ಕೋರಂ ಇದ್ದರೂ ಚುನಾವಣೆ ಮುಂದೂಡಿಕೆ, ವಾಗ್ವಾದ

KannadaprabhaNewsNetwork |  
Published : Sep 13, 2025, 02:05 AM IST
12ುಲು11111 | Kannada Prabha

ಸಾರಾಂಶ

ಜೂ. 19ರಂದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಚೆನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕನಕಪ್ಪ ಕನಕಗಿರಿ ಮತ್ತು ನಾಗರಾಜ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಕೋರಂ ಭರ್ತಿಯಾಗದ ಕಾರಣ ಚುನಾವಣೆ ಮುಂದೂಡಲಾಗಿತ್ತು. ಪುನಃ ಚುನಾವಣೆಯನ್ನು ಸೆ. 12ರಂದು ನಿಗದಿ ಮಾಡಿದ್ದರೂ ಕೋರಂ ಇಲ್ಲವೆಂದು ಎರಡನೇ ಬಾರಿಗೆ ಮುಂದೂಡಲಾಯಿತು.

ಗಂಗಾವತಿ:

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌) ಸಮಿತಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಕೋರಂ ಭರ್ತಿಯಾಗಿದ್ದರೂ ಚುನಾವಣೆ ಮುಂದೂಡಿದ ಘಟನೆ ಶುಕ್ರವಾರ ನಡೆದಿದೆ. ಈ ವೇಳೆ ನಿರ್ದೇಶಕರು ಚುನಾವಣಾಧಿಕಾರಿ ವಿರುದ್ಧ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು

ಜೂ. 19ರಂದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಚೆನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕನಕಪ್ಪ ಕನಕಗಿರಿ ಮತ್ತು ನಾಗರಾಜ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಕೋರಂ ಭರ್ತಿಯಾಗದ ಕಾರಣ ಚುನಾವಣೆ ಮುಂದೂಡಲಾಗಿತ್ತು. ಪುನಃ ಚುನಾವಣೆಯನ್ನು ಸೆ. 12ರಂದು ನಿಗದಿ ಮಾಡಿದ್ದರೂ ಕೋರಂ ಇಲ್ಲವೆಂದು ಎರಡನೇ ಬಾರಿಗೆ ಮುಂದೂಡಲಾಯಿತು.ಚಕಮಕಿ:

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಒಟ್ಟು 14 ನಿರ್ದೇಶಕರಲ್ಲಿ ಇಬ್ಬರು ಅನುರ್ಜಿತಗೊಂಡಿದ್ದರು. ಆದರೆ, ಇವರಿಗೆ ರಾಜ್ಯ ಚುನಾವಣಾ ಪ್ರಾಧಿಕಾರ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಹೀಗಾಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸಿಇಒ ಸಹ 14 ಸದಸ್ಯರ ಪಟ್ಟಿ ಕಳಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನಪ್ಪ ಮಳಗಿ ಬೆಂಬಲಿಗರು 8 ನಿರ್ದೇಶಕರಲ್ಲಿ ಇಬ್ಬರು ಅನುರ್ಜಿತರಾಗಿದ್ದಾರೆ. ಇದನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು ಕೇವಲ 4 ನಿರ್ದೇಶಕರನ್ನು ಗಮನಿಸಿ ಕೋರಂ ಇಲ್ಲವೆಂದು ಹೇಳಿದ್ದೇ ವಿವಾದಕ್ಕೆ ಕಾರಣವಾಯಿತು.

ಪೊಲೀಸರೊಂದಿಗೆ ವಾಗ್ವಾದ:

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಚೆನ್ನಪ್ಪ ಮಳಗಿ ಚುನಾವಣಾಧಿಕಾರಿ ಶಿವಾಜಿ ಜತೆ ಚರ್ಚಿಸುತ್ತಿದ್ದ ವೇಳೆ ಪೊಲೀಸರು ಆಗಮಿಸಿ ಹೊರ ಹೋಗುವಂತೆ ಹೇಳಿದ್ದರಿಂದ ವಾಗ್ವಾದ ನಡೆಯಿತು. ನಂತರ ಚುನಾವಾಣಾಧಿಕಾರಿ ಶಿವಾಜಿ ಹಿಂಬರಹ ನೀಡಿ ಚುನಾವಣೆ ಮುಂದೂಡಿದ ಬಗ್ಗೆ ಪ್ರಕಟಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ 8 ನಿರ್ದೇಶಕರ ಬಹುಮತ ಇದ್ದರು ಸಹ ಉದ್ದೇಶ ಪೂರ್ವಕವಾಗಿ ಚುನಾವಾಣಾಧಿಕಾರಿಗಳು ಚುನಾವಣೆ ಮುಂದೂಡಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಕೈವಾಡವೇ ಕಾರಣ.

ಚೆನ್ನಪ್ಪ ಮಳಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ನಿರ್ದೇಶಕರು ಅನರ್ಹರಾಗಿದ್ದರು. ಇವರಿಗೆ ಮತ ಹಾಕಲು ಅವಕಾಶ ನೀಡಿರುವುದು ತಪ್ಪು. ನಮ್ಮಲ್ಲಿ ಬಹುಮತ ಇದ್ದರೂ ಸಹ ಚುನಾವಣೆಗೆ ಭಾಗವಹಿಸಿಲ್ಲ.

ಜೋಗದ ನಾರಾಯಣಪ್ಪ ನಾಯಕ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ