ಚಿಕ್ಕಮಗಳೂರುಸಾವಿರಾರು ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ ಮಾಡುವ ಶಿಕ್ಷಕರ ವೃತ್ತಿ ಶ್ರೇಷ್ಠವಾದದು. ಈ ಸವಿನೆನಪನ್ನು ಮರುಸೃಷ್ಟಿಸುವ ಕೆಲಸದಲ್ಲಿ ಹಳೇ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಸಾರ್ಥಕತೆ ತಂದಿದೆ ಎಂದು ನಿವೃತ್ತ ಶಿಕ್ಷಕ ಬಿ.ಸಿ.ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂದನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾವಿರಾರು ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ ಮಾಡುವ ಶಿಕ್ಷಕರ ವೃತ್ತಿ ಶ್ರೇಷ್ಠವಾದದು. ಈ ಸವಿನೆನಪನ್ನು ಮರುಸೃಷ್ಟಿಸುವ ಕೆಲಸದಲ್ಲಿ ಹಳೇ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಸಾರ್ಥಕತೆ ತಂದಿದೆ ಎಂದು ನಿವೃತ್ತ ಶಿಕ್ಷಕ ಬಿ.ಸಿ.ಮಲ್ಲಿಕಾರ್ಜುನಸ್ವಾಮಿ ಹೇಳಿದರು. ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂದನೆ ಹಾಗೂ ಪ್ರೌಢಶಾಲಾ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಅಂದಿನ 90ರ ಇಸವಿಯಲ್ಲಿ ಮಕ್ಕಳಿಗೆ ಶಿಸ್ತು, ಶ್ರದ್ಧೆ ಕಲಿಸಲು ಹಲವಾರು ಶಿಕ್ಷಕರು ಶಾಲಾಮಕ್ಕಳನ್ನು ಸ್ವಂತ ಮಕ್ಕಳಂತೆ ಬುದ್ಧಿ ಕಲಿಸಿದ್ದಾರೆ. ಹಳೇ ಗಾಧೆಯಂತೆ ಬೈದು ಬುದ್ದಿಹೇಳುವವರು ಒಳ್ಳೆಯದು ಬಯಸಿದರೆ, ನಗುತ್ತಲೇ ಹೇಳುವವರು ಕೆಡುಕನ್ನು ಬಯಸುತ್ತಾರೆ. ಅಂದಿನ ಮಕ್ಕಳು ಪೆಟ್ಟು ತಿಂದಿದ್ದಕ್ಕೆ ಇಂದು ರಾಷ್ಟ್ರದ ಉತ್ತಮ ಸತ್ರ್ಪಜೆಗಳಾಗಿದ್ದಾರೆ ಎಂದರು.

ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನಿವೃತ್ತಗೊಂಡರೂ ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿರುವುದರಿಂದ ಆನಂದದ ಕಣ್ಣೀರು ಚಿಮ್ಮಿದೆ. ಹಳೇ ವಿದ್ಯಾರ್ಥಿಗಳ ಮರೆಯಲಾಗದ ಈ ಕ್ಷಣ ಎಲ್ಲವನ್ನು ಮೀರಿಸಿದೆ. ಬಾಲ್ಯದ ಹುಡುಕರನ್ನು ಇಂದು ದೊಡ್ಡವರಾಗಿ ನಮ್ಮ ಮುಂದಿರುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.ನಿವೃತ್ತ ಶಿಕ್ಷಕಿ ಎಲ್.ಎನ್.ಲೀಲಾವತಿ ಮಾತನಾಡಿ ಹಳೇ ವಿದ್ಯಾರ್ಥಿಗಳ ಬಾಲ್ಯದ ಸವಿನೆನಪು ತುಂಬ ಪ್ರೀತಿ ತಂದಿದೆ. ಶಾಲೆಗಳಿಗೆ ಗುರು ಆಗಮಿಸುತ್ತಿದ್ದಂತೆ ಓಡಿಹೋಗಿ ಶಾಲಾ ಕೊಠಡಿಯಲ್ಲಿ ಕುಳಿತುಕೊಳ್ಳುವುದು. ಹೋಂವರ್ಕ್ ಕೆಲವೊಮ್ಮೆ ಮಾಡದಿದ್ದರೂ ತಾವು ದಂಡಿಸುತ್ತಿರಲಿಲ್ಲ. ಆ ಗ್ರಾಮೀಣ ಮಕ್ಕಳ ಮುಗ್ದ ಮನಸ್ಸು ಒಲವು ಹೃದಯವನ್ನು ತಟ್ಟಿದೆ ಎಂದರು.ಅಂತಿಮ ಪರೀಕ್ಷೆಗಳಲ್ಲಿ ಕೆಲವೊಮ್ಮೆ ವಿದ್ಯಾರ್ಥಿಗಳು ಇತರೆ ವಿಷಯಗಳಲ್ಲಿ ಅಂಕ ಕಡಿಮೆಗೊಂಡರೂ ಕನ್ನಡದಲ್ಲಿ ಮಾತ್ರ ಅಧಿಕ ವಿರುತ್ತಿತ್ತು. ೯೦ರ ಇಸವಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಕೆಲವು ಮಕ್ಕಳು ಸೀಮೆಎಣ್ಣೆ ದೀಪದಲ್ಲೇ ವ್ಯಾಸಂಗ ಮಾಡಿದ್ದಾರೆ. ಇವೆಲ್ಲವೂ ಮುಂದಿನ ಮಕ್ಕಳಿಗೆ ಪ್ರೇರಣೆ ಎಂದು ಹೇಳಿದರು.ನಿವೃತ್ತ ಶಿಕ್ಷಕ ಸಿ.ಚಂದ್ರಶೇಖರಯ್ಯ ಮಾತನಾಡಿ ಶಾಲೆಯಲ್ಲಿ ತುಂಟಾಟ, ಕ್ರೀಡಾ ಚಟುವಟಿಕೆಗಳಲ್ಲಿ ಪ್ರ ಶಸ್ತಿ ಗಳಿಸಿರುವುದು, ಶಾಲಾವರಣದಲ್ಲಿ ಶಿಸ್ತಿನ ವಾತಾವರಣ ಸದಾ ಚಿರಸ್ಥಾಯಿ. ಈ ಎಲ್ಲಾ ನೆನಪುಗಳನ್ನು ಮತ್ತೊಮ್ಮೆ ಶಾಲೆಗೆ ಕರೆಸಿ ಗೌರವ ಸಲ್ಲಿಸಿರುವ ಹಳೇ ವಿದ್ಯಾರ್ಥಿಗಳ ಮನಸ್ಸು ಪ್ರೀತಿದಾಯಕ ಎಂದು ತಿಳಿಸಿದರು.ಹಳೇ ವಿದ್ಯಾರ್ಥಿಗಳು ಮಾತನಾಡಿ ಅಂದಿನ ಅನೇಕ ಶಾಲಾ ಶಿಕ್ಷಕರು ಬಹಳಷ್ಟು ಶಿಸ್ತಿನಿಂದ ಕೂಡಿದ್ದರೂ ಆ ಕಾಲದ ಶಿಸ್ತೇ ಇಂದು ಬುದ್ದಿವಂತರಾಗಲು ಸಾಧ್ಯವಾಗಿದೆ. ವಿಶೇಷವಾಗಿ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸಲು ಕನ್ನಡ ಶಿಕ್ಷಕಿ ಕೊಡುಗೆ ಅಪಾರವಿದೆ. ಅವರ ಬೋಧನೆಯೇ ನಮ್ಮಗೆಲ್ಲ ಸ್ಪೂರ್ತಿ ತಂದಿದೆ ಎಂದು ಸಂತೋಷ ಹಂಚಿಕೊಂಡರು.ಇದೇ ವೇಳೆ ನಿವೃತ್ತ ಶಿಕ್ಷಕರಾದ ಎಂ.ಎಸ್.ಶಿವಪ್ಪ, ಬಿ.ಸಿ.ಮಲ್ಲಿಕಾರ್ಜನ್, ಎಲ್.ಎನ್.ಲೀಲಾವತಿ, ಅಂ ಜುಮಾನ್ ಬಾನು, ಸಿ.ಚಂದ್ರಶೇಖರಯ್ಯ, ಜಾವೀದ್ ಅವರಿಗೆ ಹಳೇ ವಿದ್ಯಾರ್ಥಿಗಳು ನೆನಪಿನ ಕಾಣಿಕೆ, ಹ ಣ್ಣು ಹಂಪಲು ನೀಡುವ ಮೂಲಕ ಗೌರವ ಸಮರ್ಪಿಸಿದರು. ಬಳಿಕ ಹಳೇ ವಿದ್ಯಾರ್ಥಿಗಳಿಂದ ಊಟದ ವ್ಯವಸ್ಥೆ ಮಾಡಲಾ ಯಿತು.ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡ ದಾನಿ ಎಚ್.ಆರ್.ಗುರುನಾಥೇಗೌಡ, ಜಿಲ್ಲಾ ಉಸ್ತುವರಿ ಸಚಿವ ಆಪ್ತ ಸಹಾಯಕ ಕೆ.ಬಿ. ಮೊಗಯ್ಯ, ಎ.ಎಲ್.ಟಿ.ಎಂ. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಬಿ.ಚಂದ್ರೇಗೌಡ, ಕಾಲೇಜು ಅಭೀವೃದ್ಧಿ ಸದಸ್ಯರಾದ ಪೂರ್ಣೇಶ್, ಹಳೇ ವಿದ್ಯಾರ್ಥಿ ಅಬ್ದುಲ್ ಕರೀಂ, ಸುನೀಲ್‌ಕುಮಾರ್, ಮುಳ್ಳೇಶ್, ಪ್ರತಿಮಾ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಚಂದ್ರ ಉಪಸ್ಥಿತರಿ ದ್ದರು. ಹಳೇ ವಿದ್ಯಾರ್ಥಿ ಗಳಾದ ಡೇವಿಡ್ , ಮಹಮ್ಮದ್ ಖತೀಬ್, ಡಾ.ಕೆ.ಎಂ. ಮಂಜುನಾಥ, ಎಂ.ಎಸ್.ಪುಷ್ಪ ಇದ್ದರು.