ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ನಾಗಮಲೆಯ ಸನಿಹ ಬರುವ ಪಡಸಲನತ್ತ ಗ್ರಾಮದ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸರಿಯಾದ ವಿದ್ಯುತ್ ಇಲ್ಲ:
ಗ್ರಾಮಗಳಲ್ಲಿ ಇಂದಿಗೂ ಮಹಿಳೆಯರು ದಿನನಿತ್ಯ ರಾಗಿಯನ್ನು ಒನಕೆಯಲ್ಲಿ ಕುಟ್ಟಿ ಕಲ್ಲಿನಲ್ಲಿ ಬೀಸಿ ಅದರಿಂದ ಮುದ್ದೆ ಮಾಡಿ ತಿನ್ನುವ ಪರಿಸ್ಥಿತಿಯಲ್ಲಿ ಇದ್ದೇವೆ ಹೀಗಾಗಿ ವಿದ್ಯುತ್ ಇದ್ದರೆ ಗ್ರಾಮದಲ್ಲಿ ಮಿಲ್ಲಿನಲ್ಲಿ ರಾಗಿ ಬೀಸಲು ಅನುಕೂಲವಾಗುತ್ತಿತ್ತು. ರಸ್ತೆ ಇಲ್ಲದೇ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಹೋಗಿ ಬರಲು ತುಂಬಾ ಪ್ರಯಾಸ ಪಡುವಂತಾಗಿದೆ ಇನ್ನು ಮುಂದಾದರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ವಿದ್ಯುತ್ ಹಾಗೂ ರಸ್ತೆ ಕಲ್ಪಿಸಬೇಕು ಎಂದರು.ಗ್ರಾಮದ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ಗ್ರಾಮದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಡೋಲಿಯಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ 18 ಕಿಲೋಮೀಟರ್ ಒತ್ತು ಸಾಗಬೇಕಾಗಿದೆ. ಇಲ್ಲದಿದ್ದರೆ ಪಾಲರ್ ಗ್ರಾಮಕ್ಕೆ 9 ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಸಾಗಿ ತಮಿಳುನಾಡಿನ ಆಸ್ಪತ್ರೆಗೆ ಹೋಗಬೇಕಾಗಿದೆ. ಗ್ರಾಮಕ್ಕೆ ಗ್ಯಾಸ್ ಬಳಕೆ ಮಾಡುವಂತೆ ನೀಡಿ ಮಲೆ ಮಾದೇಶ್ವರ ಬೆಟ್ಟದಲ್ಲಿ 18 ಕಿಲೋಮೀಟರ್ ತಲೆ ಮೇಲೆ ಹೊತ್ತು ಕೊಂಡು ಹೋಗಿ ಗ್ಯಾಸ್ ನ ತರಬೇಕಾಗಿದೆ. ಇಲ್ಲಿನ ಸ್ಥಿತಿ ಗತಿ ಹಿರಿಯ ಅಧಿಕಾರಿಗಳು ಗಮನಹರಿಸಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಾದ ರಸ್ತೆ ಹಾಗೂ ವಿದ್ಯುತ್ ನೀಡಬೇಕೆಂದು ಮನವಿ ಮಾಡಿದರು ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದರು.
ಕುಡಿಯುವ ನೀರಿನ ಸಮಸ್ಯೆ:ಗ್ರಾಮದಲ್ಲಿರುವ ಎರಡು ಬೋರ್ವೆಲ್ ಹ್ಯಾಂಡ್ ಪಂಪ್‌ನಲ್ಲೂ ಸಹ ನೀರು ಕಡಿಮೆಯಾಗಿದೆ ಇರುವ ಎರಡು ತೋಡುಬಾವಿಗಳಲ್ಲಿ ಒಂದು ಬಾವಿಯಲ್ಲಿ ನೀರು ಬರಿದಾಗಿದೆ. ಇನ್ನೊಂದರಲ್ಲಿ ಅಲ್ಪ ಸ್ವಲ್ಪ ಬರುವ ನೀರನ್ನು ದಿನನಿತ್ಯ ಶೇಖರಣೆ ಮಾಡುವುದೇ ಇಲ್ಲಿನ ಮಹಿಳೆಯರ ಪಾಡಾಗಿದೆ. ಮಳೆ ಇಲ್ಲದೆ ಕಂಗಾಲಾಗಿರುವ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಗ್ರಾಮದ ಲಿಂಗರಾಜ್ ಒತ್ತಾಯಿಸಿದ್ದಾರೆ.