ರಾಮಾಯಣದಲ್ಲಿನ ಅಂಶಗಳು ಸರ್ವಕಾಲಕ್ಕೂ ಶ್ರೇಷ್ಠ

KannadaprabhaNewsNetwork |  
Published : Oct 08, 2025, 01:01 AM IST
೦೭ ವೈಎಲ್‌ಬಿ ೦೩ಯಲಬುರ್ಗಾದಲ್ಲಿ ಮಹರ್ಷಿ  ವಾಲ್ಮೀಕಿ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ರಾಮಾಯಣ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ

ಯಲಬುರ್ಗಾ: ವಾಲ್ಮೀಕಿ ರಚಿತ ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿತ ಅಂಶಗಳು ಎಂದಿಗೂ ಪ್ರಸ್ತುತವಾಗಿದೆ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ನಿಕಟ ಸಂಪರ್ಕ ಹೊಂದಿದ್ದ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ ಇತ್ತು. ರಾಮಾಯಣ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಭ್ರಾತೃತ್ವ ಭಾವನೆ, ರಾಜನೀತಿ, ಮಾನವೀಯ ಮೌಲ್ಯ, ಪ್ರಜಾಪ್ರಭುತ್ವವನ್ನು ರಾಮಾಯಣದ ಮೂಲಕ ಪರಿಚಯಿಸಿದ್ದಾರೆ ಎಂದರು.

ಪಪಂ ಸದಸ್ಯ ವಸಂತ ಭಾವಿಮನಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿಯಿಂದ ವಾಲ್ಮೀಕಿ ತಪೋವನ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾಧ್ಯಕ್ಷ ಮಾನಪ್ಪ ಪೂಜಾರ, ಪಪಂ ಸದಸ್ಯ ರೇವಣಪ್ಪ ಹಿರೇಕುರುಬರ, ಹನುಮಂತ ಭಜಂತ್ರಿ, ಮುಖ್ಯಾಧಿಕಾರಿ ನಾಗೇಶ, ತಾಪಂ ಇಒ ನೀಲಗಂಗಾ ಬಬಲಾದ, ಪಿಎಸ್ಐ ವಿಜಯ ಪ್ರತಾಪ, ಹನುಮಂತಪ್ಪ ಕುರಿ, ಅಶೋಕ ಮಾಲಿಪಾಟೀಲ್, ಭೀಮಣ್ಣ ಹವಳಿ, ಶ್ರೀಕಾಂತಗೌಡ ಮಾಲಿಪಾಟೀಲ್, ಗುಂಡನಗೌಡ ಸಾಲಭಾವಿ, ಬಸವರಾಜ ಜಂಬಾಳಿ, ಶಂಕ್ರಪ್ಪ ಶಾಖಾಪುರ, ಶಿವಪ್ಪ ಯಲಬುರ್ಗಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಿಂದ ಗುಂತಕಲ್‌ಗೆ ನಿತ್ಯ ನಾಲ್ಕು ರೈಲು ಓಡಿಸಿ
ದೇಗುಲದ ಹುಂಡಿ ಹಣ ಕಳವು ಪ್ರಕರಣ: ಇಬ್ಬರ ಸೆರೆ