ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸಂಘದ ಕಚೇರಿಯಲ್ಲಿ ನಡೆದು, ಅಧ್ಯಕ್ಷರಾಗಿ ಸತತ ಐದನೇ ಬಾರಿಗೆ ಎಸ್.ತೋಯಜಾಕ್ಷ ಶೆಟ್ಟಿ, ಉಪಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ತನಿಯಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ಪ್ರಕ್ರಿಯೆ ಇಲ್ಲದೇ ಅವಿರೋಧವಾಗಿ ಆಯ್ಕೆ ನಡೆಯಿತು. ಚುನಾವಣೆಯನ್ನು ರಿಟರ್ನಿಂಗ್ ಅಧಿಕಾರಿಗಳಾದ ಬಿ. ನಾಗೇಂದ್ರ ನಡೆಸಿಕೊಟ್ಟರು.ನಿರ್ದೇಶಕರಾದ ಡಾ. ರಾಜಗೋಪಾಲ ಶರ್ಮ, ನೀಲಪ್ಪ ಗೌಡ, ಲಕ್ಷ್ಮಣ ನಾಯಕ್, ಸುನೀಲ್ ನೆಲ್ಸನ್ ಪಿಂಟೋ, ಜಾರಪ್ಪ ಗೌಡ, ಜಯಲಕ್ಷ್ಮೀ, ರೇವತಿ ಪಿ. ಬೇಬಿ, ಅಬ್ದುಲ್ ಲತೀಪ್, ಶಾಂತ ಹಾಗೂ ಆರ್ಥಿಕ ಬ್ಯಾಂಕಿನ ಪ್ರತಿನಿಧಿಯಾಗಿ ಯೋಗೀಶ್ ಎಚ್ ಆಯ್ಕೆಯಾಗಿರುತ್ತಾರೆ. ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಯಾದ ಪುಷ್ಪಾ ಡಿ ಉಪಸ್ಥಿತರಿದ್ದರು. ಪ್ರಮುಖರಾದ ಪಂಚಗ್ಯಾರಂಟಿ ಯೋಜನೆ ಪುತ್ತೂರು ಕ್ಷೇತ್ರದ ಅಧ್ಯಕ್ಷರಾದ ಉಮಾನಾಥ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್, ಅಧ್ಯಕ್ಷರಾದ ಮಹಮ್ಮದ್ ಪಾರೂಕ್, ಪೆರ್ನೆ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾದ ವನಿತಾ, ಸಂಘದ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ಶಾಫಿ, ಮಾಜಿ ನಿರ್ದೇಶಕರಾದ, ವಿಶ್ವನಾಥ ಶೆಟ್ಟಿ, ಬಶೀರ್, ಮಹಮ್ಮದ್ ಶರೀಫ್, ಚೆನ್ನಕೇಶವ ಯಾನೆ ಚೆನ್ನ ಮೇರ, ಸಂಘದ ಸದಸ್ಯರಾಗಿರುವ ಪದ್ಮಯ ಗೌಡ, ಪುಷ್ಕರ ಪೂಜಾರಿ, ಮಿತ್ರದಾಸ ರೈ, ಸುಂದರ, ಪುರುಷೋತ್ತಮ ಗೌಡ, ರವೀಂದ್ರ ಶೆಟ್ಟಿ, ಚೇತನ್ ಕುಮಾರ್, ಉಮೇಶ್ ಪೂಜಾರಿ, ರಾಜಶೇಖರ್ ಶೆಟ್ಟಿ, ಅಶ್ರಫ್ ಉಪಸ್ಥಿತರಿದ್ದರು.ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ತೋಯಜಾಕ್ಷ ಶೆಟ್ಟಿ ಆಯ್ಕೆ
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸಂಘದ ಕಚೇರಿಯಲ್ಲಿ ನಡೆದು, ಅಧ್ಯಕ್ಷರಾಗಿ ಸತತ ಐದನೇ ಬಾರಿಗೆ ಎಸ್.ತೋಯಜಾಕ್ಷ ಶೆಟ್ಟಿ, ಉಪಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ತನಿಯಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.