ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಮರಂದೋಡ ಗ್ರಾಮದ ನಿವಾಸಿ ಮುಕ್ತರ್ ಅಹಮದ್ ಎಂಬವರ ತೋಟದಲ್ಲಿದ್ದ ಅಡ್ಡಾಡಿದ ಕಾಡಾನೆ ಕಾಫಿ, ಬಾಳೆ ಸೇರಿದಂತೆ ಗಿಡಗಳನ್ನು ಹಾನಿ ಮಾಡಿದ್ದಲ್ಲದೆ ಫಸಲು ಭರಿತ ತೆಂಗಿನ ಮರವನ್ನು ಬೀಳಿಸಿ ನಷ್ಟವನ್ನುಂಟು ಮಾಡಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸ್ಥಗಿತಗೊಂಡಿದೆ. ಮನೆಯಂಗಳಕ್ಕೆ ಬಂದಿರುವ ಕಾಡಾನೆಯ ಚಲನವಲನಗಳು ಸಿ ಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
--------------------------------------ನಿಟ್ಟೂರು: ಕರಡಿ ದಾಳಿ, ವ್ಯಕ್ತಿ ಗಂಭೀರ
ಮಡಿಕೇರಿ: ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ ಘಟನೆ ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗಲೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಜಾಗಲೆ ಗ್ರಾಮದ ಪಣಿಯರ ಕುಳ್ಳ ಕರಡಿ ದಾಳಿಗೊಳಗಾದ ವ್ಯಕ್ತಿ. ಅಳಮೇಂಗಡ ಬಿದ್ದಪ್ಪನವರ ಲೈನ್ ಮನೆಯಲ್ಲಿ ವಾಸವಿರುವ ಕುಳ್ಳ ರಾತ್ರಿ ಮೂತ್ರ ವಿಸರ್ಜನೆ ಹೊರಬಂದ ಸಂದರ್ಭ ಕರಡಿ ದಾಳಿ ಮಾಡಿದೆ.ತೀವ್ರ ಗಾಯಗೊಂಡಿರುವ ಇವರನ್ನು ಮೖಸೂರು ಕೆಆರ್ ಅಸ್ಪತ್ರೆಗೆ ದಾಖಲಿಸಲಾಗಿದೆ.