ಕನ್ನಡಪ್ರಭ ವಾರ್ತೆ ಹಾಸನ
ಶಾಂತಿಗ್ರಾಮ ಹಳೆಯ ಶಾಲಾ-ಕಾಲೇಜು ವಿದ್ಯಾರ್ಥಿ ಸಂಘವು ಭಾನುವಾರ ಏರ್ಪಡಿಸಿದ್ದ ಹಿರಿಯ ನಾಗರಿಕರನ್ನು ಸನ್ಮಾನಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳವ ಧಾವಂತದಲ್ಲಿ ಇಂದಿನ ಯುವಕರು ಹಿರಿಯರನ್ನು ಮರೆಯುತ್ತಿದ್ದಾರೆಂದು ಹಿರಿಯರನ್ನು ಅಲಕ್ಷ್ಯಸದೆ ಗೌರವವಾಗಿ ಕಾಣಬೇಕೆಂದು ಕರೆ ಕೊಟ್ಟರು.
ಹಿರಿಯರ ಮಾರ್ಗದರ್ಶನ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಆಗಲಿದೆ. ಹಿರಿಯರನ್ನು ಪ್ರೀತಿ, ಗೌರವ ನೀಡಿ ರಕ್ಷಣೆ ಮಾಡುವುದು ಪ್ರಜ್ಞಾವಂತರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಮಾರಂಭದ ಇನ್ನೋರ್ವ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಹಾಸನ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಿಳಿಸಿದರು. ಹಾಸನ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್ ತಮ್ಮ ಅವದಿಯಲ್ಲಿ 300ರಿಂದ 3000 ಕೋಟಿ ರುಪಾಯಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ವೃದ್ಧಿಸಿ " ಎ " ಗ್ರೇಡ್ ಆಗಿ ಲಾಭದಲ್ಲಿ ನಡೆಯುತ್ತಿರುವ ರಾಜ್ಯದ ಮುಂಚೂಣಿಯಲ್ಲಿರುವ ಬ್ಯಾಂಕ್ ಎಂದು ,ರೈತರ ಹಿತದೃಷ್ಟಿಯಿಂದ ಶಾಂತಿಗ್ರಾಮದಲ್ಲಿ ಹೊಸದಾಗಿ ಬ್ಯಾಂಕ್ ಶಾಖೆ ತೆರೆದಿರುವುದಾಗಿ ಅದರ ಸದುಪಯೋಗ ಪಡೆದು ಕೊಳ್ಳಲು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಗಂಡಸಿಗೌಡರು ವಹಿಸಿದ್ದರು. ಸಂಘದ ಸಂಚಾಲಕ ಜಿ.ಆರ್.ಮಂಜೇಶ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಸಂಘವು ಕೈಗೊಂಡಿರುವ ಸಮಾಜಮುಖಿ ಕಾರ್ಯಗಳನ್ನು ವಿವರಿಸುತ್ತಾ, ಅತಿಥಿಗಳ ಪರಿಚಯ ಮಾಡಿದರು. ಸಂಘದ ವತಿಯಿಂದ ಹಿರಿಯರಾದ ದಾಸಾಬೊಯಿ, ಬೋರೇಗೌಡ, ಜಿ.ಟಿ.ತಿಮ್ಮಪ್ಪಶೆಟ್ಟಿ, ಸೋಮಶೇಖರ್, ಮತ್ತು ಎ.ಆರ್. ಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು.ಹಾಸನ ಜಿಲ್ಲಾ ಸೈನಿಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಎನ್. ನಾಗರಾಜು , ಸಂಘದ ಪ್ರಧಾನ ಕಾರ್ಯದರ್ಶಿ ಎಲ್. ರಂಗಪ್ಪ ಅವರುಗಳು ಇದೇ ಸಂಧರ್ಭದಲ್ಲಿ ಹಿರಿಯರನ್ನು ಉದ್ದೇಶಿಸಿ ಮಾತನಾಡಿದರು. ಮೊದಲು ಪವಿತ್ರ ಮತ್ತು ಅವರ ಸಂಗಡಿಗರಿಂದ ಪ್ರಾರ್ಥನೆ. ನಿವೃತ್ತ ದೈಹಿಕ ಶಿಕ್ಷಕ ಎಸ್. ಆರ್. ವಿಜಯಕುಮಾರ್ ಅವರಿಂದ ಸ್ವಾಗತ ಮತ್ತು ಕಾರ್ಯಕ್ರಮ ನಿರೂಪಣೆ, ಖಜಾಂಚಿ ತಿಮ್ಮಪ್ಪ ಶೆಟ್ಟಿ ವಂದಿಸಿದರು.