಾಹನ ಹಾಗೂ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಈದ್ ಮೀಲಾದ್ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಸಿಹಿ ತಿಂಡಿ ವಿತರಿಸಲಾಯಿತು. ಮೆರವಣಿಗೆಯಲ್ಲಿ ಗದ್ದಲ-ಗೊಂದಲ ಆಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಸಹ ವಹಿಸಲಾಗಿತ್ತು.
ತಾಲೂಕಿನ ಮುಗದ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಂಧುಗಳು ಭಾವೈಕ್ಯತೆಯ ಪೈಗಂಬರ್ ದಿನಾಚರಣೆ ಆಚರಿಸಿದದರು. ತಾಪಂ ಮಾಜಿ ಅಧ್ಯಕ್ಷ ಕೆ.ಎಫ್.ಹಟ್ಟಿ, ರವಿ ಕಸಮಳಗಿ, ಎಎಸೈ ಬಾಬಾಝಾನ್ ಮುಲ್ಲಾ, ನಾಗಪ್ಪ ಕೊಂಪನ್ನವರ್, ಮಂಜುನಾಥ್ ಜಕ್ಕನವರ್, ಶೇಖಪ್ಪ ಕಲಗೌಡರ್, ಸುಬಾನ್ಸಾಬ್ ಕಳ್ಳಿಮನಿ, ಗುಡು ಸಾಬ್ ಕೋಟಿ, ಮಕ್ತುಂಸಾಬ್ ಚಪ್ಪರಮನಿ, ಮೊಹಮ್ಮದ್ ಜೋರಮ್ಮನವರ್, ರಾಜು ಮುಜಾವರ್, ಧೂಲಾ ಮಕಂದಾರ್, ಧರ್ಮ ಗುರು ಮಹಮ್ಮದ್ ರಿಜ್ವಿ ಇದ್ದರು.
ಇದೇ ಸಂದರ್ಭದಲ್ಲಿ ಅಫಘಾನಿಸ್ತಾನ ಹಾಗೂ ಸುಡಾನ್ ದಲ್ಲಿ ಆದ ಭೂಕಂಪದಲ್ಲಿ ಮೃತರಾದವರಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.