ಪರಿಷತ್ ಚುನಾವಣೆಗೆ ಶಿರಾ ತಾಲೂಕಲ್ಲಿ 8 ಮತಗಟ್ಟೆ ಸ್ಥಾಪನೆ: ರುದ್ರೇಶ್

KannadaprabhaNewsNetwork |  
Published : Oct 08, 2026, 01:15 AM IST
7ಶಿರಾ3: ಕೆ.ರುದ್ರೇಶ್, ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ | Kannada Prabha

ಸಾರಾಂಶ

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಇಲ್ಲಿಯವರೆಗೂ ಶಿರಾ ತಾಲೂಕಿನಲ್ಲಿ ಒಟ್ಟು 5845 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದು, ಅ.23 ರಂದು ಮತದಾನ, 27ರಂದು ಮತ ಎಣಿಕೆ ನಡೆಯಲಿದ್ದು, ಶಿರಾ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 8-ಮತಗಟ್ಟೆ ಸ್ಥಾಪಿಸಲಾಗಿದೆ ಎಂದು 136-ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕೆ.ರುದ್ರೇಶ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಶಿರಾ

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಇಲ್ಲಿಯವರೆಗೂ ಶಿರಾ ತಾಲೂಕಿನಲ್ಲಿ ಒಟ್ಟು 5845 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದು, ಅ.23 ರಂದು ಮತದಾನ, 27ರಂದು ಮತ ಎಣಿಕೆ ನಡೆಯಲಿದ್ದು, ಶಿರಾ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 8-ಮತಗಟ್ಟೆ ಸ್ಥಾಪಿಸಲಾಗಿದೆ ಎಂದು 136-ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕೆ.ರುದ್ರೇಶ್ ತಿಳಿಸಿದರು.ಶಿರಾ ನಗರಸಭೆ ಸಭಾಂಗಣದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಹಾಗೂ ಆಗ್ನೆಯ ಪದವೀಧರ ಕ್ಷೇತ್ರದ ಚುನಾವಣೆ ಬಗ್ಗೆ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು. ಶಿರಾ ನಗರದ ಸ.ಪ.ಪೂ.ಕಾಲೇಜು ಐ.ಬಿ. ವೃತ್ತ ಇಲ್ಲಿ 4-ಮತಗಟ್ಟೆ, ಹುಲಿಕುಂಟೆ ಹೋಬಳಿಯಲ್ಲಿ ಸರಕಾರಿ ಪ್ರೌಢಶಾಲೆ, ಬರಗೂರು, ಗೌಡಗೆರೆ ಹೋಬಳಿಯಲ್ಲಿ ಸ.ಹಿ.ಪ್ರಾ.ಪಾಠಶಾಲೆ, ಗೌಡಗೆರೆ, ಕಳ್ಳಂಬೆಳ್ಳ ಹೋಬಳಿಯಲ್ಲಿ ಸ.ಹಿ.ಪ್ರಾ.ಪಾಠಶಾಲೆ, ಎನ್.ಎಚ್.48, ಕಳ್ಳಂಬೆಳ್ಳ ಹಾಗೂ ಬುಕ್ಕಾಪಟ್ಟಣ ಹೋಬಳಿಯಲ್ಲಿ ಸ.ಹಿ.ಪ್ರಾ.ಶಾಲೆ, ಬುಕ್ಕಾಪಟ್ಟಣದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯಲ್ಲಿನ 2,11,374 ಮತದಾರರಲ್ಲಿ ಮ್ಯಾಪಿಂಗ್ ಇಲ್ಲದಿರುವುದು ಮತ್ತು ಮ್ಯಾಪಿಂಗ್‌ನಲ್ಲಿ ವ್ಯತ್ಯಾಸಗಳು ಸೇರಿ ವಿವಿಧ ಕಾರಣಗಳಿಂದ ಹೊಂದಾಣಿಕೆ ಇಲ್ಲದ / ತಪ್ಪು, ಹೊಂದಾಣಿಕೆ ಇರುವಂತಹ 8710-ಮತದಾರರಿಗೆ ನೋಟಿಸ್‌ ನೀಡಲಾಗಿದೆ. 7734 ನೋಟಿಸ್ ವಿಚಾರಣೆ ನಡೆಸಲಾಗಿದ್ದು, ದಾಖಲಾತಿ ಪಡೆದು ಬಿ.ಎಲ್.ಓ ಆಪ್ ನಲ್ಲಿ ಮತಗಟ್ಟೆ ಅಧಿಕಾರಿಗಳಿಂದ ಅಪ್ಲೋಡ್ ಮಾಡಲಾಗಿದೆ. ಉಳಿಕೆ 728 ನೋಟಿಸ್‌ ವಿಚಾರಣೆಗೆ ಬಾಕಿ ಇದ್ದು, ಮುಂದಿನ ಎರಡುಮೂರು ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು. ಈಗಾಗಲೇ ನೋಟಿಸಲ್ಲಿ ನಿಗದಿಪಡಿಸಿದ ದಿನಾಂಕಗಳಂದು ಗೈರು ಹಾಜರಾದ ಮತದಾರರಿಗೆ ಬಿ.ಎಲ್.ಒ.ಗಳೇ ಮನೆ ಮನೆಗಳಿಗೆ ತೆರಳಿ ಮತದಾರರ ಹಾಗೂ ಮನೆಯವರ ಫೋಟೊ ಮತ್ತು ದಾಖಲೆಗಳನ್ನು ಪಡೆದು ಆಪ್ ನಲ್ಲಿ ಅಪ್ ಲೋಡ್ ಮಾಡುವರು ಹಾಗೂ 1,22,359 ಫೋಟೋ ವೆರಿಫಿಕೇಶನ್ ನಲ್ಲಿ 62,988 ಪರಿಶೀಲನೆಯಾಗಿದ್ದು, ಉಳಿಕೆ ಫೋಟೊಗಳನ್ನು ಶೀಘ್ರ ಪರಿಶೀಲನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಆನಂದಕುಮಾರ ಜಿ., ಚುನಾವಣಾ ಶಿರಸ್ತೆದಾರರಾದ ನಾಗರಾಜ, ಚುನಾವಣಾ ವಿಷಯ ನಿರ್ವಾಹಕರಾದ ಬಷೀರ್ ಎಂ., ವಿನೋದ್ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳುಪಿನಕಟ್ಟೆ ಬಳಿ ಹೈಕೋರ್ಟ್ ಪೀಠ ಸ್ಥಾಪಿಸಲು ಮನವಿ
ಕೂಡಲ ಸಂಗಮದಲ್ಲಿ ಗೋಮಾಂಸ ಭಕ್ಷಣೆ ವಿರುದ್ಧ ಸೂಕ್ತ ಕ್ರಮವಾಗಲಿ: ಮುತಾಲಿಕ್‌