ದೇವನಹಳ್ಳಿ: ರಾಜ್ಯದ ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಪಲಾನುಭವಿಗಳು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ತಿಳಿಸಿದರು.
ತಾಪಂ ಇಒ ಶ್ರೀನಾಥ್‌ಗೌಡ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ೫೦೦೬೯ ಪಡಿತರ ಚೀಟಿದಾರರಿಗೆ ಪ್ರತಿ ಮಾಹೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಅತಿ ಶೀಘ್ರದಲ್ಲೇ ಇಂದಿರಾ ಕಿಟ್ ಜಾರಿಗೆ ಬರಲಿದೆ. ತಾಲೂಕಿನಲ್ಲಿ ಕೆಲವರ ಬಿಪಿಎಲ್ ಕಾರ್ಡ್ ಬದಲಾಗಿದೆ. ಅದಕ್ಕೆ ಪ್ರಮುಖ ಕಾರಣ ಕಾರ್ಡುದಾರರ ಕುಟುಂಬಸ್ಥರು ಆದಾಯ ತೆರಿಗೆ ಪಾವತಿದಾರರಿದ್ದರೆ, ಅವರ ಕುಟುಂಬಸ್ಥರು ಸರ್ಕಾರಿ ಉದ್ಯೋಗದಲ್ಲಿದ್ದರೆ ಅಥವಾ ಪಡಿತರದಾರರು ಜಿಎಸ್‌ಟಿ ನೋಂದಣಿ ಮಾಡಿದ್ದರೆ ಅಂತಹ ಕಾರ್ಡುಗಳು ಬಿಪಿಎಲ್ ಬದಲಾಗಿ ಎಪಿಎಲ್ ಕಾರ್ಡುಗಳಾಗಿ ಬದಲಾಗಿವೆ. ಗೃಹ ಜ್ಯೋತಿಯಲ್ಲಿ ತಾಲೂಕಿನ ೫೬೭ ಕುಟುಂಬಗಳು ಹೊರತುಪಡಿಸಿ ಎಲ್ಲಾ ಕುಟುಂಬಗಳು ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ೬೯೭ ಯುವಕರು ಯುವನಿಧಿ ಪಡೆದುಕೊಳ್ಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಯು ತಾಲೂಕಿನ ಎಲ್ಲಾ ವರ್ಗ ಹಾಗೂ ಪಕ್ಷಾತೀತವಾಗಿ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಪಡಿತರ ಅಂಗಡಿಗಳಲ್ಲಿ ೧೦-೫೦ ರು. ಹಣ ಪಡೆಯುತ್ತಿರುವ ಸಾರ್ವಜನಿಕರು ಆರೋಪಕ್ಕೆ ಪ್ರತಿಕ್ರಿಯಿಸಿದ ಇಒ ಶ್ರೀನಾಥ್‌ಗೌಡ, ಪಡಿತರ ಅಂಗಡಿಗಳಲ್ಲಿ ಹಣ ಪಡೆಯುತ್ತಿದ್ದರೆ ಲಿಖಿತದೂರು ನೀಡಿದರೆ ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.ಸಭೆಯಲ್ಲಿ ಅಣ್ಣೇಶ್ವರ ಗ್ರಾಪಂ ಅಧ್ಯಕ್ಷೆ ಉಮಾ.ಜಿ, ಉಪಾಧ್ಯಕ್ಷ ಮುನಿರಾಜಪ್ಪ, ಪಿಡಿಒ ಗಂಗರಾಜು, ಕಾರ್ಯದರ್ಶಿ ಕೃಷ್ಣಮೂರ್ತಿ, ನಂದಿನಿ, ರೇಣುಕ, ಮಂಜುನಾvಥ್, ಸದಸ್ಯರಾದ ಎ.ಚಂದ್ರಶೇಖರ್, ಎನ್.ಮಂಜುಳ, ವೆಂಕಟೇಶ್, ರುಕ್ಮಿಣಮ್ಮ, ಕೃಷ್ಣಪ್ಪ, ಗೋಪಾಲ, ಜಯಮ್ಮ, ಮುನಿರಾಜು, ಪ್ರಭಾವತಿ, ವಿ.ವೇಣುಗೋಪಾಲ್, ನಳಿನ, ರಾಜಣ್ಣ, ಮುನಿಲಕ್ಷ್ಮಮ್ಮ, ವಿ.ಎಂ.ನಾರಾಯಣಸ್ವಾಮಿ, ಶಿಲ್ಪಾ, ವೆಂಕಟೇಶ್, ಬಿ.ಕೆ.ಮುನಿಯಪ್ಪ, ಲಕ್ಷ್ಮೀ, ವೇಣುಗೋಪಾಲ್, ವಾಣಿಶ್ರೀ, ವಿನೋದ್‌ಕುಮಾರ್ ಮತ್ತಿತರರಿದ್ದರು.
೧೯ ದೇವನಹಳ್ಳಿ ಚಿತ್ರಸುದ್ದಿ: ೧ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿದರು.