ಕನ್ನಡಪ್ರಭ ವಾರ್ತೆ ಕೋಲಾರ
ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡ ವಲ್ಲಬಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಕಳೆದ ಎರಡು ವರ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರದಿಂದ ನೂರಾರು ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದೆ ಎಂದರು.
ಸರ್ಕಾರದಿಂದ ಬಂಪರ್ ಕೊಡುಗೆ:ಹಲವು ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡಿವೆ ಇನ್ನು ಕೆಲವು ಕಾಮಗಾರಿಗಳು ಶೇ.೫೦ರಷ್ಟು ಪೂರ್ಣಗೊಂಡಿವೆ. ಕಾಂಗ್ರೆಸ್ ಸರ್ಕಾರಕ್ಕೆ ಇರುವ ಮೂರು ವರ್ಷದ ಅವಧಿಯಲ್ಲಿ ಕೋಲಾರ ವಿಧಾಸಭಾ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಾಗುವುದು, ಕೋಲಾರ ಜಿಲ್ಲೆಯ ಜನತೆಯ ಆಸೆಯಂತೆ ಕೋಲಾರಕ್ಕೆ ರಾಜ್ಯ ಸರ್ಕಾರ ಬಂಪರ್ ಕೊಡುಗೆಗಳನ್ನು ನೀಡಿದೆ ಎಂದರು.
ಸ್ಥಳ ನೀಡಿದ ದಾನಿಗೆ ಸನ್ಮಾನ:
ಶ್ರೀನಿವಾಸಪುರ ಮುಖ್ಯ ರಸ್ತೆಯಿಂದ ಅಂಬೇಡ್ಕರ್ ನಗರ ಬಾರಂಡಡಳ್ಳಿ ಹೂದಲವಾಡಿ ಮಣಿಘಟ್ಟ ರಸ್ತೆ ಡಾಂಬರೀಕರಣ ಕಾಮಗಾರಿ ೧೭೫ ಲಕ್ಷ, ಮಾಲೂರು ಮುಖ್ಯ ರಸ್ತೆಯಿಂದ, ವಿಜಯನಗರ ಪವನ್ ಕಾಲೇಜ್ ಸರ್ವಿಸ್ ರಸ್ತೆ ಡಾಂಬರೀಕರಣ ಕಾಮಗಾರಿ ೧೭೫ ಲಕ್ಷ, ಕೋಲಾರ ತಾಲೂಕು ಮುದುವತ್ತಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ೪೦ ಲಕ್ಷ, ಕೋಲಾರ ತಾಲೂಕು ವಕ್ಕಲೇರಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಮೈಲಾಂಡಳ್ಳಿಯಿಂದ ಬಣಕನಹಳ್ಳಿ ಕೂತಾಂಡಹಳ್ಳಿಯಿಂದ ಅಲಹಳ್ಳಿ ಮೂಲಕ ಮಾಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಹಾಗೂ ಸಿ.ಸಿ ರಸ್ತೆ ಕಾಮಗಾರಿ ೪೯೫ ಲಕ್ಷ, ಕೋಲಾರ ತಾಲೂಕು ಸೂಲೂರು ಗ್ರಾಪಂ ಕಟ್ಟಡ ಮೊದಲನೇ ಮಹಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆ, ಕೋಲಾರ ತಾಲೂಕು ರಾಜಕಲ್ಲಳ್ಳಿ ಪಶು ವೈದ್ಯಕೀಯ ಆಸ್ಪತ್ರೆ ಭೂಮಿ ಪೂಜೆ ೪೯.೯೫ ಲಕ್ಷ. ಗುದ್ದಲಿ ಪೂಜೆ ಶಾಸಕ ಕೊತ್ತೂರು ಜಿ.ಮಂಜುನಾಥ್ ನೆರವೇರಿಸಿದರು.