ಹಿರಿಯರು ಪ್ರಕೃತಿಯೊಂದಿಗೆ ಬೆರೆತುಕೊಂಡು ಜೀವನ ಸಾಗಿಸುತ್ತಿದ್ದರು: ನವೀನ್ ಶೆಟ್ಟಿ ಎಡ್ಮೆಮಾರ್‌

KannadaprabhaNewsNetwork |  
Published : Jul 21, 2026, 03:00 AM IST
ಸಾಹಿತಿ ಹರಿಶ್ಚಂದ್ರ ಪಿ. ಸಾಲಿಯಾನ್‌ರ ಆಟಿ ತಿಂಗಳು ,24ನೇ ಕೃತಿ ಬಿಡುಗಡೆ | Kannada Prabha

ಸಾರಾಂಶ

ಹಿಂದಿನ ಕಾಲದಲ್ಲಿ ಹಿರಿಯರು ಹೆಚ್ಚಿನ ಜ್ಞಾನ ಸಂಪತ್ತನ್ನು ಹೊಂದಿದ್ದು ಪ್ರಕೃತಿಯೊಂದಿಗೆ ಬೆರೆತುಕೊಂಡು ಜೀವನ ಸಾಗಿಸುತ್ತಿದ್ದರು. ಅಂದಿನ ಕಷ್ಟದ ದಿನಗಳಲ್ಲಿ ಆಟಿ ತಿಂಗಳ ಆಚರಣೆಯು ತುಳುವರ ಮೂಲ ನಂಬಿಕೆಯಾಗಿತ್ತು ಎಂದು ನಮ್ಮ ಟಿ ವಿ ಮಂಗಳೂರಿನ ನಿರೂಪಕ, ನವೀನ್ ಶೆಟ್ಟಿ ಎಡ್ಮೆಮಾರ್‌ ಹೇಳಿದರು.

ಮೂಲ್ಕಿ: ಹಿಂದಿನ ಕಾಲದಲ್ಲಿ ಹಿರಿಯರು ಹೆಚ್ಚಿನ ಜ್ಞಾನ ಸಂಪತ್ತನ್ನು ಹೊಂದಿದ್ದು ಪ್ರಕೃತಿಯೊಂದಿಗೆ ಬೆರೆತುಕೊಂಡು ಜೀವನ ಸಾಗಿಸುತ್ತಿದ್ದರು. ಅಂದಿನ ಕಷ್ಟದ ದಿನಗಳಲ್ಲಿ ಆಟಿ ತಿಂಗಳ ಆಚರಣೆಯು ತುಳುವರ ಮೂಲ ನಂಬಿಕೆಯಾಗಿತ್ತು ಎಂದು ನಮ್ಮ ಟಿ ವಿ ಮಂಗಳೂರಿನ ನಿರೂಪಕ, ನವೀನ್ ಶೆಟ್ಟಿ ಎಡ್ಮೆಮಾರ್‌ ಹೇಳಿದರು. ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ನಲ್ಲಿ ಜರುಗಿದ ಹೊಸ ಅಂಗಣ ಪ್ರಕಟಣಾಲಯದಿಂದ ಪ್ರಕಟಿತ; ಹೊಸ ಅಂಗಣದ ಸಂಪಾದಕ ಹರಿಶ್ಚಂದ್ರ ಪಿ. ಸಾಲಿಯಾನ್‌ ಅವರ ಆಟಿ ತಿಂಗಳು , 24ನೇ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಹಿಂದಿನ ಕಷ್ಟದ ಕಾಲದ ಆಟಿ ತಿಂಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿದಿಲ್ಲ. ನಮ್ಮ ಸಂಸ್ಕಾರ, ಸಂಸ್ಕ್ರತಿ, ಪ್ರಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ನೀಡಲಾಯಿತು. ರೋಟರಿ ಕ್ಲಬ್, ಮೂಲ್ಕಿ ಮತ್ತು ತುಳುವರ್ಲ್ಡ್ ಫೌಂಡೇಶನ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಪಡುಬಿದ್ರೆಯ ಅಧ್ಯಕ್ಷ ಕೆ.ಪಿ. ಸದಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದಿನೇಶ್‌ ಶೆಟ್ಟಿ ಸ್ವಾಗತಿಸಿದರು. ಹೊಸ ಅಂಗಣ ಪ್ರಕಾಶನದ ಸಂಪಾದಕ ಹರಿಶ್ಚಂದ್ರ ಪಿ. ಸಾಲಿಯಾನ್ ಪ್ರಸ್ತಾವನೆಗೈದರು, ದಿನೇಶ್‌ ಕೊಲ್ನಾಡು ವಂದಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖೋಟಾ ನೋಟು ಮುದ್ರಿಸುತ್ತಿದ್ದ ಇಬ್ಬರ ಸೆರೆ: 338 ನೋಟು ಜಪ್ತಿ
337 ಕೋಟಿ ರು.ಕ್ರಿಪ್ಟೋ ಅಕ್ರಮ: ಇ.ಡಿ. ತಲಾಶ್