ದೋಟಿಹಾಳ ಸಹಕಾರಿ ಸಂಘದ ಚುನಾವಣೆ: ಕಳಕಪ್ಪ ಗೌಡರ ಗೆಲುವು

KannadaprabhaNewsNetwork |  
Published : Dec 30, 2024, 01:04 AM IST
ಪೋಟೊ29ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಜರುಗಿತು. 29ಕೆಎಸಟಿ1ಎ: ಕುಷ್ಟಗಿ ತಾಲೂಕಿನ ದೋಟಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತದಾನವನ್ನು ಮಾಡಿದರು. 29ಕೆಎಸಟಿ1ಬಿ: ಸಾಲಗಾರರಲ್ಲದ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಳಕಪ್ಪ ಗೌಡರ. | Kannada Prabha

ಸಾರಾಂಶ

ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಅಂಗವಾಗಿ ನಡೆದ ಮತದಾನ ಶಾಂತಿಯುತವಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಅಂಗವಾಗಿ ನಡೆದ ಮತದಾನ ಶಾಂತಿಯುತವಾಗಿ ಜರುಗಿತು.

ಚುನಾವಣೆಯ ಹಿನ್ನೆಲೆ ನೇಮಕ ಮಾಡಲಾದ ಬೂತ್ ಅಧಿಕಾರಿಗಳು ಮತದಾರರ ಐ.ಡಿ. ಕಾರ್ಡಿನ ಹೆಸರು ನೊಂದಾಯಿಸಿಕೊಂಡು, ಮತಚೀಟಿಯನ್ನು ನೀಡಿ, ಮತ್ತು ಮತದಾನ ಮಾಡುವ ವ್ಯಕ್ತಿಯ ಎಡಗೈ ಹೆಬ್ಬೆಟ್ಟಿಗೆ ಶಾಯಿಯ ಮೂಲಕ ಗುರುತನ್ನು ಮಾಡಿ, ಮತವನ್ನು ನೀಡಲು ಅವಕಾಶ ಮಾಡಿದರು.ಮತಗಟ್ಟೆಯಿಂದ 100 ಮೀಟರ್ ಅಂತರದಿಂದ ಒಳಗೆ ಬಾರದಂತೆ ಪೊಲೀಸ್‌ ಸಿಬ್ಬಂದಿ ಟ್ಟೆಚ್ಚರ ವಹಿಸಿದ್ದರು. ಕೆಲವು ಅಂಗಡಿಗಳನ್ನು ಬಂದ್ ಮಾಡಿಸಿದ್ದರು.

ಒಟ್ಟು 12 ಸ್ಥಾನದ ಪೈಕಿ ಮೂರು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಒಂಬತ್ತು ಸ್ಥಾನಗಳಾದ ಸಾಲಗಾರರ ಕ್ಷೇತ್ರದ 8 ಸ್ಥಾನಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರ 1 ಸ್ಥಾನಕ್ಕೆ ಮತದಾನದ ಪ್ರಕ್ರಿಯೆ ನಡೆಯಿತು.ಒಟ್ಟು ಸಾಲಗಾರರ ಕ್ಷೇತ್ರದ ಮತದಾರರು 535 ಜನರು ಸಾಲಗಾರರ ಕ್ಷೇತ್ರದ ಮತದಾರರ ಪೈಕಿ 491 ಜನ ಮತದಾನವನ್ನು ಮಾಡಿದರು. ಸಾಲಗಾರರಲ್ಲದ ಕ್ಷೇತ್ರಕ್ಕೆ 196 ಜನರ ಪೈಕಿ 177 ಜನರು ಮತದಾನ ಮಾಡಿದರು.

ಕಳಕಪ್ಪ ಗೌಡರ ಗೆಲುವು:

ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ ಕಳಕಪ್ಪ ಗೌಡರ ಎಂಬುವವರು 91 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದರು. ಇನ್ನೋರ್ವ ಅಭ್ಯರ್ಥಿ ದೊಡ್ಡಬಸಪ್ಪ ಜಂಬಲದಿನ್ನಿ 79 ಮತ ಪಡೆದುಕೊಂಡು ಪರಾಭವಗೊಂಡರು. ಮತ್ತೋರ್ವ ಅಭ್ಯರ್ಥಿ ಕೃಷ್ಣರಾವ ಕುಲಕರ್ಣಿ ಮೂರನೇ ಸ್ಥಾನಕ್ಕಿಳಿದರು.

7 ಮತಗಳು ತಿರಸ್ಕೃತಗೊಂಡವು.ಉಳಿದ ಎಂಟು ಸ್ಥಾನಗಳಿಗೆ ನಡೆದ ಮತದಾನದ ಪ್ರಕ್ರಿಯೆಯು ಮುಗಿದಿದ್ದು, ಮತ ಎಣಿಕೆಯು ರಾತ್ರಿ ಸುಮಾರು 10 ಗಂಟೆವರೆಗೆ ನಡೆಯಬಹುದು ಎಂದು ಚುನಾವಣೆಯ ಅಧಿಕಾರಿಗಳು ಮಾಹಿತಿ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ