ಕೊಪ್ಪಳ:
ಜಂಗಮ ಸಮಾಜದ ಶ್ರೀವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಕೊಪ್ಪಳ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನಗರದ ಶ್ರೀ ರೇಣುಕಾಚಾರ್ಯ ಭವನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೊಟ್ರಬಸಯ್ಯ ಹಿರೇಮಠ, ಅಧ್ಯಕ್ಷರಾಗಿ ಹಂಪಯ್ಯ ಮೆತಗಲ್, ಉಪಾಧ್ಯಕ್ಷರಾಗಿ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕಾರ್ಯದರ್ಶಿಯಾಗಿ ಬಸಯ್ಯ ಹಿರೇಮಠ, ಸಹ ಕಾರ್ಯದರ್ಶಿಯಾಗಿ ಜಗದೀಶಯ್ಯ ನೀರಲಗಿ, ಖಜಾಂಚಿಯಾಗಿ ಚಿದಾನಂದಯ್ಯ, ಸದಸ್ಯರಾಗಿ ಬಸಯ್ಯ ಹಿರೇಮಠ, ಶಿವಕುಮಾರ ಹಿರೇಮಠ, ಪಂಪಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ವಿಜಯಕುಮಾರ ವಸ್ತ್ರದ, ಮಲ್ಲಯ್ಯ ಸಂಕಿನಮಠ, ಜಯಶ್ರೀ ಗವಿಸಿದ್ದಯ್ಯ ಹಿರೇಮಠ, ಲಲಿತಾ ಸಿದ್ದಲಿಂಗಯ್ಯ ಹಿರೇಮಠ ಆಯ್ಕೆಯಾದರು. ಸಭೆಯಲ್ಲಿ ಪ್ರಮುಖರಾದ ವಿ.ಎಂ. ಭೂಸನೂರಮಠ, ವಿ.ಕೆ. ಜಾಗಟಗೇರಿ, ಸಿದ್ದಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ಕೊಟ್ರಬಸಯ್ಯ ಸಾಲಿಮಠ, ಚಂದ್ರಶೇಖರಯ್ಯ ಸೊಪ್ಪಿಮಠ, ಶಂಕ್ರಯ್ಯ ಸಾಲಿಮಠ, ದಯಾನಂದ, ಶರಣಯ್ಯ ಟೈಲರ್, ವೆಂಕಯ್ಯ ಹಿರೇಮಠ, ಜೆ.ಜೆ. ಹಿರೇಮಠ ಸೇರಿದಂತೆ ಅನೇಕ ಜಂಗಮ ಸಮಾಜದವರು ಇದ್ದರು.ಕೊಪ್ಪಳ ಇನ್ನರ್ ವ್ಹೀಲ್ ಕ್ಲಬ್‌ಗೆ ರಾಜ್ಯ ಪ್ರಶಸ್ತಿ ಪ್ರದಾನ:ಅಂಗವಿಕಲರ ಪುನಃಶ್ಚೇತನ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಕಳೆದ 29 ವರ್ಷಗಳಿಂದ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕೊಪ್ಪಳದ ಇನ್ನರ್ ವ್ಹೀಲ್ ಕ್ಲಬ್‌ಗೆ ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2024ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ರಾಜ್ಯ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಉಮಾ ಮಹೇಶ ತಂಬ್ರಳ್ಳಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಕ್ಲಬ್ ನ ಸಂಸ್ಥಾಪಕ ಸದಸ್ಯೆ ಡಾ. ರಾಧಾ ಕುಲಕರ್ಣಿ, ಪದಾಧಿಕಾರಿಗಳಾದ ತ್ರಿಶಾಲಾ ಪಾಟೀಲ್, ಸುಜಾತಾ ಪಟ್ಟಣಶೆಟ್ಟಿ, ವಿದ್ಯಾ ಬೆಟಗೇರಿ, ಪದ್ಮಾ ಜೈನ್, ಮಹೇಶ್ ತಂಬ್ರಳ್ಳಿ ಹಾಗೂ ಸಾಗರ್ ಜೈನ್ ಭಾಗವಹಿಸಿದ್ದರು.