ಲಕ್ಷ್ಮೇಶ್ವರ: ವಿದ್ಯುತ್ ಕಳ್ಳತನ ಅಥವಾ ದುರುಪಯೋಗ ಶಿಕ್ಷಾರ್ಹ ಅಪರಾಧದವಾಗಿದೆ. ವಿದ್ಯುತ್ ಕಳ್ಳತನದಿಂದ ಪ್ರಾಣ ಹೋಗುವ ಅಪಾಯ ಹೆಚ್ಚಾಗಿರುತ್ತದೆ ಎಂದು ಹೆಸ್ಕಾಂ ಜಾಗೃತ ದಳದ ಇನ್‌ಸ್ಪೆಕ್ಟರ್ ಎಸ್.ಎಚ್. ಯಳ್ಳೂರ ಹೇಳಿದರು.
ವಿದ್ಯುತ್ ಕಳ್ಳತನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ವಿದ್ಯುತ್ ಕಳ್ಳತನ ಹಾಗೂ ದುರುಪಯೋಗ ಪಡಿಸಿಕೊಳ್ಳುವುದನ್ನು ನಿಲ್ಲಿಸುವ ಮೂಲಕ ಸಾರ್ವಜನಿಕರು ಇಲಾಖೆಯ ಕಾರ್ಯಗಳಿಗೆ ಸಹಕಾರ ನೀಡಬೇಕು. ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಸರ್ಕಾರದ ಯೋಜನೆಗೆ ಬೆಂಬಲ ನೀಡಬೇಕು. ವಿದ್ಯುತ್ ಕಳ್ಳತನ ಮಾಡುವ ವೇಳೆ ಜೀವ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಜನರು ವಿದ್ಯುತ್ ಕಳ್ಳತನಕ್ಕೆ ಮುಂದಾಗಬಾರದು ಎಂದು ಹೇಳಿದರು.
ಈ ವೇಳೆ ಹೆಸ್ಕಾಂ ಎಇಇ ಆಂಜನಪ್ಪ, ವಿಜಯಕುಮಾರ ತಳವಾರ, ಐ.ಎಸ್. ಜವಳಿ, ರವಿ ರಾಥೋಡ, ಗುರುರಾಜ ಸಿ., ಬಿ.ಎಂ. ಹೆಬ್ಬಾಳ, ಕಿರಣಕುಮಾರ ಪಮ್ಮಾರ, ಅಮರೇಶ್ವರ ಹುಲಗೂರ, ಸಂತೋಷ ನಾಯ್ಕ್, ವಿಜಯಕುಮಾರ ಕರ್ಣಂ ಹಾಗೂ ಸಾರ್ವಜನಿಕರು ಇದ್ದರು.ರಾಜ್ಯಪಾಲರ ನಡೆ ಅಸಂವಿಧಾನಿಕ: ಹಡಪದ
ಗಜೇಂದ್ರಗಡ: ರಾಜ್ಯಪಾಲರು ಪ್ರತಿವರ್ಷದ ಮೊದಲ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ಮಂತ್ರಿಮಂಡಲ ಸಿದ್ಧಪಡಿಸಿದ ವರದಿ ಓದುವುದು ಸಂವಿಧಾನದಲ್ಲಿದೆ. ಆದರೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಸಂವಿಧಾನದ ವಿಧಿಯಂತೆ ನಡೆದುಕೊಳ್ಳದಿರುವುದು ಅಸಂವಿಧಾನಿಕ, ಸರ್ವಾಧಿಕಾರಿ ನಡೆ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ ಟೀಕಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಂಟಿ ಸದನ ಅಧಿವೇಶನದಲ್ಲಿ ಸರ್ಕಾರದ ಭಾಷಣ ಓದದೆ ತಮ್ಮದೆ ಮಾತುಗಳನ್ನಾಡಿ ನಿರ್ಗಮಿಸಿರುವುದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ರಾಜ್ಯಪಾಲರು, ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವವರೆ ಹೊರತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಂತ್ರಿಮಂಡಲದ ಮೇಲಿನ ಸೂಪರ್ ಮುಖ್ಯಮಂತ್ರಿಯಲ್ಲ. ರಾಜ್ಯಪಾಲರು ಕೇಂದ್ರ ಸರ್ಕಾರದ ಮೂಲಕ ನೇಮಕಗೊಂಡವರು. ಅವರು ಚುನಾಯಿತ ಪ್ರತಿನಿಧಿಗಳು ಅಲ್ಲ. ಬದಲಿಗೆ, ರಾಜ್ಯ ಸರ್ಕಾರವು, ರಾಜ್ಯದ ಜನತೆಯ ಮತದಾನದ ಮೂಲಕ ಆಯ್ಕೆಯಾದ ಜನ ಪ್ರತಿನಿಧಿಗಳಾದ ಶಾಸಕರು, ಅದರಲ್ಲೂ ಬಹುಮತ ಪಡೆದ ಪಕ್ಷದ ಶಾಸಕರು ಸರ್ಕಾರ ರಚನೆಗೆ ತನ್ನ ನಾಯಕನನ್ನು ಆಯ್ಕೆ ಮಾಡಿಕೊಂಡು ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದದ್ದು ಎಂಬುದನ್ನು ಜನತೆ ಗಮನಿಸಬೇಕಾಗಿದೆ.ಬಿಜೆಪಿ ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದೆ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ ಎಂಬುದುನ್ನು ಸೂಚಿಸುತ್ತದೆ ಎಂದಿದ್ದಾರೆ.