ಪ್ರಾಥಮಿಕ ಶಿಕ್ಷಣ ಬದುಕಿನ ಅವಿಸ್ಮರಣೀಯ ಅಧ್ಯಾಯ: ಧನಂಜಯ ರಾವ್

KannadaprabhaNewsNetwork |  
Published : Apr 29, 2024, 01:37 AM IST
ಸೇವಾ ಸಂಕಲ್ಪ | Kannada Prabha

ಸಾರಾಂಶ

ಬೆಳ್ತಂಗಡಿ ರೋಟರಿ ಕ್ಲಬ್ ನ ಅದ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಮಾತನಾಡಿ, ಶಾಲೆಗಳ ಅಭಿವೃದ್ಧಿಗೆ ದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬರಬೇಕಾದರೆ ಹಳೆವಿದ್ಯಾರ್ಥಿಗಳು, ಊರವರು ಆಸಕ್ತಿ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರತಿಯೊಬ್ಬರ ಬದುಕಿನ ಅವಿಸ್ಮರಣೀಯ ದಿನಗಳು ಪ್ರಾಥಮಿಕ ಶಾಲೆ ಮತ್ತು ಅಲ್ಲಿನ ಶಿಕ್ಷಣ. ಶಿಕ್ಷಣದಲ್ಲಿ ತಾಯಿ ಪ್ರೀತಿಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರ ಸಿಗಲು ಸಾಧ್ಯ. ಊರಿನ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಕೊಡುಗೆ ಅಗತ್ಯ ಎಂದು ಹಿರಿಯ ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಹೇಳಿದ್ದಾರೆ.

ಭಾನುವಾರ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆ ಬೆಂಗಳೂರು, ರೋಟರಿ ಕ್ಲಬ್ ರಿ ಬೆಳ್ತಂಗಡಿ, ಬದುಕಟ್ಟೋಣ ಸೇವಾ ಟ್ರಸ್ಟ್ ರಿ ಉಜಿರೆ, ಹಳೆ ವಿದ್ಯಾರ್ಥಿ ಸಂಘ ದ.ಕ ಜಿ ಪ ಹಿ ಪ್ರಾ ಶಾಲೆ ಕರ್ನೋಡಿ, ಪತ್ರಕರ್ತರ ಸಂಘ ರಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬದುಕು ಕಟ್ಟೋಣ ತಂಡದ ಸೇವಾ ಸಂಕಲ್ಪ ‘ಅಕ್ಷರ ದೇಗುಲಕ್ಕೆ ಅಕ್ಕರೆಯ ಸೇವೆ’ ಎಂಬಂತೆ ದ.ಕ ಜಿ .ಪಂ.ಹಿ ಪ್ರಾ ಶಾಲೆ ಕರ್ನೋಡಿ ಲಾಯಿಲ ಇದರ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರೋಟರಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ತಾಲೂಕಿನಲ್ಲಿ 2.5 ಕೋಟಿ ರು. ವೆಚ್ಚದಲ್ಲಿ ವಿವಿಧ ರೀತಿಯ ಸೇವಾ ಕಾರ್ಯ ಮಾಡಿದೆ. ಬೆಂಗಳೂರು ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆ 1.5 ಕೋಟಿ ನೆರವನ್ನು ತಾಲೂಕಿಗೆ ನೀಡಿದೆ. ಬದುಕು ಕಟ್ಟೋಣ ತಂಡದ ಹಲವಾರು ಸೇವೆಗಳಲ್ಲಿ ಶಿಕ್ಷಣ ಸೇವೆ ದೇವರು ಮೆಚ್ಚುವ ಸೇವೆಯಾಗಿದೆ. ಇವರು ನಮ್ಮ ಶಾಲೆಯ ಅಭಿವೃದ್ಧಿಗೆ ಮುಂದೆ ಬಂದಿದ್ದು ನಮ್ಮೂರಿನ ಭಾಗ್ಯ ಇವರ ಸೇವೆಗೆ ಹಳೆವಿದ್ಯಾರ್ಥಿಗಳು, ಗ್ರಾಮಸ್ಥರು ಶಕ್ತಿಮೀರಿ ಕೈಜೋಡಿಸಬೇಕು ಎಂದರು.

ಬೆಳ್ತಂಗಡಿ ರೋಟರಿ ಕ್ಲಬ್ ನ ಅದ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಮಾತನಾಡಿ, ಶಾಲೆಗಳ ಅಭಿವೃದ್ಧಿಗೆ ದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬರಬೇಕಾದರೆ ಹಳೆವಿದ್ಯಾರ್ಥಿಗಳು, ಊರವರು ಆಸಕ್ತಿ ವಹಿಸಬೇಕು ಎಂದರು.

ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಪೂರಣ್ ವರ್ಮ, ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಅದ್ಯಕ್ಷ ಸಂತೋಷ್ ಕುಮಾರ್, ಅಧ್ಯಕ್ಷ ಸುರೇಶ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಮಾಜಿ ಸೈನಿಕರ ಸಂಘದ ಅದ್ಯಕ್ಷ ಸುನಿಲ್ ಶೆಣೈ, ಉದ್ಯಮಿ ಅಬ್ದುಲ್ ಕರಿಂ, ಮುಖ್ಯೋಪಾಧ್ಯಾಯ ಜಗನ್ನಾಥ್ , ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷೆ ಸೌಮ್ಯ ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. ಸಹಶಿಕ್ಷಕ ಕ್ರುಷ್ಣಪ್ರಸಾದ್ ಸ್ವಾಗತಿಸಿ, ರುಕ್ಮಯ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ವಂದಿಸಿದರು.ಸರ್ಕಾರಿ ಶಾಲೆ ಅಭಿವೃದ್ಧಿ ಬದುಕುಕಟ್ಟೋಣ ತಂಡದ ಚಿಂತನೆಗೆ ರೋಟರಿ ಕ್ಲಬ್ ಬೆಳ್ತಂಗಡಿ, ಪತ್ರಕರ್ತರ ಸಂಘ ಬೆಳ್ತಂಗಡಿ ಕೈ ಜೋಡಿಸುವ ಮೂಲಕ ಶಕ್ತಿ ತುಂಬಿದೆ. 25 ಸರ್ಕಾರಿ ಶಾಲೆಯ ಅಭಿವೃದ್ಧಿ ನಮ್ಮ ಕನಸು. ನಮ್ಮ ತಂಡವು ಪ್ರತಿಯೊಂದು ಕೆಲಸವನ್ನು ಶ್ರಮದಾನದ ಮೂಲಕ ಮಾಡಲಿದ್ದು ಇದಕ್ಕೆ ಊರವರು, ಊರಿನ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಈಗಾಗಲೇ ಮೂರು ಶಾಲೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಉಜಿರೆ ಹಳೆಪೇಟೆ ಶಾಲೆಯು ಮಾದರಿಯಾಗಿ ದಾಖಲೆ ರೀತಿಯಲ್ಲಿ ಅಭಿವೃದ್ಧಿಯಾಗಿದ್ದು ಇದನ್ನು ಮೇ 23 ರಂದು ಶಿಕ್ಷಣ ತಜ್ಞ ಡಾ ಯಶೋವರ್ಮ ನೆನಪಿನಲ್ಲಿ ಯಶೋವನ ಕಾರ್ಯಕ್ರಮವಾಗಿ ಉದ್ಘಾಟಿಸಲಿದ್ದೇವೆ.

। ಮೋಹನ್ ಕುಮಾರ್, ಸಂಚಾಲಕರು ಬದುಕುಕಟ್ಟೋಣ ತಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!