ತಮ್ಮ ಕುಟುಂಬ ಸಮೇತ ವಾಸವಾಗಿದ್ದ ಮೊದಲನೇ ಸಹೋದರ ಪರಮೇಶ್ ಅವರು ಅನಾರೋಗ್ಯದಿಂದ ಮನೆಯಲ್ಲಿಯೇ ಇದ್ದರು,

ಕನ್ನಡಪ್ರಭ ವಾರ್ತೆ ನಂಜನಗೂಡು ಮೈಸೂರಿನ ಅರಮನೆ ಸಮೀಪದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟದಿಂದ ಮೃತಪಟ್ಟಿದ್ದ ನಂಜನಗೂಡಿನ ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ ಅವರ ಸಾವಿನ ಸುದ್ದಿ ಕೇಳಿ ಅವರ ಸಹೋದರ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಜರುಗಿದೆ. ಪರಮೇಶ್ (55) ಮೃತ ದುರ್ದೈವಿ. ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯಲ್ಲಿ ತಮ್ಮ ಕುಟುಂಬ ಸಮೇತ ವಾಸವಾಗಿದ್ದ ಮೊದಲನೇ ಸಹೋದರ ಪರಮೇಶ್ ಅವರು ಅನಾರೋಗ್ಯದಿಂದ ಮನೆಯಲ್ಲಿಯೇ ಇದ್ದರು, ಅವರಿಗೆ ಹೀಲಿಯಂ ಸಿಲಿಂಡರ್ ಸ್ಫೋಟದಿಂದ ಮೃತಪಟ್ಟಿದ್ದ ಮಂಜುಳಾ ಅವರ ಸಾವಿನ ಸುದ್ದಿಯನ್ನು ತಿಳಿಸಿರಲಿಲ್ಲ, ಶುಕ್ರವಾರ ರಾತ್ರಿ ಮಂಜುಳಾ ಅವರ ಸಾವಿನ ಸುದ್ದಿಯನ್ನು ಕೇಳಿ ಪರಮೇಶ್ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.----------------