ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಕೆ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಶಶಿಧರ ಕಾಡುಕೊತ್ತನಹಳ್ಳಿ ಅವರು ಆಯ್ಕೆಯಾಗಿದ್ದಾರೆ.ರಾಜ್ಯ ಸಮಿತಿ ಸದಸ್ಯರಾಗಿ ಸಿ.ಎನ್.ಮಂಜುನಾಥ, ಖಜಾಂಚಿಯಾಗಿ ಆರ್.ಎನ್.ನಂಜುಂಡಸ್ವಾಮಿ, ಉಪಾಧ್ಯಕ್ಷರ ಸ್ಥಾನಕ್ಕೆ ಕೆ.ಸಿ.ಮಂಜುನಾಥ, ರವಿ ಸಾವಂದಿಪುರ, ಸಿ.ಎ.ಲೋಕೇಶ್ ಚಿನಕುರಳಿ, ಕಾರ್ಯದರ್ಶಿಗಳಾಗಿ ಎನ್.ನಾಗರಾಜು (ನಾಗೇಶ್), ಕೆ.ಎನ್.ನಾಗೇಗೌಡ, ಎಚ್.ಶಿವರಾಜು ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಎನ್.ಅಶೋಕ್, ಸಿ.ಆನಂದ, ಕುಮಾರಸ್ವಾಮಿ, ಎ.ಬಿ.ಚೇತನ್ ಕುಮಾರ್, ಸಿ.ಎಸ್.ದೀಪಕ್, ಕೆ.ಎನ್.ಪುಟ್ಟಲಿಂಗೇಗೌಡ, ಎಸ್.ಪುಟ್ಟಸ್ವಾಮಿ, ಮೋಹನ್ ಕುಮಾರ್ ರಾಗಿಮುದ್ದನಹಳ್ಳಿ, ಡಿ.ಡಿ.ರೋಹಿತ್, ಎಂ.ಶೇಷು, ಎಸ್.ಸಿ.ಸಂತೋಷ್, ಆಂದೋಲನ ಸಿದ್ದೇಗೌಡ, ಕೆ.ಆರ್.ವಿನಯ್, ವಿನೋದ್, ಎಂ.ನಾಗೇಶ್ ಚುನಾಯಿತರಾದರು.ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಪದಾಧಿಕಾರಿಗಳು ಹಾಗೂ 15 ನಿರ್ದೇಶಕರ ಪೈಕಿ 12 ಮಂದಿ ಆಯ್ಕೆಯಾಗಿದ್ದು, ಇಬ್ಬರು ಪಕ್ಷೇತರರು ಚುನಾಯಿತರಾಗಿದ್ದರೆ, ತೇಜಸ್ವಿ ಹಾಗೂ ವಿನೋದ್ ಅವರಿಗೆ ತಲಾ 113 ಮತಗಳು ಲಭಿಸಿದ ಹಿನ್ನೆಲೆಯಲ್ಲಿ ಲಾಟರಿಯಲ್ಲಿ ವಿನೋದ್ ಅವರಿಗೆ ಜಯ ಲಭಿಸಿತು.
ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮತದಾನ ನಡೆಯಿತು. ಒಟ್ಟು 221 ಮತಗಳ ಪೈಕಿ 220 ಮತಗಳು ಚಲಾವಣೆಯಾಗಿದ್ದು, ಮೂರು ಅಸಿಂಧುವಾದವು.ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿವನಂಜಯ್ಯ ಅವರು ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ಕಾರ್ಯನಿರ್ವಹಿಸಿದರು.
ಭಕ್ತ ಕನಕದಾಸ ಜಯಂತಿ ಆಚರಣೆಪಾಂಡವಪುರ: ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಭಕ್ತ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮದ ಕುರುಬ ಸಮುದಾಯದ ಮುಖಂಡರು ಭಕ್ತ ಕನಕದಾಸರ ಭಾವಚಿತ್ರಕ್ಕೆ ವಿವಿಧ ವಿಶೇಷ ಹೂವುಗಳಿಂದ ಅಲಂಕರಿಸಿ ಪಟಾಕಿ ಸಿಡಿಸಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.ಬಳಿಕ ಗ್ರಾಮದ ಕುರುಬರ ಆರಾಧ್ಯದೈವ ಶ್ರೀಚನ್ನಿಗರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆಸಲ್ಲಿಸಿದರು. ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.