ಕ್ಯಾಪ್ಟನ್ ಪ್ರಶಾಂತ್ ನೇತೃತ್ವದ ಆನೆ ತಂಡ ಮರಳಿ ದುಬಾರೆಗೆ

KannadaprabhaNewsNetwork |  
Published : Oct 24, 2026, 02:45 AM IST
ದಸರಾ ಮುಗಿಸಿ ಬಂದ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಕೆ | Kannada Prabha

ಸಾರಾಂಶ

ಮೈಸೂರಿನಲ್ಲಿ ನಡೆದ ಯಶಸ್ವಿ ಜಂಬೂ ಸವಾರಿ ಮುಗಿಸಿದ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದ ಆನೆಗಳ ತಂಡ ಮರಳಿ ದುಬಾರೆಗೆ ಆಗಮಿಸಿವೆ.

ಕುಶಾಲನಗರ: ಮೈಸೂರಿನಲ್ಲಿ ನಡೆದ ಯಶಸ್ವಿ ಜಂಬೂ ಸವಾರಿ ಮುಗಿಸಿದ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದ ಆನೆಗಳ ತಂಡ ಮರಳಿ ದುಬಾರೆಗೆ ಆಗಮಿಸಿವೆ.

ಪ್ರಥಮ ಬಾರಿ ಅಂಬಾರಿ ಹೊತ್ತು ವಿಶ್ವದ ಗಮನ ಸೆಳೆದ ದುಬಾರೆಯ ಪ್ರಶಾಂತ್, ಶ್ರೀರಂಗಪಟ್ಟಣದಲ್ಲಿ ನಡೆದ ದಸರಾದ ನೇತೃತ್ವ ವಹಿಸಿದ ಧನಂಜಯ, ತುಮಕೂರು ದಸರಾದ ನೇತೃತ್ವ ವಹಿಸಿದ್ದ ಹಾರಂಗಿ ಶಿಬಿರದ ಲಕ್ಷ್ಮಣ ಸೇರಿದಂತೆ ಗೋಪಿ ಶ್ರೀರಾಮ ಸುಗ್ರೀವ ಹಾಗೂ ಕಾವೇರಿ ಆನೆಗಳು ಮೈಸೂರಿನಿಂದ ದುಬಾರೆ ಶಿಬಿರಕ್ಕೆ ಮೈಸೂರಿನಿಂದ ರಾಜ ಮರ್ಯಾದೆಯೊಂದಿಗೆ ಹಿಂತಿರುಗಿವೆ.ಆ.26ರಂದು ಶಿಬಿರದಿಂದ ಮೈಸೂರಿಗೆ ಮಾವುತ ಕಾವಾಡಿಗರು ಮತ್ತು ಕುಟುಂಬ ಸದಸ್ಯರ ಜೊತೆಗೆ ತೆರಳಿ ಎರಡು ತಿಂಗಳ ಕಾಲ ಮೈಸೂರಿನಲ್ಲಿ ದಸರಾ ಸಂಭ್ರಮದಲ್ಲಿದ್ದ ಆನೆ ಮಾವುತ ಕಾವಡಿಗರ ತಂಡ ಪಿರಿಯಾಪಟ್ಟಣ ಮಾಲ್ದಾರೆ ಮಾರ್ಗವಾಗಿ ಲಾರಿಗಳಲ್ಲಿ ದುಬಾರೆ ಶಿಬಿರಕ್ಕೆ ಆಗಮಿಸಿದ ವೇಳೆ ಅಧಿಕಾರಿ ಸಿಬ್ಬಂದಿ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು