ಬಜೆಟ್‌ ನಲ್ಲಿ ಮುಧೋಳ ನಗರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ಪೌರಾಯುಕ್ತ ಗೋಪಾಲ ಕಾಸೆ

KannadaprabhaNewsNetwork | Published : Jan 31, 2024 2:18 AM

ಸಾರಾಂಶ

ಮುಧೋಳ: ನಗರದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ಹಾಗೂ ತಾವು ನೀಡಿದ ಸಲಹೆಯಂತೆ ಬಜೆಟ್‌ನಲ್ಲಿ ಕಾಯ್ದಿರಿಸುವುದಾಗಿ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಭರಸವೆ ನೀಡಿದರು. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಅನುಮೋದನೆಯಂತೆ ಮಂಗಳವಾರ ಮುಧೋಳ ನಗರಸಭೆಯ 2024-25ನೇ ಸಾಲಿನ ಅಂದಾಜು ಆಯವ್ಯಯ ಪತ್ರಿಕೆ (ಬಜೆಟ್) ತಯಾರಿಕೆಯ ಎರಡನೇ ಸುತ್ತಿನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ನಗರದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ಹಾಗೂ ತಾವು ನೀಡಿದ ಸಲಹೆಯಂತೆ ಬಜೆಟ್‌ನಲ್ಲಿ ಕಾಯ್ದಿರಿಸುವುದಾಗಿ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಭರಸವೆ ನೀಡಿದರು.

ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಅನುಮೋದನೆಯಂತೆ ಮಂಗಳವಾರ ಮುಧೋಳ ನಗರಸಭೆಯ 2024-25ನೇ ಸಾಲಿನ ಅಂದಾಜು ಆಯವ್ಯಯ ಪತ್ರಿಕೆ (ಬಜೆಟ್) ತಯಾರಿಕೆಯ ಎರಡನೇ ಸುತ್ತಿನ ಪೂರ್ವಭಾವಿ ಸಭೆನ್ನುದ್ದೇಶಿಸಿ ಮಾತನಾಡಿದರು. ಜ.22ರಂದು ನಡೆದ ಮೊದಲ ಸುತ್ತಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಗರಸಭೆ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ಸಲಹೆಗಳಂತೆ ನಗರದ ಎಲ್ಲ ವಾರ್ಡ್ ಗಳಲ್ಲಿ ಚರಂಡಿ ಹಾಗೂ ರಸ್ತೆಗಳ ಸ್ವಚ್ಛತೆಗೆ ಹಾಗೂ ರಸ್ತೆ ದುರಸ್ತಿ / ನಿರ್ಮಾಣ ಹಾಗೂ ಚರಂಡಿಗಳ ಮೇಲೆ ಸ್ಯ್ಲಾಬ್ (ಪರಸಿ) ಹಾಕಲು ಕ್ರಮ ಕೈಗೊಳ್ಳಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು.

ಈ ಕುರಿತು ತಯಾರಿಸಿದ ಕರಡು ಬಜೆಟ್‌ನ್ನು ಲೇಖಪಾಲರು ಸಭೆಗೆ ಓದಿ ಹೇಳಿದರು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಸದಸ್ಯರು ಮತನಾಡಿ, ಮುಂಬರುವ ವರ್ಷದಲ್ಲಿ ಬಳ್ಳೂರ, ಹಂಚಿನಾಳ ಪುನರ್ವಸತಿಗಳು ಮುಧೋಳ ನಗರಸಭೆ ವ್ಯಾಪ್ತಿಗೆ ಒಳಪಡುವುದರಿಂದ ಹಾಗೂ ಹದ್ದಿ ವಿಸ್ತರಣೆಯಲ್ಲಿ ಸಕ್ಕರೆ ಕಾರ್ಖಾನೆ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ನಗರಸಭೆಯ ಆದಾಯ ಹೆಚ್ಚಾಗಬಹುದೆಂದು ಅಂದಾಜಿಸಿ ₹ 30 ಲಕ್ಷ ಆದಾಯ ತೆರಿಗೆಯಲ್ಲಿ ಹೆಚ್ಚಳ ಮಾಡಲು ಸಲಹೆ ನೀಡಿದರು, ಅದಕ್ಕೆ ಪೌರಾಯುಕ್ತರು ಆಸ್ತಿ ತೆರಿಗೆಯಲ್ಲಿ ಯು.ಜಿ.ಡಿ ಸೇವಾ ಶುಲ್ಕ ಅಳವಡಿ ಸುವುದಾಗಿ ತಿಳಿಸಿದಾಗ ಸದಸ್ಯ ಗುರುಪಾದ ಕುಳಲಿ ಮಾತನಾಡಿ, ಭಾಗಶಃ ಮಾತ್ರ ಯು.ಜಿ.ಡಿ ಅಳವಡಿಸಲಾಗಿದೆ, ಪೂರ್ಣ ಪ್ರಮಾಣದಲ್ಲಿ ಯು.ಜಿ.ಡಿ ಕೈಗೊಂಡ ನಂತರ ಯು.ಜಿ.ಡಿ ಸೇವಾ ಶುಲ್ಕ ತೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿ ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರಿಗೆ ಆದ್ಯತೆ ಕೊಟ್ಟು ಬೋರವೆಲ್ ಮೋಟಾರ್‌ ಖರೀದಿಸಿ ನೀರು ಸರಬರಾಜು ನಿರ್ವಹಣೆಗೆ ಹೆಚ್ಚಿನ ಮೊತ್ತ ಕಾಯ್ದಿರಿಸುವಂತೆ ಸಲಹೆ ನೀಡಿದರು. ಅದಕ್ಕೆ ಪೌರಾಯುಕ್ತರು ದಿನದ 24 ಗಂಟೆ ನೀರು ಸರಬರಾಜು ಯೋಜನೆಗೆ ₹ 16,800 ಲಕ್ಷಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ನಗರದಲ್ಲಿ ಸಾರ್ವಜನಿಕರಿಗೆ ವ್ಯವಸ್ಥಿತ ಉದ್ಯಾನಗಳು ಇಲ್ಲದೇ ಇರುವುದರಿಂದ ತೊಂದರೆಯಾಗಿದೆಂದು ಸಾರ್ವಜನಿಕರು ಸಭೆಗೆ ತಿಳಿಸಿದಾಗ ಪೌರಾಯುಕ್ತರು ಪ್ರತಿಕ್ರಿಯಿಸಿ, ಕೆ.ಬಿ.ಜೆ.ಎನ್.ಎಲ್.ಎಂ ಇಲಾಖೆಯಿಂದ ನಗರದಲ್ಲಿರುವ ದೊಡ್ಡ ದೊಡ್ಡ ಉದ್ಯಾನಗಳನ್ನು ಗುರುತಿಸಿ ₹ 10 ಕೋಟಿಗೆ ಡಿ.ಪಿ.ಆರ್ ತಯಾರಿಸಿ ಅಭಿವೃದ್ದಿಪಡಿಸಲು ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಮತ್ತು ಉಳಿದ ಉದ್ಯಾನಗಳ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆಗಾಗಿ ಬಜೆಟ್ ನಲ್ಲಿ ಹೆಚ್ಚಿನ ಮೊತ್ತ ಕಾಯ್ದಿರಿಸಲು ಕೋರಿದರು. ಸಾರ್ವಜನಿಕ ಶೌಚಾಲಯ ದುರಸ್ತಿ / ನಿರ್ವಹಣೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಹಾಗೂ ನಗರದ ನಾಲ್ಕು ದಿಕ್ಕುಗಳಿಗೆ ಸ್ವಾಗತ ಕಮಾನ್ ಬೋರ್ಡ್‌ಗಳನ್ನು ಅಳವಡಿಸಲು ಬಜೆಟ್ ನಲ್ಲಿ ಅವಕಾಶ ಕಲ್ಪಿಸಲು ಸಲಹೆ ನೀಡಿದರು. ನಗರದಲ್ಲಿ ಜನದಟ್ಟಣೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥವಾಗುವುದರಿಂದ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವಂತೆ ತಿಳಿಸಿದರು.

Share this article