Protest demanding a change in rural transport bus timings.
ತೀರ್ಥಹಳ್ಳಿ: ಹೊಸನಗರ ತಾಲೂಕಿನ ನಗರ ಭಾಗದಿಂದ ತೀರ್ಥಹಳ್ಳಿಗೆ ಆಗಮಿಸುವ ಗ್ರಾಮೀಣ ಸಾರಿಗೆ ಸರ್ಕಾರಿ ಬಸ್ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ.
ನಮಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ರಸ್ತೆ ಮಧ್ಯೆದಲ್ಲೇ ಕುಳಿತು ಪ್ರತಿಭಟನೆ ನಡೆಸಿದಂತಹ ಘಟನೆ ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಬಳಿ ನಡೆದಿದೆ.ನಗರದಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀರ್ಥಹಳ್ಳಿಯ ಬೇರೆ ಬೇರೆ ಶಾಲೆ -ಕಾಲೇಜುಗಳಿಗೆ ಆಗಮಿಸುತ್ತಿದ್ದು,
ನಗರದಿಂದ ಹೊರಡುವ ಬಸ್ ತೀರ್ಥಹಳ್ಳಿಗೆ 10.30ಕ್ಕೆ ಬರುತ್ತಿದೆ. ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ನಗರದಿಂದ 8.30ಕ್ಕೆ ಹೊರಟು ತೀರ್ಥಹಳ್ಳಿಗೆ 9:30ಕ್ಕೆ ಬರುವಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.ಪ್ರತಿಭಟನಾ ವಿದ್ಯಾರ್ಥಿನಿ ಮಾತನಾಡಿ, ಈಗ ಬರುತ್ತಿರುವ ಬಸ್ ಸಮಯದಲ್ಲಿ ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ.
ಬಸ್ ಸಮಯದಲ್ಲಿ ಬದಲಾವಣೆ ಮಾಡಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಮತ್ತೊಂದು ಬಸ್ ಓಡಾಡುವಂತೆ ಮಾಡಬೇಕೆಂದು ತಿಳಿಸಿದ್ದಾರೆ. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಜೊತೆಗೆ ಪೋಷಕರು, ಶಿಕ್ಷಕರು ಇದ್ದರು.ಫೋಟೋ: 11 ಟಿಟಿಎಚ್ 05
ಗ್ರಾಮೀಣ ಸಾರಿಗೆ ಬಸ್ ಸಮಯ ಬದಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ರಸ್ತೆಯಲ್ಲಿ ಧರಣಿ ನಡೆಸಿದರು.