ಕಾರಟಗಿ: ಪಟ್ಟಣದ ಬೂದಗುಂಪ ರಸ್ತೆಯ ೨೨ನೇ ವಾರ್ಡ್‌ನ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಸಮಾಜ ಬಾಂಧವರು ಇತರರು ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಶ್ರದ್ಧಾಭಕ್ತಿಯಿಂದ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಬಳಿಕ ಸಮೂದಾಯದ ಮುಖಂಡರಾದ ಶಿವರೆಡ್ಡಿ ನಾಯಕ, ವೀರಭದ್ರಪ್ಪ ಬಡಿಗೇರ, ಪಿಡಿಒ ಡಾ.ವೆಂಕಟೇಶ ಮಾತನಾಡಿ, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಮಹರ್ಷಿ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ. ಶತಕೋಟಿ ಭಾರತೀಯರಿಗೆ ವಾಲ್ಮೀಕಿ ಸದಾ ಪ್ರಾತಃ ಸ್ಮರಣೀಯರು. ವಾಲ್ಮೀಕಿ ಶೋಷಿತ ವರ್ಗದಿಂದ ಬಂದಿರಬಹುದು ಆದರೆ ಅವರು ಜಗದ್ವಂದ್ಯರು. ತಮ್ಮ ಪ್ರತಿಭೆ, ಪಾಂಡಿತ್ಯ ಮಾತ್ರದಿಂದಲೇ ಜಗದ್ವಿಖ್ಯಾತ ಮಹಾಕಾವ್ಯ ರಾಮಾಯಣ ಬರೆದರು ಎಂದರು.ಈ ಸಂದರ್ಭದಲ್ಲಿ ದೊಡ್ಡಬಸವರಾಜ ಬೂದಿ, ಡಾ.ರಾಮಣ್ಣ, ವಿದ್ಯಾಧರಗೌಡ, ಪ್ರದೀಪ ಕೋಲ್ಕಾರ, ಬಸವರಾಜ ಎತ್ತಿನಮನಿ, ಯಮನೂರಪ್ಪ ಮೈಲಾಪೂರ, ಶರಣಪ್ಪ ದಿವಟರ್, ಶರಣಪ್ಪ ಕಾಯಿಗಡ್ಡಿ, ನಾಗರಾಜ ಚನ್ನಳ್ಳಿ, ಭಗವಂತಪ್ಪ, ರವಿ ನೂತಕ್ಕಿ, ದೇವಪ್ಪ, ರಮೇಶ ನಾಯಕ, ಹನಮಂತಪ್ಪ ಡಂಕನಕಲ್, ಲಕ್ಷ್ಮಣ ಬೂದಗುಂಪ, ಹಿರೇದೇವಪ್ಪ ನರೇರ, ಅಂಬಣ್ಣ, ಪರಶುರಾಮ ತಳವಾರ, ವಾಲ್ಮೀಕಿ ಸಮಾಜ ಬಾಂಧವರು ಸೇರಿದಂತೆ ಸಾರ್ವಜನಿಕರು ಇದ್ದರು.
ವಾಲ್ಮೀಕಿ ವೃತ್ತ:ಪಟ್ಟಣದ ವಾಲ್ಮೀಕಿ ವೃತ್ತದದಲ್ಲಿ ತಾಲೂಕಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ವೃತ್ತದಲ್ಲಿ ನಾಮಫಲಕ್ಕೆ ಪೂಜೆ ಸಲ್ಲಿಸಿದ ಬಳಿಕ ತಾಲೂಕಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಅಧ್ಯಕ್ಷರಾದಿಯಾಗಿ ಜನಪ್ರತಿನಿಧಿಗಳು, ಸಮಾಜ ಬಾಂಧವರು ನಾಮಫಲಕ್ಕೆ ಪುಷ್ಪಾರ್ಪಣೆಮಾಡಿ ಗೌರವ ನಮನ ಸಲ್ಲಿಸಿದರು.ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ ಮಾತನಾಡಿ, ಮಹನೀಯರು ನೀಡಿರುವ ಅಮೂಲ್ಯ ಸಂದೇಶ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ನಂತರ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ. ವಾಲ್ಮೀಕಿ ಮಹರ್ಷಿಗಳ ಕಾವ್ಯಗಳು ರಾಮಾಯಣದಲ್ಲಿನ ಮೌಲ್ಯ ಆದರ್ಶ ಸರ್ವಕಾಲಕ್ಕೂ ಜೀವನಕ್ಕೆ ದಾರಿದೀಪವಾಗಿವೆ ಎಂದರು.ವಾಲ್ಮೀಕಿ ಸಮಾಜದ ಮುಖಂಡ ನ್ಯಾಯವಾದಿ ಶಿವರೆಡ್ಡಿ ನಾಯಕ, ಸೋಮನಾಥ ಹೆಬ್ಬಡದ, ನಾಗರಾಜ ಬಿಲ್ಗಾರ್ ಮಾತನಾಡಿ, ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರದ್ದಾಗಿದೆ. ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಗಂಗಮ್ಮ ಚಲವಾದಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಡಾ. ಕೆ.ಎನ್.ಪಾಟೀಲ್, ಬೂದಿ ಗಿರಿಯಪ್ಪ, ಗದ್ದೆಪ್ಪ ನಾಯಕ, ಶೇಖರಪ್ಪ ಗ್ಯಾರೇಜ್, ಕನ್ಹಯ್ಯ, ಶರಣಪ್ಪ, ವೆಂಕಟೇಶ, ಹನುಮಂತಪ್ಪ, ವೆಂಕೋಬ ಕಟ್ಟೆ, ಪ್ರಭುರಾಜ ಬೂದಿ, ರಮೇಶ ಜನೋಔಷಧಿ,ದೇವರಾಜ ನಾಯಕ ಜೂರಟಗಿ, ಮಂಜುನಾಥ ತೊಂಡಿಹಾಳ, ರಮಮೇಶ ನಾಡಿಗೇರ ಸೇರಿದಂತೆ ಇತರರು ಇದ್ದರು.