ನವಲಗುಂದ:

ಕಲಿಕೆ ನಿರಂತರ ಅಭ್ಯಾಸವಾಗಬೇಕು. ಮೊಬೈಲ್ ಬಳಕೆಯಿಂದ ದೂರವಿರಲು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬಿಡುವಿನ ವೇಳೆ ಕನ್ನಡಪ್ರಭ ಯುವ ಆವೃತ್ತಿ ಓದಿ ಜ್ಞಾನದ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವರೆಡ್ಡಿ ನವಲಗುಂದ ಹೇಳಿದರು.

ತಾಲೂಕಿನ ತಿರ್ಲಾಪುರ ಗ್ರಾಮದ ಗ್ರಾಮೀಣ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ಪತ್ರಿಕೆ ವಿದ್ಯಾರ್ಥಿಗಳಿಗೆ ಪೂರಕವಾದ ಗಣಿತ, ವಿಜ್ಞಾನ, ಸಮಾಜ ಸೇರಿದಂತೆ ಹಲವಾರು ವಿಭಿನ್ನವಾದ ರೀತಿಯ ವಿಷಯಗಳನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಕೇವಲ ಒಂದು ರುಪಾಯಿಗೆ ಪತ್ರಿಕೆ ನೀಡುತ್ತಿರುವುದು ಶ್ಲಾಘನಿಯ. ಮಕ್ಕಳು ಯುವ ಆವೃತ್ತಿ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಎಚ್‌.ವಿ. ಕುರಹಟ್ಟಿ, ಈ ಯುವ ಅವೃತ್ತಿಯು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಿ. ನಾನು ಕೂಡ ಈ ಆವೃತ್ತಿಯನ್ನು ತಪ್ಪದೆ ಓದುತ್ತಿದ್ದೇನೆ ಎಂದರು.


ವಿದ್ಯಾರ್ಥಿಗಳು ಯುವ ಆವೃತ್ತಿ ಕುರಿತು ಅನಿಸಿಕೆ ಹಂಚಿಕೊಂಡರು. ಇದೇ ವೇಳೆ ಶಾಲೆ ಆಡಳಿತ ಮಂಡಳಿಯಿಂದ ಸಂಜೀವರಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯಶಿಕ್ಷಕ ಬಿ.ಎಚ್. ಅಡ್ನೂರ, ಪಿ.ಎಸ್. ಅಂಗಡಿ, ಆರ್.ಎಲ್. ಸಣ್ಣಕ್ಕನವರ, ಮಂಜುಳಾ ಒಣರೊಟ್ಟಿ, ಬಿ.ಎಂ. ಕಲ್ಲೇದ, ಎಸ್.ಎಸ್. ಚವ್ಹಾಣ, ಎಸ್.ಎಸ್. ಜಂಗಣ್ಣವರ, ಕೆ.ಬಿ. ರಬ್ಬನಗೌಡ್ರ, ಎಸ್.ವೈ. ಮೆಣಸಗಿ, ಮಂಜುನಾಥ ಶಿವಳ್ಳಿ, ಕನ್ನಡಪ್ರಭ ಪ್ರಸಾರಂಗ ವಿಭಾಗದ ಸಹಾಯಕ ವ್ಯವಸ್ಥಾಪಕ ನಿಂಗರಾಜ ಹುಲ್ಲೂರ ಸೇರಿದಂತೆ ಇತರರು ಇದ್ದರು.