ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷ ಆಡಳಿತ ಸೇವೆ ನಡೆಸಿದ ಗೌರವಾರ್ಥ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದಲ್ಲಿ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ತುಮಕೂರು
ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷ ಆಡಳಿತ ಸೇವೆ ನಡೆಸಿದ ಗೌರವಾರ್ಥ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದಲ್ಲಿ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಇದಕ್ಕೂ ಮೊದಲು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಶಿಕಿರಣ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಮಂಡಳಗಳ ಯುವ ಮೋರ್ಚಾ ಕಾರ್ಯಕರ್ತರು ಸೇವಾ ಜ್ಯೋತಿಯಾತ್ರೆ ನಡೆಸಿದರು.
ನಂತರ ಮಹಾವೀರ ಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ - ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಬಿ.ಸುರೇಶ್‌ಗೌಡರು, ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಈ ದೇಶದ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದ್ದಾರೆ. ಅವರು 2001 ರಅಕ್ಟೋಬರ್ 1 ರಂದು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನಂತರ 2014 ರಲ್ಲಿ ಈ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಸತತವಾಗಿ 25 ವರ್ಷಗಳ ಕಾಲ ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಈ ದೇಶದ ಸೇವೆ ಮಾಡಿದ್ದಾರೆ. ಇದು ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಬೇಕಾದ ಒಂದು ಅಧ್ಯಾಯ ಎಂದು ಶ್ಲಾಘಿಸಿದರು.
ಪ್ರಧಾನಿ ಮೋದಿವರು ತಮ್ಮ ಭಾಷಣದಲ್ಲಿ ಐದು ಗುರಿಗಳನ್ನು ಜನತೆಯ ಮುಂದೆ ಇಟ್ಟು ಇದನ್ನು ನಾವು ಮಾಡಿಯೇ ಸಿದ್ಧ ಎಂದು ಘೋಷಿಸಿದ್ದಾರೆ. ಅವರು ಹೇಳಿದ ಐದು ಗುರಿಗಳು: 2047ಕ್ಕೆ ವಿಕಸಿತ ಭಾರತದ ಕನಸು ನನಸು ಮಾಡುವುದು, ಜಗತ್ತಿನ ಮೊದಲ ಮೂರು ಆರ್ಥಿಕತೆಗಳಲ್ಲಿ ಭಾರತವನ್ನುತರುವುದು, ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವುದು, ಜಾಗತಿಕ ಉತ್ಪಾದನಾ ಹಬ್ ಆಗಿ ಭಾರತವನ್ನು ರೂಪಿಸುವುದು ಮತ್ತು ಭಾರತವು ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸುವುದನ್ನು ಸಾಧ್ಯ ಮಾಡುವುದು'''''''''''''''' ಇಂಥ ಗುರಿಗಳನ್ನು ಇದುವರೆಗೆ ಯಾವ ನಾಯಕರೂದೇಶದ ಮುಂದೆ ಇರಿಸಿರಲಿಲ್ಲ ಎಂದರು.
ಅದಕ್ಕಾಗಿಯೇ ಮಂಗಳವಾರ ಸೇರಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಿಯವರನ್ನು ಅಭಿನಂದಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿಯವರು ಕಳೆದ 25 ವರ್ಷಗಳಲ್ಲಿ ಅತ್ಯಂತ ನಿಷ್ಕಳಂಕವಾಗಿ ಮತ್ತು ದೇಶ ಹಾಗೂ ನಾಗರಿಕರು ಮೊದಲು ಎಂದುರಾಜಕಾರಣ ಮಾಡಿದ್ದಾರೆ ಎಂದು ಸುರೇಶ್‌ಗೌಡರು ಹೇಳಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಪ್ರಧಾನಿ ಮೋದಿಯವರ ಆಡಳಿತ, ಅವರ ನುಡಿ ಕಾರ್ಯಕರ್ತರರಿಗೆ ಪ್ರೇರಣೆಯಾಗಿ ಉತ್ಸಾಹ ತುಂಬುತ್ತದೆ. ಎಲ್ಲದಕ್ಕಿಂತ ದೇಶ ಮೊದಲು ಎಂಬ ಮೋದಿಯವರ ಆಶಯವನ್ನು ಎಲ್ಲರೂ ಅನುಸರಿಸಿ ದೇಶಕ್ಕಾಗಿ ದುಡಿಯಬೇಕು, ದೇಶಕ್ಕಾಗಿ ಬದುಕಬೇಕು. ಬಡವರು, ದೀನದಲಿತರ ಸೇವೆ ಮಾಡಬೇಕು, 2047 ರ ವೇಳೆ ವಿಕಸಿತ ಭಾರತ ನೋಡಬೇಕು, ಅದಕ್ಕಾಗಿಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ದೇಶವನ್ನು ಮುನ್ನಡೆಸುವ ಒಬ್ಬ ನಾಯಕನಿಗೆ ಇಂಥ ಕನಸುಗಳು ಇರಬೇಕಾಗುತ್ತದೆ. ಕನಸುಗಳು ಇದ್ದರೆ ಮಾತ್ರ ಆತ ಅವುಗಳನ್ನು ನನಸು ಮಾಡಲು ಮುಂದಡಿಯಿಡುತ್ತಾನೆ. ಆದರೆ, ನಮ್ಮದೇಶದ ವಿರೋಧ ಪಕ್ಷಗಳಿಗೆ ಇಂಥಯಾವ ಕನಸುಗಳೂ ಇಲ್ಲ. ಅವು ಕೇವಲ ನಕಾರಾತ್ಮಕ ಮತ್ತು ಅಸಹಕಾರದ ರಾಜಕಾರಣದಲ್ಲಿ ತೊಡಗಿವೆ. ಇದರಿಂದ ದೇಶದ ಪ್ರಗತಿಗೆ ಹಿನ್ನಡೆಯಾಗುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ದೇಶದ ಪ್ರಗತಿಗೆ ಮಾರಕವಾದ ವಿರೋಧ ಪಕ್ಷಗಳ ಷಡ್ಯಂತ್ರಗಳನ್ನು ಸೋಲಿಸುವ ದೃಷ್ಟಿಯಿಂದಲೇ ಪ್ರಧಾನಿ ಇಂದು ಐದು ಘೋಷಣೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ರಾಜ್ಯ ಬಿಜೆಪಿ ಕಾಯದರ್ಶಿ ಅಂಬಿಕಾ ಹುಲಿನಾಯ್ಕರ್, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಗುಬ್ಬಿ ನಂಜೇಗೌಡ ಸೇರಿ ಬಿಜೆಪಿ ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.