ಕನ್ನಡಪ್ರಭ ವಾರ್ತೆ ಮಡಿಕೇರಿ
ಮೊದಲ ಪಂದ್ಯಾಟದಲ್ಲಿ ಎಲೈಟ್ ಸ್ಕ್ವಾಡ್ ಬಿ ಮತ್ತು ಕಾಫಿ ಕ್ರಿಕೆಟರ್ಸ್ ತಂಡದ ನಡುವೆ ನಡೆದ ಪಂದ್ಯಾಟದಲ್ಲಿ ಎಲೈಟ್ ಸ್ಕ್ವಾಡ್ ಬಿ ತಂಡ 8 ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ117 ರನ್ ಗಳಿಸಿತು. ತಂಡದ ಪರ ತಳೂರು ವಿಕ್ಕಿ 19 ಎಸೆತಗಳಲ್ಲಿ 48 ರನ್ ಗಳಿಸಿದರು. ರಾಮ್‌ಸ್ವರೂಪ್ ದೊಡ್ಡಮನೆ 25 ಎಸೆತಗಳಲ್ಲಿ 37 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಎಲೈಟ್ ಸ್ಕ್ವಾಟ್ ಬಿ ತಂಡ 8.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಸಿ ವಿಜಯದ ನಗೆ ಬೀರಿದರು. ಎಲೈಟ್ ತಂಡದ ಪರ ರಾಹುಲ್ 34 ಎಸೆತಗಳಲ್ಲಿ ಅಜೇಯ 73. ರನ್ ಗಳಿಸಿದರು. ಇವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 11 ಬೌಂಡರಿ ಒಳಗೊಂಡಿತು.ಪಂದ್ಯದ ವಿಶೇಷ: ಟೋಟಲ್ ಜಿಪಿಎಲ್ ಸೀಸನ್-2 ಪವರ್ಡ್ ಬೈ ತುಂತುರು ನ ಮೊದಲ ಮಹಿಳಾ ಬೌಲರ್ ಆಗಿ ಎಲೈಟ್ ತಂಡದ ಕಟ್ಟೆಮನೆ ಜಾಹ್ನವಿ ಒಂದು ಓವರ್ ಬೌಲ್ ಮಾಡಿದರು.
ಟಾಸ್ ಗೆದ್ದ ಹಾಕ್ಸ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು.
ಗುರಿ ಬೆನ್ನಟ್ಟಿದ ಕೂರ್ಗ್ ಹಾಕ್ಸ್ ತಂಡ 7 ವಿಕೆಟ್ ನಷ್ಟಕ್ಕೆ 99 ಗಳಿಸಿ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮರಗೋಡಿಯನ್ಸ್ ತಂಡದ ಪರ ಶರ್ವಿನ ಎರಡು ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಿ ಎಲೈಟ್ ಸ್ಕ್ವಾಡ್ ತಂಡ ನಿಗದಿತ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ 109 ರನ್‌ಗಳ ಟಾರ್ಗೆಟ್ ನೀಡಿತು. ರಾಹುಲ್ 25 ಎಸೆತಗಳಿಗೆ 50 ರನ್ ದಾಖಲಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಇವರ ಎರಡನೇ ಅರ್ಧಶತಕ. ಪ್ಲಾಂಟರ್ಸ್ ಕ್ಲಬ್ ತಂಡದ ಪರ ದರ್ಶನ್ ಪರ್ಲಕೋಟಿ 2 ವಿಕೆಟ್ ಪಡೆದರು.
ಇಂದಿನ ಪಂದ್ಯಾಟ: ಬೆಳಗ್ಗೆ 9ಕ್ಕೆ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ v/s ದಿ ಮರಗೋಡಿಯನ್ಸ್, 11ಕ್ಕೆ ದಿ ಎಲೈಟ್ ಸ್ಕ್ವಾಡ್ 2 v/s ಕೂರ್ಗ್ ಹಾಕ್ಸ್, ಅಪರಾಹ್ನ 1ಕ್ಕೆದಿ ಮರಗೋಡಿಯನ್ಸ್ v/s ಕಾಫಿ ಕ್ರಿಕೆಟರ್ಸ್.