ಸುಬ್ರಹ್ಮಣ್ಯ: ಕರ್ನಾಟಕ ಮತ್ತು ಗೋವಾದ ನಡುವೆ ಸಂಪರ್ಕ ವೃದ್ಧಿಯ ದೃಷ್ಟಿಯಿಂದ ಪ್ರಧಾನಮಂತ್ರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯೋಜನೆ ಜಾರಿಗೆ ತಂದಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಘಾಟ್ ಸೆಕ್ಷನ್‌ಲ್ಲಿ ವಿದ್ಯುದ್ದೀಕರಣ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು ಈ ನೂತನ ವ್ಯವಸ್ಥೆಗೆ ಕೂಡಾ ಚಾಲನೆ ನೀಡಲಾಗಿದೆ. ಸುಮಾರು ೧೦೦ ಕೋಟಿ ರು. ಅಧಿಕ ವೆಚ್ಚದಲ್ಲಿ ಅತ್ಯಂತ ಕಷ್ಟಕರವಾದ ಘಾಟ್ ಪ್ರದೇಶದಲ್ಲಿ ವಿದ್ಯುದ್ದೀಕರಣ ವ್ಯವಸ್ಥೆ ನಿರ್ಮಿಸಲಾಗಿದೆ ಎಂದರು.
ಅಮೃತ್ ಭಾರತ್ ಯೋಜನೆಯಡಿಯಲ್ಲಿ ಈ ರೈಲು ನಿಲ್ದಾಣ ಸೇರಿದಂತೆ ದೇಶದ ಹಲವಾರು ರೈಲು ನಿಲ್ದಾಣಗಳು ಮೇಲ್ದರ್ಜೆಗೆ ಏರಿದೆ ಎಂದರು.ಗೌರವಾರ್ಪಣೆ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಚಿವರು ನೆಟ್ಟಣಕ್ಕೆ ಬಂದರು.ಇವರನ್ನು ಚೆಂಡೆ ವಾದನದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪಾರಂಪರಿಕ ಶೈಲಿಯ ನೂತನ ಕಟ್ಟಡ ಇತ್ಯಾದಿಗಳನ್ನು ವೀಕ್ಷಿಸಿದರು. ನಂತರ ನಡೆದ ಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ವಿನಯ ಕುಮಾರ್ ಕಂದಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಅಚ್ಯುತ್ತ ಗೌಡ, ಮಧುಸೂದನ ಕೊಂಬಾರು, ರಮೇಶ್ ಕಲ್ಪುರೆ, ರಾಜೇಶ್ ಎನ್.ಎಸ್ ಸೇರಿದಂತೆ ಸಾರ್ವಜನಿಕರು ಇದ್ದರು.