ಧಾರ್ಮಿಕತೆ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡಿ

KannadaprabhaNewsNetwork |  
Published : Jun 23, 2025, 11:48 PM IST
ಫೋಟೋ 23ಪಿವಿಡಿ1ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವ ಜಯಂತಿ,ಶ್ರೀ ರೇಣುಕಾಚಾರ್ಯ ಯುಗಮಾನೋತ್ಸವ,ಸೇವಾದೀಕ್ಷಾ ಮತ್ತು ಪ್ರತಿಭಾಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆಯನ್ನು ಸಿದ್ದರಬೆಟ್ಟ ಪೀಠದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ,ರಾಮಮೂರ್ತಿ ಸ್ವಾಮೀಜಿ ಉದ್ಘಾಟಿಸಿದರು.ಫೋಟೋ 23ಪಿವಿಡಿ2ಪಲ್ಲಕಿಯಲ್ಲಿ ಬಸವೇಶ್ವರ ಭಾವಚಿತ್ರದೊಂದಿಗೆ ಪೂರ್ಣಕುಂಭದ ಜೊತೆ ವೀರಗಾಸೆ ವಾದ್ಯದ ಮೆರೆವಣಿಗೆ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.ಫೋಟೋ 23ಪಿವಿಡಿ3ಸಮಾರಂಭದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಧಾರ್ಮಿಕ ಶ್ರದ್ಧೆ ರೂಢಿಸಿಕೊಳ್ಳುವ ಜೊತೆಗೆ ಶಿಕ್ಷಣ ಒತ್ತು ನೀಡಿ ಸಾಮಾಜಿಕ ಪ್ರಗತಿ ಕಾಣುವಂತೆ ಸಿದ್ಧರಬೆಟ್ಟ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಾಲೂಕಿನ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಕರೆ ನೀಡಿದರು.

ಕನ್ನಡಪ್ರಭವಾರ್ತೆ ಪಾವಗಡ ಧಾರ್ಮಿಕ ಶ್ರದ್ಧೆ ರೂಢಿಸಿಕೊಳ್ಳುವ ಜೊತೆಗೆ ಶಿಕ್ಷಣ ಒತ್ತು ನೀಡಿ ಸಾಮಾಜಿಕ ಪ್ರಗತಿ ಕಾಣುವಂತೆ ಸಿದ್ಧರಬೆಟ್ಟ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಾಲೂಕಿನ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಕರೆ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ತಾಲೂಕು ಘಟಕದ ವತಿಯಿಂದ ಪಟ್ಟಣದ ಎಸ್ಎಸ್ ಎಸ್‌ ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಯುಗಮಾನೋತ್ಸವ, ಶ್ರೀ ಬಸವ ಜಯಂತಿ, ಶ್ರೀ ಸೇವಾದೀಕ್ಷಾ ಮತ್ತು ಪ್ರತಿಭಾಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ,ಉದ್ಘಾಟನೆ ನೆರೆವೇರಿಸಿದ ಬಳಿಕ ಮಾತನಾಡಿದರು.12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣ ಅವರ ವಚನ ಸಾಹಿತ್ಯ ಉಲ್ಲೇಖಿಸಿ,ದಯಯೇ ಧರ್ಮದ ಮೂಲ. ದಯೆ ಹಾಗೂ ಧರ್ಮ ಸಂದೇಶದಿಂದ ವಿಶ್ವದ ಶಾಂತಿ ನೆಲೆಸಲು ಸಾಧ್ಯ. ಲಿಂಗಪೂಜೆ ಅತ್ಯಂತ ಮಹತ್ವ ಪಡೆದಿದ್ದು, ಇಷ್ಟಲಿಂಗ ಪೂಜೆಯಿಂದ ಮನಸ್ಸು ಶುದ್ಧಿಕರಣದ ಜತೆ ಇಷ್ಟಾರ್ಥ ಸಿದ್ದಿಯಾಗಲಿದೆ. ಒಳ್ಳೆಯ ಮನಸ್ಸಿನಿಂದ ಮಾಡಿದ ಕಾರ್ಯದಲ್ಲಿ ಸಫಲತೆ ಕಾಣಲಿದ್ದು, ವಿದ್ಯಾಬ್ಯಾಸದ ಜತೆಗೆ ಉತ್ತಮ ಜ್ಞಾನ ವೃದ್ದಿಕೊಳ್ಳುವ ಮೂಲಕ ಸಾಸ್ವ ಕಾಪಾಡಬೇಕು. ತಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ರೂಪಿಸಿ ಸಮಾಜದ ಪ್ರಗತಿ ಕಾಣುವಂತೆ ಸಲಹೆ ನೀಡಿದರು. ವೀರಶೈವ ಲಿಂಗಾಯಿತ ಸಮಾಜದ ಪ್ರಗತಿಗೆ ಕಂಕಣ ಬದ್ದರಾಗಬೇಕು. ಪಟ್ಟಣದಲ್ಲಿ ಭವನ ನಿರ್ಮಾಣಕ್ಕೆ ನಿವೇಶನ ಗುರ್ತಿಸಿದ್ದು ಖರೀದಿಸಬೇಕಿದೆ. ಹೀಗಾಗಿ ತನುಮನ ಧನದೊಂದಿಗೆ ಸಹಾಯಸ್ತಕ್ಕೆ ಮುಂದಾಗುವಂತೆ ಸಲಹೆ ನೀಡಿದರು. ಸಮಾರಂಭ ಆಯೋಜನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಸಮಾಜದ ಮುಖಂಡರನ್ನು ಅಭಿನಂದಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ, ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸದೃಢ ಸಮಾಜ ಕಟ್ಟುಬೇಕು. ಈ ಪರಿಪ್ರಮಾಣದಲ್ಲಿ ಸಮಾಜ ಒಂದೆಡೆ ಸೇರಿದ್ದ ಸಂತಸ ತಂದಿದೆ ಎಂದರು. ವೀರಶೈವ ಲಿಂಗಾಯಿತ ಮಹಾ ಸಭಾದ ತಾಲೂಕು ಅಧ್ಯಕ್ಷ ಅಂತರಗಂಗೆ ಶಂಕರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಪ್ರಗತಿಗೆ ಎಲ್ಲರು ಸಂಘಟಿತರಾಗಬೇಕು. ಸಮಾಜಕ್ಕೆ ಒಂದು ಆಸ್ತಿ ಮಾಡಬೇಕಿದ್ದು, ಈಗಾಗಲೇ ನಿವೇಶನ ಗುರ್ತಿಸಲಾಗಿದೆ ಎಂದರು.

ಸರ್ವ ಧರ್ಮ ಶಾಂತಿ ಪೀಠದ ಅಧ್ಯಕ್ಷ ಪಾವಗಡದ ರಾಮಮೂರ್ತಿ ಸ್ವಾಮೀಜಿ , ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ಧರಾಮಯ್ಯ ಬ್ಯಾಡನೂರು ಚನ್ನಬಸವಣ್ಣ, ಆರ್.ಮುರುಗೇಂದ್ರಪ್ಪ ಎಂ.ಜಿ.ಸಿದ್ದರಾಮಯ್ಯ, ಅರಸೀಕೆರೆ ಎ.ಪಿ.ಮಲ್ಲಿಕಾರ್ಜುನ, ಪ್ರಸನ್ನ ಸ್ವಾಮಿ, ಕೆ.ವಿ.ಮಧುಸೂಧನ್, ಬಸವರಾಜು, ಮಲ್ಲೇಶ್, ಡಾ ಎ.ಎಂ.ಶಿವಕುಮಾರ್, ವಾಗೀಶ್, ಶಿವಕುಮಾರ್, ಶಿವರುದ್ರಪ್ಪ, ಶ್ರೀಧರ್ ರಂಗಸಮುದ್ರ, ರೇಣುಕಾಪ್ರಸಾದ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಡಾ.ಕೆ.ಎಲ್. ದರ್ಶನ್ , ತ್ರಿವೇಣಿ, ಕೆ.ಟಿ. ಶಿವಕುಮಾರ್, ಮಂಜುನಾಥ, ಮಹಲಿಂಗಪ್ಪ, ವೈ. ಮಂಜುಳಾ, ಮಹಾಂತೇಶ, ರುದ್ರಮ್ಮ ರುದ್ರಮುನಿ, ಕವಿತಾ ಪ್ರಕಾಶ್ ಶ್ರೀಪ್ರೆಸ್ಎಚ್.ಬಿ., ಬಸವರಾಜಪ್ಪ, ಇತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?
ದೇಶ ಉಳಿಸಲು 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಿದೆ : ಡಿಕೆಶಿ