ಧಾರ್ಮಿಕ ಪರಂಪರೆ, ಸೇವಾ ಮನೋಭಾವ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Sep 20, 2026, 03:00 AM IST
ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಧಾರ್ಮಿಕ ಪರಂಪರೆ, ಸಮಾಜ ಸಂಘಟನೆ, ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಭಾರತಕ್ಕೆ ಅದುವೇ ಸಾಂಸ್ಕೃತಿಕ ಮೌಲ್ಯ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಹೇಳಿದರು.

ಹುಬ್ಬಳ್ಳಿ:

ಧಾರ್ಮಿಕ ಪರಂಪರೆ, ಸಮಾಜ ಸಂಘಟನೆ, ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಭಾರತಕ್ಕೆ ಅದುವೇ ಸಾಂಸ್ಕೃತಿಕ ಮೌಲ್ಯ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶ್ರೀಗಜಾನನ ಮಹಾಮಂಡಳ ವತಿಯಿಂದ ಆಯೋಜಿಸಲಾಗಿದ್ದ ಹುಬ್ಬಳ್ಳಿ ಸೇವಾರತ್ನ ಪ್ರಶಸ್ತಿ ಪ್ರದಾನ, 50ಕ್ಕೂ ಹೆಚ್ಚು ಗಜಾನನ ಯುವಕ ಮಂಡಳಿಗಳಿಗೆ "ರಜತ ಗಣಾಧ್ಯಕ್ಷ ಗಜಾನನ ಯುವಕ ಮಂಡಳ " ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಮಹಾಮಂಡಳದ ಅಧ್ಯಕ್ಷ ಡಿ. ರಘು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿಗಳಾದ ಮಹಾದೇವ ಕರಮರಿ, ಗೋವಿಂದ ಜೋಶಿ, ಎಚ್.ಎನ್. ನಂದಕುಮಾರ, ಡಾ. ವಿ.ಎಸ್.ವಿ. ಪ್ರಸಾದ, ಜಿ.ಕೆ. ರತ್ನಕುಮಾರ, ಗೌತಮ ಬಾಫಣಾ, ಜಿತೇಂದ್ರ ಮಜೇಥಿಯಾ, ಪೂರ್ಣಚಂದ್ರ ಘಂಟಸಾಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 50ಕ್ಕೂ ಅಧಿಕ ಗಜಾನನ ಯುವಕ ಮಂಡಳಿಗಳಿಗೆ ರಜತ ಗಣಾಧ್ಯಕ್ಷ ಗಜಾನನ ಯುವಕ ಮಂಡಳ ಪ್ರಶಸ್ತಿ ನೀಡಲಾಯಿತು.

ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ವಿಪ ಸದಸ್ಯ ಲಿಂಗರಾಜ ಪಾಟೀಲ, ಮಹಾಮಂಡಳದ ಪದಾಧಿಕಾರಿಗಳಾದ ರತ್ನ ಗಂಗಣ್ಣವರ, ಸುಮಾ ಹಿರೇಮಠ, ಗಜಾನನ ಯರಕದ, ವೆಂಕಟೇಶ ಬೊಂಗಾಳೆ, ಸಂಗೀತಾ ಬದ್ದಿ, ಪದ್ಮಾವತಿ ಬಾಗಲಕೋಟ, ಮಲ್ಲಿಕಾರ್ಜುನ ಮರ್ಲಿಂಗೌಡರ, ಚನ್ನಪ್ಪ ಸಿ ಎಂ, ಮೋಹನ ಬರುಡೆ, ವಸಂತಾ ಡಂಗನವರ, ಸಂತೋಷ ಖೋದನಪುರ, ಸಿದ್ದರಾಜ ಕುಂದಗೋಳ ಉಪಸ್ಥಿತರಿದ್ದರು. ಸುಹಾಸಿನಿ ದೇಸಾಯಿ ನಿರೂಪಿಸಿದರು. ಗಿರಿಜಾ ಹೂಗಾರ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಗಲು ನಿರಂತರ ೭ ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ
ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿರುವವರ ಪೈಕಿ ನಾನೂ ಒಬ್ಬ-ಸಚಿವ ಲಮಾಣಿ