ರಾಮನಗರ: ಬಿಡದಿ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾದ 3 ವರ್ಷಗಳ ತರುವಾಯ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಸೆ.19ರಂದು ಚುನಾವಣೆ ನಿಗಿದಯಾಗಿದೆ. ಬಿಡದಿ ಪುರಸಭೆಯ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ಅವಕಾಸ ಕಲ್ಪಿಸಲಾಗಿದೆ.
ಪುರಸಭೆಯಲ್ಲಿ 23 ಸದಸ್ಯರ ಬಲವಿದ್ದು, ಇದರಲ್ಲಿ 14 ಸದಸ್ಯರು ಜೆಡಿಎಸ್ ಸಂಸದ ಸಿ.ಎನ್.ಮಂಜುನಾಥ್ ಅವರ ಒಂದು ಮತ ಸೇರಿ ಒಟ್ಟು 15 ಮತಗಳಾಗಲಿವೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ 9 ಸದಸ್ಯರ ಜೊತೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಒಂದು ಮತ ಸೇರಿದರೆ ಒಟ್ಟು 10 ಮತಗಳಾಗಲಿವೆ.
ಈ ಹಿಂದೆ ಬಿಡದಿ ಪುರಸಭೆ ಅಸ್ತಿತ್ವಕ್ಕೆ ಬಂದಾಗ ಜೆಡಿಎಸ್ ಪಕ್ಷ ಅಧ್ಯಕ್ಷ -ಉಪಾಧ್ಯಕ್ಷ ಗದ್ದುಗೆಯನ್ನು ಅಲಂಕರಿಸಿತ್ತು, ಇದೀಗ ಮತ್ತೆ ಬಹುಮತ ಹೊಂದಿರುವ ಜೆಡಿಎಸ್ ಪಕ್ಷ ಬಹುಪಾಲು ಗದ್ದುಗೆ ಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿದೆ.ಮಾಜಿ ಶಾಸಕ ಎ.ಮಂಜುನಾಥ್ ಅವರು ಪಕ್ಷದ ಮುಖಂಡರು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣ ಅವರು ಗದ್ದುಗೆ ಹಿಡಿಯಲು ಯಾವ ರಣತಂತ್ರ ರೂಪಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನಿಂದ ಪುರಸಭೆ ಸದಸ್ಯರಾಗಿರುವ 11ನೇ ವಾರ್ಡಿನ ಎಂ.ಎನ್. ಹರಿಪ್ರಸಾದ್, 20ನೇ ವಾರ್ಡ್ ನ ಯಲ್ಲಮ್ಮ, 22ನೇ ವಾರ್ಡಿನ ಭಾನುಪ್ರಿಯ ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್ ನಿಂದ 17ನೇ ವಾರ್ಡಿನ ಸದಸ್ಯ ಶ್ರೀನಿವಾಸ್, 21ನೇ ವಾರ್ಡಿನ ಸದಸ್ಯ ಬಿ.ರಾಮಚಂದ್ರಯ್ಯ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವ ಕಾರಣ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬಹುದಾಗಿದೆ.ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ 2ನೇ ವಾರ್ಡಿನ ಸಿ.ಆರ್.ಮನು , 3ನೇ ವಾರ್ಡ್ ನ ಸದಸ್ಯೆ ಮಂಜುಳಾ ಗೋವಿಂದಯ್ಯ, 10ನೇ ವಾರ್ಡಿನ ಸದಸ್ಯೆ ಆಯಿಷಾ ಖಲೀಲ್ ಆಕಾಂಕ್ಷಿಗಳಾದರೆ, ಕಾಂಗ್ರೆಸ್ ನಿಂದ 15ನೇ ವಾರ್ಡಿನ ಬಿಂದಿಯಾ ಮಂಜುನಾಥ್ ಸ್ಪರ್ಧಿಸಲು ಅವಕಾಶ ಇದೆ.
ಅಧಿಕಾರ ಹಂಚಿಕೆ ಸೂತ್ರ:ಬಿಡದಿ ಪುರಸಭೆ ಅಧಿಕಾರ ಶಾಸಕ ಬಾಲಕೃಷ್ಣ ಮತ್ತು ಮಾಜಿ ಶಾಸಕ ಮಂಜುನಾಥ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ತಲಾ 10 ತಿಂಗಳಂತೆ ಅಧಿಕಾರ ಹಂಚಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಪಕ್ಷದ ವರಿಷ್ಠರು ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಸೂಚಿಸಿದವರು ಅಧಿಕಾರ ದೊರಕಲಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಆಡಳಿತ ರೂಢ ಕಾಂಗ್ರೆಸ್ ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡಿದೆ. ಕಾಂಗ್ರೆಸ್ ನಿಂದ ಸಂಸದರು ಆಯ್ಕೆಯಾಗಿದ್ದರೆ ಪ್ರಭಾವ ಬಳಸಿ ಜೆಡಿಎಸ್ ನ ಮೂವರು ಸದಸ್ಯರನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸಿದ್ದರು. ಆದರೀಗ ಸದಸ್ಯ ಬಲ ಇಲ್ಲದಿರುವುದು ಜೊತೆಗೆ ಬಂಡವಾಳ ಹೂಡಲು ಯಾರು ಮುಂದಾಗುತ್ತಿಲ್ಲ. ಹೀಗಾಗಿ ಶಾಸಕ ಬಾಲಕೃಷ್ಣರವರು ಪುರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಯಾವ ರಾಜಕೀಯ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.ಬಾಕ್ಸ್ ............
ಚುನಾವಣಾ ವೇಳಾಪಟ್ಟಿ :ಬಿಡದಿ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಪುರಸಭಾ ಕಾರ್ಯಾಲಯದಲ್ಲಿ ನಡೆಯಲಿದ್ದು, ಸೆ,19 ರಂದು ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ನಾಮಪತ್ರವನ್ನು ಸಲ್ಲಿಸಬಹುದಾಗಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭವಾಗಲಿದ್ದು, 1ರಿಂದ 1-15ರವರೆಗೆ ನಾಮಪತ್ರಗಳ ಪರಿಶೀಲನೆ, 1-15ರಿಂದ 1-30ರವರೆಗೆ ಉಮೇದುವಾರಿಕೆ ಹಿಂಪಡೆಯ ಬಹುದಾಗಿದೆ. ಅಗತ್ಯಬಿದ್ದಲ್ಲಿ 1.30ಕ್ಕೆ ಚುನಾವಣೆ ನಡೆಯಲಿದ್ದು, ನಂತರ ಅಂತಿಮ ಫಲಿತಾಂಶ ಘೋಷಣೆ ಯಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
12ಕೆಆರ್ ಎಂಎನ್ 1,2,3,4,5.ಜೆಪಿಜಿ1.ಬಿಡದಿ ಪುರಸಭೆ ಕಾರ್ಯಾಲಯ
2.ಎಂ.ಎನ್ .ಹರಿಪ್ರಸಾದ್3.ಎಚ್ .ಆರ್. ಭಾನುಪ್ರಿಯ
4.ಯಲ್ಲಮ್ಮ5.ಶ್ರೀನಿವಾಸ್
6.ರಾಮಚಂದ್ರಯ್ಯ