-ಗಾನಕೋಗಿಲೆ ಲತಾ ಅವರ 95ನೇ ಜನ್ಮ ದಿನ ಸಂಭ್ರಮ
ಕನ್ನಡಪ್ರಭ ವಾರ್ತೆ ಬೀದರ್
ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ 95ನೇ ಜನ್ಮ ದಿನಾಚರಣೆಯನ್ನು ಸಂಗೀತ ಕಲಾ ಮಂಡಳದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಿತು."ಏಕ್ ಶಾಮ್ ಲತಾಜಿ ಕೆ ನಾಮ್ " ಸಂಗೀತ ಸಂಜೆ ಕೇಳುಗರ ಮನ ತಣಿಸಿತು. ಸ್ಥಳೀಯ ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಗುರುದೇವ, ಪ್ರಿಯಾಂಕಾ ಗುರುದೇವ, ಶಿವಾನಿ ಸ್ವಾಮಿ ಅವರು ಲತಾ ಮಂಗೇಶ್ಕರ್ ಅವರ ಹಿಟ್ ಹಾಡುಗಳಲ್ಲದೆ ಕಿಶೋರ್‌ಕುಮಾರ್, ಮಹ್ಮದ್ ರಫಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮುಂತಾದ ಹಾಡುಗಳನ್ನು ಹಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು.
ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್ ಮಾತನಾಡಿ, ಸಂಗೀತ ಕಲಾ ಮಂಡಳ ಮುಖಾಂತರ ರಾಜೇಂದ್ರಸಿಂಗ್ ಪವಾರ್ ಅವರು ಜಿಲ್ಲೆಯ ಸಂಗೀತ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದರು.
--
ಬೀದರ್ ಸಂಗೀತ ಕಲಾ ಮಂಡಳದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾರತರತ್ನ ಲತಾ ಮಂಗೇಶ್ಕರ್ ಅವರ ಜನ್ಮ ದಿನಾಚರಣೆ ನಿಮಿತ್ತ ಸಂಗೀತ ಕಾರ್ಯಕ್ರಮ ನಡೆಯಿತು.