ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ134ನೇ ಜಯಂತ್ಯುತ್ಸವ ಪ್ರಯುಕ್ತ ಅಂಬೇಡ್ಕರ ಪ್ರತಿಮೆಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು. ದೇಶದ ಮೂಲೆ ಮೂಲೆಗೆ ಸಂಚರಿಸಿ, ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿದರು. ಸ್ವಾತಂತ್ರ್ಯ ಬಂದು 75 ವರ್ಷರ್ಗಳ ನಂತರವೂ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಲು ಅಂಬೇಡ್ಕರ ಅವರ ಮುಂದಾಲೋಚನೆ ಕಾರಣವಾಗಿದೆ ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಶೋಷಿತ ಸಮಾಜಗಳ ಧ್ವನಿಯಾಗಿ ನಿಂತು ಅವರಿಗೆ ಸಮಾನತೆ ಸ್ವಾಭಿಮಾನದ ಬದುಕು ದೊರಕುವಂತೆ ಸ್ವಾಭಿಮಾನದ ಸಂಕೇತವಾಗಿ ಹೋರಾಡಿದರು. ಸ್ವಾತಂತ್ರ ನಂತರ ನಮ್ಮ ದೇಶಕ್ಕೆ ಯಾವ ಕಾನೂನುಗಳನ್ನು ಮಾಡಿ ದೇಶವನ್ನು ಮುನ್ನಡಿಸಬೇಕೆಂದು ಯೋಚಿಸಿ ಸಂವಿಧಾನವನ್ನು ರಚಿಸುವ ಮೂಲಕ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನುರಚಿಸಿದ್ದಾರೆ. ಬಸವಣ್ಣವರು ಸಮಾಜದಲ್ಲಿನ ಅನಿಷ್ಟ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಮಾನತೆಯ ಕನಸು ಕಂಡಿದ್ದರು. ಅವರ ಆಸೆಯದಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಸಮಾನ ಹಕ್ಕು ನೀಡುವ ನೀಡುವ ಮೂಲಕ ಮಾದರಿಯಾದರು. ದಲಿತ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡುವುದಕ್ಕೆ ಮುಂದಾಗಬೇಕು. ಅಂದಾಗ ಮಾತ್ರ ಆ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.ದಲಿತ ಸಾಹಿತಿಗಳಾದ ಪರುಶುರಾಮ ಕೊಣ್ಣೂರ ಹಾಗೂ ಹರೀಶ ನಾಟಿಕಾರ ಪ್ರಾಸ್ಥಾವಿಕವಾಗಿ ಮಾತನಾಡಿ, ವಿಶ್ವದಲ್ಲಿಯೇ ಬಹುತೇಕ ರಾಷ್ಟ್ರಗಳು ಆಗಾಗ ಸಂವಿಧಾನವನ್ನು ಬದಲಾಯಿಸುತ್ತವೆ. ಆದರೆ, ಭಾರತ ಸಂವಿಧಾನ 75ವರ್ಷ ಗತಿಸಿದರು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ನ್ಯಾಯ ಅನ್ನುವ ನಾಲ್ಕು ಕಂಬಗಳು ನಿಂತುಕೊಂಡಿದ್ದಲ್ಲದೇ ಅಂಬೇಡ್ಕರವರ ಸಾಧನೆಯನ್ನು ವಿಶ್ವದ ಎಲ್ಲ ನಾಯಕರು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.