ಕಾಯಕ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ: ಡಿ.ಎಸ್. ಮಾಳಗಿ

KannadaprabhaNewsNetwork |  
Published : Jul 28, 2025, 12:33 AM IST
ಪೊಟೋ ಪೈಲ್ ನೇಮ್ ೨೭ಎಸ್‌ಜಿವಿ೪      ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ತಾಲೂಕಾ ಹಡಪ ಅಪ್ಪಣ್ಣ ಸಂಘದಿAದ ಆಯೋಜಸಲಾದ ೮೯೧ನೇ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವವನ್ನು ಮುಖಂಡರು ಪಟ್ಟಣದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಗಂಜಿಗಟ್ಟಿ ರಮೂರ್ತೇಶ್ವರ ಮಠದ ಡಾ| ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಚಾಲನೆಯನ್ನು ನೀಡಿದರು. | Kannada Prabha

ಸಾರಾಂಶ

, ಹಡಪದ ಅಪ್ಪಣ್ಣನವರ ಆಶಯದಂತೆ ಕಾಯಕ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು.

ಶಿಗ್ಗಾಂವಿ: ವಿಶ್ವಗುರು ಬಸವಣ್ಣನವರ ದೂರದೃಷ್ಟಿಯ ಫಲವಾಗಿ ಎಲ್ಲ ಸಮಾಜಗಳು ಪ್ರಮುಖ ವಾಹಿನಿಯಡಿ ಒಂದುಗೂಡಲು ಸಾಧ್ಯವಾಯಿತು ಎಂದು ಲಿಡ್ಕರ್ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಡಿ.ಎಸ್. ಮಾಳಗಿ ತಿಳಿಸಿದರು.ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ತಾಲೂಕು ಹಡಪದ ಅಪ್ಪಣ್ಣ ಸಂಘದಿಂದ ಆಯೋಜಸಿದ್ದ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹಡಪದ ಅಪ್ಪಣ್ಣನವರ ಆಶಯದಂತೆ ಕಾಯಕ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಜಿಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣನವರ ಮಾತನಾಡಿ, ಸಮಾಜದ ಸಂಘಟನೆಗಳು ಅತ್ಯಂತ ಕ್ರಿಯಾಶೀಲ ಯೋಜನೆಗಳನ್ನು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಪ್ರತಿಯೊಬ್ಬರನ್ನು ಮೇಲೆತ್ತುವ ಕಾರ್ಯಗಳನ್ನು ಮಾಡಬೇಕು. ತಾಲೂಕಿನ ಹಡಪದ ಸಮಾಜ ಇತರ ಸಮಾಜಗಳಿಗೆ ಮಾದರಿಯಾಗಿ ಎಲ್ಲರೊಂದಿಗೆ ಬೆರೆತು ಬಾಳುವ ಮೂಲಕ ಆದರ್ಶವಾಗಿದೆ ಎಂದರು.ಬಿಜೆಪಿ ಮುಖಂಡ ಶಿವಾನಂದ ಮ್ಯಾಗೇರಿ ಮಾತನಾಡಿ, ೧೨ನೇ ಶತಮಾನದ ಶರಣರ ಕ್ರಾಂತಿ ಕಿಚ್ಚು ೨೧ನೇ ಶತಮಾನದ ಬದುಕನ್ನು ಸಾರ್ಥಕ ಮಾಡುತ್ತಿದೆ. ಶರಣ ಹಡಪದ ಅಪ್ಪಣ್ಣನವರ ಆಶಯಗಳನ್ನು ಸಾಕಾರ ಮಾಡುವಂತೆ ಬದುಕಿದಾಗ ಆಚರಿಸುತ್ತಿರುವ ಜಯಂತ್ಯುತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಹಡಪದ ಸಮಾಜದ ಪ್ರತಿಭಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪಟ್ಟಣದ ವಿರಕ್ತಮಠದ ಸಂಗನಬಸವ ಸ್ವಾಮಿಗಳು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಲ್ಲಿಕಾರ್ಜುನ ಹಡಪದ, ಫಕ್ಕೀರಪ್ಪ ಕುಂದೂರ, ಬಸವರಾಜ ಹಡಪದ, ಷಣ್ಮುಖಪ್ಪ ಕಾಯಕದ, ಸುರೇಶ ಕ್ಷೌರದ, ಗುರುಬಸಪ್ಪ ಹಡಪದ, ಮಲ್ಲಪ್ಪ ಹಡಪದ, ಗುಂಡಪ್ಪ ಹಡಪದ, ಬಸನಗೌಡ ಮೇಗಿಲಮನಿ, ಬಸಪ್ಪ ಕ್ಷೌರದ, ಗುರುಬಸಪ್ಪ ಹಡಪದ, ಕಾಳಪ್ಪ ಬಡಿಗೇರ, ಅಣ್ಣಪ್ಪ ಹಡಪದ ಇತರರಿದ್ದರು.ಪಟ್ಟಣದಲ್ಲಿ ಶರಣ ಹಡಪದ ಭಾವಚಿತ್ರದ ಅಪ್ಪಣ್ಣನವರ ಮೆರವಣಿಗೆಗೆ ಅಥಣಿಯ ಅಭಿನವ ಗುರುಲಿಂಗ ಜಂಗಮ ಸ್ವಾಮಿಗಳು ಮತ್ತು ಗಡಿ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಚಾಲನೆ ನೀಡಿದರು. ವಾದ್ಯ ವೈಭಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’