ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನ ಹೋಳೆ ಯೋಜನೆಯ ಮೂಲಕ ಈಗಾಗಲೇ ತಾಲೂಕಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸಮಗ್ರ ನೀರಾವರಿಗೆ ಒತ್ತು ನೀಡಿದ್ದು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನ ಹೋಳೆ ಯೋಜನೆಯ ಮೂಲಕ ಈಗಾಗಲೇ ತಾಲೂಕಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸಮಗ್ರ ನೀರಾವರಿಗೆ ಒತ್ತು ನೀಡಿದ್ದು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಾಲೂಕಿನ ಕೊಡಲಾಗರ ಕೆರೆ ಹಾಗೂ ಚುಂಗನಹಳ್ಳಿ ಕೆರೆಗಳು ಹೇಮಾವತಿ ನೀರಿನಿಂದ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಬರಗಾಲದಲ್ಲಿ ನೀರಿಗಾಗಿ ಪರದಾಡುವಂತಾಗುತ್ತಿತ್ತು ಅದರೆ ಸಾಸಲು, ಶೆಟ್ಟಿಕೆರೆ, ದಬ್ಬೇಘಟ್ಟ, ಕೊಡಲಾಗರ , ಚುಂಗನಹಳ್ಳಿ ಭಾಗಕ್ಕೆ ಈ ಬಾರಿ ನೀರು ಹೇಮಾವತಿ ನೀರು ಹರಿಯುತ್ತಿರುವದು ಈ ಭಾಗದಲ್ಲಿ ಸ್ವಲ್ಪ ನೆಮ್ಮದಿ ನೀಡಿದೆ. ರೈತರ ಜಮೀನಿನಲ್ಲಿರುವಂತಹ ಬೋರ್‌ಗಳ ಅಂತರ್ಜಲ ಮಟ್ಟ ಹೆಚ್ಚಾವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಇದೇ ರೀತಿ ಈ ಹೇಮಾವತಿ ಯೋಜನೆಯಿಂದ ಮುಂದಿದಿನಗಳಲ್ಲಿ ಚಿಕ್ಕನಾಯಕನಹಳ್ಳಿ, ಕಂದಿಕೆರೆ ಸಾದರಹಳ್ಳಿ, ಹಾಗೂ ಪಟ್ಟದೆವರಕೆರೆ ಭಾಗಕ್ಕೂ ಹರಿಸುವಂತಹ ಕಾಮಗಾರಿ ನಡೆಯುತ್ತಿದೆ. ಹಾಗೂ ಭದ್ರ ಮೇಲ್ದಂಡೆ ಯೋಜನೆಯ ಮೂಲಕ ಹಂದನಕೆರೆ ಭಾಗಕ್ಕೂ ನೀರನ್ನು ಹರಿಸುವುದು, ಇದರೊಂದಿಗೆ ಎತ್ತಿನ ಹೊಳೆಯ ನೀರನ್ನು ಹರಿಸುವ ಮೂಲಕ ಕೆರೆಗಳನ್ನು ತುಂಬಿಸಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡ ತರಬೇನಹಳ್ಳಿ ಷಡಾಕ್ಷರಿ, ನಿವೃತ್ತ ಪೊಲೀಸ್‌ಅಧಿಕಾರಿ ಶಂಕರೇಶ ಮುಖಂಡರುಗಳಾದ ವಿನಯ್, ಶಿವಪ್ರಸಾದ್, ಭಾನುಪ್ರಕಾಶ್, ರಾಮಲಿಂಗಯ್ಯ, ದಯಾನಂದ್ ಹಾಗೂ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.