ಹೇಮರೆಡ್ಡಿ ಮಲ್ಲಮ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಿ:

KannadaprabhaNewsNetwork |  
Published : May 21, 2024, 12:31 AM IST
ಸ | Kannada Prabha

ಸಾರಾಂಶ

ತಾಲೂಕಿನ ಬಗ್ಗೆವಳ್ಳಿಯಲ್ಲಿ ನಡೆದ ಬಡಗನಾಡು ಶ್ರೀ ಹೇಮರೆಡ್ಡಿ ಮಲ್ಲಮ್ಮ ದಾದ್ವಶ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು ಡಾ.ಚೆನ್ನ ಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಅಜ್ಜಂಪುರಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಡಾ.ಚೆನ್ನ ಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ತಾಲೂಕಿನ ಬಗ್ಗೆವಳ್ಳಿಯಲ್ಲಿ ನಡೆದ ಬಡಗನಾಡು ಶ್ರೀ ಹೇಮರೆಡ್ಡಿ ಮಲ್ಲಮ್ಮ ದಾದ್ವಶ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲಸದಲ್ಲಿ ಮೇಲು ಕೀಳು ಎಂಬುದಿಲ್ಲ, ಮಹಾಭಾರತದಲ್ಲಿ ಶ್ರೀ ಕೃಷ್ಣ ಪರಮಾತ್ಮ ಒಂದು ಸಂದರ್ಭದಲ್ಲಿ ಊಟ ಮಾಡಿದ ಪತ್ರೋಳಿ ತಗೆದು ಸ್ವಚ್ಛ ಮಾಡಿದ ಪ್ರಸಂಗವಿದೆ ಎಂದು ಹೇಳುವುದರ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ನಿವೃತ್ತ ಲಿಫ್ಟಿನೆಂಟ್ ಜನರಲ್ ಬಿ.ಎಸ್ .ರಾಜು ಮಾತನಾಡಿ, ಪ್ರತಿಯೊಂದು ಕುಟುಂಬದಿಂದ ನಮ್ಮ ಭಾರತ ಸೈನ್ಯಕ್ಕೆ ಒಬ್ಬ ವ್ಯಕ್ತಿ ಸೇವೆ ಸಲ್ಲಿಸುವ ಗುರಿ ಹೊಂದಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮರಳು ಸಿದ್ದಪ್ಪನವರು, ಬಗ್ಗವಳ್ಳಿ ಎಂಬ ಗ್ರಾಮಕ್ಕೆ ಈ ಹಿಂದೆ ಭಾರ್ಗವಪುರವೆಂಬ ಹೆಸರಿತ್ತು ಎಂಬುದರ ವಿಚಾರವಾಗಿ ಇದರ ಇತಿಹಾಸದ ಕುರಿತು ವಿವರಿಸಿದರು.

ಡಾ. ಶೇಖರ ಗೌಡ ಮಾಲಿಪಾಟೀಲ್ ವೀರಶೈವ ಸಮುದಾಯ ಲಿಂಗಾಯತ ರೆಡ್ಡಿ ಸಮುದಾಯ ಬೆಂಗಳೂರು ಇವರು ಮಲ್ಲಮ್ಮ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರ ಹಾಗೂ ವೇಮನ ಮೂರ್ತಿ ಭಾವಚಿತ್ರವನ್ನು ಅನಾವರಣಗೊಳಿಸಿದರು.

ಇದೇ ವೇಳೆ ಹೇಮರೆಡ್ಡಿ ಮಲ್ಲಮ್ಮ ಯುವ ಜಾಗೃತ ವೇದಿಕೆಯ ಯುವ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಅನಿಲ್ ಕುಮಾರ್ ಮಾತನಾಡಿದರು. ಈ ವೇಳೆ ಚನ್ನಾಪುರ, ಗೊಂಡೆಹಳ್ಳಿ, ಗೌರಾಪುರ, ನಾಗಪುರ, ಹೆಬ್ಬೂರು, ಅಜ್ಜಂಪುರ, ತರೀಕೆರೆ, ತ್ಯಾಗದಬಾಗಿ ಬೀರೂರು, ಗಿರಿಯಪುರ, ಹಿರೇನಲ್ಲೂರು, ಬಾಸುರು, ಆಡಿಗರಿಯ ಗ್ರಾಮಗಳ ಸಮುದಾಯದ ಕುಲಬಾಂಧವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌