ಚಿಕ್ಕಮಗಳೂರು ಜಿಲ್ಲೆಯ ಆನೆ ಮತ್ತು ಕಾಡು ಪ್ರಾಣಿಗಳ ಸಮಸ್ಯೆಯ ಬಗ್ಗೆ ಶನಿವಾರ ಅರಣ್ಯ ಮಂತ್ರಿ ರಾಮಲಿಂಗ ರೆಡ್ಡಿಯವರ ಗೃಹ ಕಚೇರಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಮಾಡಿ ಚರ್ಚಿಸಿದರು.
ಉಡುಪಿ: ಚಿಕ್ಕಮಗಳೂರು ಜಿಲ್ಲೆಯ ಆನೆ ಮತ್ತು ಕಾಡು ಪ್ರಾಣಿಗಳ ಸಮಸ್ಯೆಯ ಬಗ್ಗೆ ಶನಿವಾರ ಅರಣ್ಯ ಮಂತ್ರಿ ರಾಮಲಿಂಗ ರೆಡ್ಡಿಯವರ ಗೃಹ ಕಚೇರಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಮಾಡಿ ಚರ್ಚಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಪ್ರದೇಶಗಳಲ್ಲಿ ಅವ್ಯಾಹತ ಆನೆ ದಾಳಿಯಿಂದ 50ಕ್ಕೂ ಹೆಚ್ಚು ಜನ ತೊಂದರೆಗೊಳಗಾಗಿದ್ದು, ಇತರ ಜಿಲ್ಲೆಗಳಿಂದ ಆನೆಗಳನ್ನು ಮೂಡಿಗೆರೆ ಮೂಲಕ ಭದ್ರಾ ಅರಣ್ಯ ಪ್ರದೇಶಕ್ಕೆ ಕಳುಹಿಸುವ ಚರ್ಚೆಯನ್ನು ನಿಲ್ಲಿಸಿ, ಆನೆ ನಿಯಂತ್ರಣಕ್ಕೆ ಬದಲಿ ವ್ಯವಸ್ಥೆಯನ್ನು ರೂಪಿಸಬೇಕೆಂದು ಸಂಸದ ಕೋಟ ಸಚಿವರನ್ನು ಆಗ್ರಹಿಸಿದರು. ಈಗಾಗಲೇ ರಾಜ್ಯ ಸರ್ಕಾರದ ಮುಂದಿರುವ ಆನೆ ತಡೆಬೇಲಿ ತುರ್ತಾಗಿ ಅಳವಡಿಸಲು ಕೋರಿಕೆ ಸಲ್ಲಿಸಿದ ಕೋಟ, 30ರಂದು ರಾಜ್ಯ ಸರ್ಕಾರ ಕರೆದ ಸಭೆಯಲ್ಲಿ ದೆಹಲಿಯಲ್ಲಿ ಪಾರ್ಲಿಮೆಂಟ್ ನಡೆಯುವ ಕಾರಣದಿಂದ ಭಾಗವಹಿಸಲಾಗುತ್ತಿಲ್ಲ. ಕಾಡಾನೆ ನಿಯಂತ್ರಣದ ಸಭೆಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ, ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದ್ದರೆ ಕೇಂದ್ರದ ಸಂಪರ್ಕವನ್ನು ಮಾಡೋಣ ಎಂದವರು ಸಚಿವರಿಗೆ ಭರವಸೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.