ಮಧುಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಧುಗಿರಿ ತಾಲೂಕು ಘಟಕದ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎನ್.ರಾಜೇಂದ್ರಬಾಬು ,ಪ್ರಧಾನ ಕಾರ್ಯದರ್ಶಿಯಾಗಿ ವೈ.ಸೋಮಶೇಖರ್, ಉಪಾಧ್ಯಕ್ಷರಾಗಿ ಸತೀಶ್, ಗಂಗಾಧರ್ ವಿ., ಖಜಾಂಚಿಯಾಗಿ ಕಂಬಣ್ಣ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ಕಂಠಿ ಮಂಜುನಾಥ್, ಸುರೇಶ್ ಐಡಿಹಳ್ಳಿ ಮತ್ತು ನಿರ್ದೇಶಕರಾಗಿ ಹೊಸಕೆರೆ ಗೋವಿಂದರಾಜು,ಎಂ.ಎಸ್.ರಘುನಾಥ್, ರಾಮರೆಡ್ಡಿ, ಕೆ.ಎಸ್.ರಾಮಚಂದ್ರರಾವ್, ಲಕ್ಷ್ಮೀನರಸಪ್ಪ, ಶೇಷನಾಯ್ಕ್, ಸಿರಾಜ್ ಅಹಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿ ಜಯನುಡಿ ಜಯಣ್ಣ ಪ್ರಕಟಣೆಯಲ್ಲಿ ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ಸತೀಶ್ , ಯಶಸ್, ಶ್ರೀವತ್ಸ, ಬಿ.ಎಲ್.ನಂದೀಶ್, ಮಾರುತಿ ಗಂಗಹನುಮಯ್ಯ, ಜಗನ್ನಾಥ್, ಕಾಳೇನಹಳ್ಳಿ ರಘು, ಸುವರ್ಣ ಪ್ರಗತಿ ಪರಮೇಶ್ವರ್, ರಾಮಚಂದ್ರ, ಜಿಲ್ಲಾ ನಿರ್ದೇಶಕ ದೊಡ್ಡೇರಿ ಕಣಿಮಯ್ಯ ಇತರರಿದ್ದರು.