ವಿವಿಧೆಡೆ ಮನೆಮನೆಗೆ ತೆರಳಿ ಮೈತ್ರಿ ಅಭ್ಯರ್ಥಿ ಎಚ್ಡಿಕೆ ಪರ ಚುನಾವಣಾ ಪ್ರಚಾರ

KannadaprabhaNewsNetwork |  
Published : Apr 25, 2024, 01:03 AM IST
24ಕೆಎಂಎನ್ ಡಿ23 | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರಗಾಲ ಆವರಿಸುತ್ತಿದೆ. ಕೆಆರ್‌ಎಸ್ ಅಣೆಕಟ್ಟಯಲ್ಲಿ ನೀರಿದ್ದರೂ ನಾಲೆಗಳಿಗೆ ನೀರು ಬಿಡದೆ ತಮಿಳುನಾಡಿಗೆ ಹರಿಸಿ ಬೆಳೆಗಳು ಒಣಗುವಂತೆ ಮಾಡಿದೆ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಎಚ್.ಡಿ.ಕುಮಾರಸ್ವಾಮಿ ಗೆಲುವಿನಿಂದ ಮಂಡ್ಯಜಿಲ್ಲೆ ಅಭಿವೃದ್ಧಿ ಕಾಣುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಜೆಡಿಎಸ್ ಕಾರ್ಯಕರ್ತರು ವಿವಿಧ ಗ್ರಾಮಗಳ ಮನೆಮನೆಗೆ ತೆರಳಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರು.

ಅಣ್ಣೂರು, ಕೆ.ಎಂ.ದೊಡ್ಡಿ, ಹೊನ್ನಾಯಕನಹಳ್ಳಿ, ಗುಡಿಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಕುಮಾರಸ್ವಾಮಿ ಗೆಲ್ಲಿಸಿ ಜಿಲ್ಲೆ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರಗಾಲ ಆವರಿಸುತ್ತಿದೆ. ಕೆಆರ್‌ಎಸ್ ಅಣೆಕಟ್ಟಯಲ್ಲಿ ನೀರಿದ್ದರೂ ನಾಲೆಗಳಿಗೆ ನೀರು ಬಿಡದೆ ತಮಿಳುನಾಡಿಗೆ ಹರಿಸಿ ಬೆಳೆಗಳು ಒಣಗುವಂತೆ ಮಾಡಿದೆ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ಯುವಘಟಕದ ತಾಲೂಕು ಮಾಜಿ ಅಧ್ಯಕ್ಷ ಅಣ್ಣೂರು ನವೀನ್ ಕಿಡಿಕಾರಿದರು.

ಎಚ್.ಡಿ.ಕುಮಾರಸ್ವಾಮಿ ಗೆಲುವಿನಿಂದ ಮಂಡ್ಯಜಿಲ್ಲೆ ಅಭಿವೃದ್ಧಿ ಕಾಣುತ್ತದೆ. ಜೆಡಿಎಸ್ ಬೆಂಬಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಮನವಿ ಮಾಡಿದರು.

ಈ ವೇಳೆ ಗ್ರಾಪಂ ಸದಸ್ಯ ರಾಘವೇಂದ್ರ, ಬಿ.ಆರ್.ರವಿ, ಶುಂಠಿವೆಂಕಟೇಗೌಡ, ವೆಂಕಟೇಶ್, ಬೋರೇಗೌಡ, ಕುಮಾರ್, ಶ್ರೀನಿವಾಸ್, ವಿಶ್ವ, ಕೆಂಚೇಗೌಡರ ಶ್ರೀನಿವಾಸ್, ಪ್ರಮೋದ್, ಪ್ರಶಾಂತ್, ಅಣ್ಣೂರು ಸಿದ್ದರಾಮು, ಯೋಗೇಂದ್ರ, ಶಂಕರೇಗೌಡ, ಚಿಕ್ಕಸಿದ್ದಯ್ಯ, ವಿನು, ಸಂತೋಷ, ಕಾಡೇಗೌಡರ ಜಯರಾಮು, ಪ್ರದೀಪ ಸೇರಿದಂತೆ ಹಲವರಿದ್ದರು.ಗ್ರಾಪಂ ಸದಸ್ಯರು ಸೇರಿ ಕಾಂಗ್ರೆಸ್ ನ ಹಲವರು ಜೆಡಿಎಸ್ ಸೇರ್ಪಡೆ

ಮಳವಳ್ಳಿ:ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶೆಟ್ಟಹಳ್ಳಿ ಗ್ರಾಪಂ ಕಾಂಗ್ರೆಸ್ ಬೆಂಬಲಿತ ನಾಲ್ವರು ಸದಸ್ಯರು, ಬಿಜೆ ಮೊಳೆಯ ಶಿವಮಲ್ಲಯ್ಯ ಸೇರಿದಂತೆ ಹಲವರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಲೋಕಸಭೆ ಚುನಾವಣೆ ಮತದಾನಕ್ಕೆ ಇನ್ನೂ ಎರಡು ದಿನಗಳು ಬಾಕಿ ಇರುವಾಗಲೇ ತಾಲೂಕಿನಲ್ಲಿ ಪಕ್ಷಾಂತರ ಮುಂದುವರೆದಿದೆ. ಶೆಟ್ಟಹಳ್ಳಿ ಗ್ರಾಪಂ ಸದಸ್ಯರಾದ ಚನ್ನಬಸವಯ್ಯ, ನಂಜುಂಡ, ಅಶ್ವಿನಿ ಕುಮಾರ್, ನಾಗರಾಜು, ಬಿಜೆಮೊಳೆಯ ಶಿವಮಲ್ಲಯ್ಯ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.ಡಾ.ಕೆ.ಅನ್ನದಾನಿ ಮಾತನಾಡಿ, ಜೆಡಿಎಸ್ ನ ತತ್ವ, ಸಿದ್ಧಾಂತಗಳನ್ನು ಒಪ್ಪಿ ಹಲವು ಗ್ರಾಪಂ ಸದಸ್ಯರು ಕಾಂಗ್ರೆಸ್ ತೊರೆದು ನಮ್ಮ ಪಕ್ಷ ಸೇರ್ಪಡೆಗೊಂಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಆಡಳಿತವನ್ನೇ ಇಡೀ ದೇಶವೇ ಮೆಚ್ಚಿತು. ಸಾಕಷ್ಟು ಅಭಿವೃದ್ಧಿ ಮೂಲಕ ರಾಜ್ಯದ ಜನರ ಮನಗೆದ್ದಿದ್ದ ಅವರು ಲೋಕಸಭೆಗೆ ಜಿಲ್ಲೆಯಿಂದ ಸ್ಪರ್ಧಿಸಿರುವುದು ಜಿಲ್ಲೆಯ ಪ್ರಗತಿಗೆ ನೆರವಾಗಿದೆ. ಚುನಾವಣೆಯಲ್ಲಿ ಕುಮಾರಣ್ಣ 2 ಲಕ್ಷಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ ಮಾತನಾಡಿ, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನರು ಕೈಹಿಡಿಯಲಿದ್ದಾರೆ ಎಂದರು.ಈ ವೇಳೆ ಹಲವು ಜೆಡಿಎಸ್ ಮುಖಂಡರು ಹಾಜರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌