ಮಕ್ಕಳ ಶಿಕ್ಷಣ ಕಲಿಕೆಗೆ ಒತ್ತು ನೀಡಿ: ಸಂತೊಷಕುಮಾರ ದೈವಜ್ಞ

KannadaprabhaNewsNetwork |  
Published : Jun 26, 2024, 12:31 AM IST
ಚಿತ್ತಾಪುರ ನ್ಯಾಯಲಯ ಅವರಣದಲ್ಲಿ ತಾಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಂಸ್ಕಾರ ಪ್ರತಿಷ್ಟಾನ, ಕ್ರೆöÊ ಸಂಸ್ಥೆ, ಮಾರ್ಗದರ್ಶಿ ಸಂಸ್ಥೆ ಜಿಲ್ಲಾ ಬಾಲ ಕಾರ್ಮಿಕ ಯೊಜನ ಸುಸೈಟಿ ಕಲಬುರಗಿ ರವರ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣಿ ಜಾಥ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಧೀಶರಾದ ಸಂತೊಷಕುಮಾರ ದೈವಜ್ಞ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಇಂದಿನ ಮಕ್ಕಳೇ ಮುಂದಿನ ದೇಶದ ಜವಬ್ದಾರಿ ಪ್ರಜೆಗಳಾಗುತ್ತಾರೆ. ಅವರ ಬಾಲ್ಯವನ್ನು ಉತ್ತಮ ಶಿಕ್ಷಣ ನೀಡುವದರ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಪಾಲಕರು ಶ್ರಮಿಸಬೇಕು ಎಂದು ಸಿವಿಲ್ ನ್ಯಾಯಧೀಶ ಸಂತೊಷಕುಮಾರ ದೈವಜ್ಞ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಇಂದಿನ ಮಕ್ಕಳೇ ಮುಂದಿನ ದೇಶದ ಜವಬ್ದಾರಿ ಪ್ರಜೆಗಳಾಗುತ್ತಾರೆ. ಅವರ ಬಾಲ್ಯವನ್ನು ಉತ್ತಮ ಶಿಕ್ಷಣ ನೀಡುವದರ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಪಾಲಕರು ಶ್ರಮಿಸಬೇಕು ಎಂದು ಸಿವಿಲ್ ನ್ಯಾಯಧೀಶ ಸಂತೊಷಕುಮಾರ ದೈವಜ್ಞ ಹೇಳಿದರು.

ಪಟ್ಟಣದ ಕೊರ್ಟ್‌ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಂಸ್ಕಾರ ಪ್ರತಿಷ್ಟಾನ, ಮಾರ್ಗದರ್ಶಿ ಸಂಸ್ಥೆ ಜಿಲ್ಲಾ ಬಾಲ ಕಾರ್ಮಿಕ ಯೊಜನ ಸುಸೈಟಿ ಕಲಬುರಗಿ ರವರ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡದೇ ಪಾಲಕರು ತಮ್ಮ ಮಕ್ಕಳಿಗೆ ಬಾಲ ಕಾರ್ಮಿಕರನ್ನಾಗಿ ಮಾಡಿದರೆ ಅವರ ಮುಂದಿನ ಭವಿಷ್ಯ ಕತ್ತಲೆಯಾಗುವದು ಎಂದು ಹೇಳಿದರು.

ಸರ್ಕಾರವು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಸರ್ಕಾರವು ಉಚಿತ ಶಿಕ್ಷಣ, ಪಠ್ಯ ಪುಸ್ತಕ, ಬಿಸಿಊಟ, ಬಟ್ಟೆ ಸೇರಿದಂತೆ ಹಲವಾರು ಸೌಲಭ್ಯವನ್ನು ನೀಡುತ್ತಿದ್ದು ಇದರ ಪ್ರಯೊಜನವನ್ನು ಪಡೆದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಯೊಜನೆ ಸುಸೈಟಿಯ ಯೊಜನಾ ನಿರ್ದೆಶಕ ಸಂತೊಷ ಕುಲ್ಕರ್ಣಿ, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ಸರ್ಕಾರಿ ಸಹಾಯಕ ಅಭಿಯೊಜಕಿ ಅಂಜನಾದೇವಿ, ಎಎಸ್‌ಐ ಬಲವಂತರೆಡ್ಡಿ, ಕಾರ್ಮಿಕ ನಿರೀಕ್ಷಕ ಶಿವರಾಜ ಪಾಟೀಲ್, ವಿಠಲ್ ಚಿಕಣಿ, ಆನಂದರಾಜ, ನ್ಯಾಯವಾದಿಗಳಾದ ಚಂದ್ರಶೇಖರ ಅವಂಟಿ, ಗಂಗಾಧರ ಸಾಲೀಮಠ, ಎಸ್.ಪಿ ಸಾತನೂರ, ಬಿ.ಬಿ ದೊಡ್ಮನಿ, ಗುರುಬಸಯ್ಯ ಹಿರೆಮಠ, ಈಶ್ವರ ಅಳ್ಳೊಳ್ಳಿ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ